ವಿದೇಶಿಗರನ್ನ ಹಿಂದಿಕ್ಕಿದ ಭಾರತೀಯ ಆಟಗಾರರು; ಐಪಿಎಲ್ 2025 ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಟಾಪ್ 5 ಕ್ರಿಕೆಟರ್ಸ್ ಫೋಟೊಸ್
- ಹಿಂದಿನ ಐಪಿಎಲ್ ಹರಾಜಿನ ದಾಖಲೆಯನ್ನು ಭಾರತೀಯ ಕ್ರಿಕೆಟರ್ ಗಳು ಬ್ರೇಕ್ ಮಾಡಿದ್ದಾರೆ. 2024ರ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿಗೆ ಕೆಕೆಆರ್ ಖರೀಸಿತ್ತು. ಆಸೀಸ್ ನ ಮತ್ತೊಬ್ಬ ವೇಗಿ ಪ್ಯಾಟ್ ಕಮ್ಮಿನ್ಸ್ ಗೆ 20.5 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ 2025ರ ಹರಾಜಿನಲ್ಲಿ ಭಾರತೀಯ ಆಟಗಾರರು ಇವರ ದಾಖಲೆಯನ್ನು ಮುರಿದಿದ್ದಾರೆ.
- ಹಿಂದಿನ ಐಪಿಎಲ್ ಹರಾಜಿನ ದಾಖಲೆಯನ್ನು ಭಾರತೀಯ ಕ್ರಿಕೆಟರ್ ಗಳು ಬ್ರೇಕ್ ಮಾಡಿದ್ದಾರೆ. 2024ರ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿಗೆ ಕೆಕೆಆರ್ ಖರೀಸಿತ್ತು. ಆಸೀಸ್ ನ ಮತ್ತೊಬ್ಬ ವೇಗಿ ಪ್ಯಾಟ್ ಕಮ್ಮಿನ್ಸ್ ಗೆ 20.5 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ 2025ರ ಹರಾಜಿನಲ್ಲಿ ಭಾರತೀಯ ಆಟಗಾರರು ಇವರ ದಾಖಲೆಯನ್ನು ಮುರಿದಿದ್ದಾರೆ.
(1 / 9)
2025ರ ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆದ ಐದು ಆಟಗಾರರು ಭಾರತದವರು ಎಂಬುದು ವಿಶೇಷ. 2024ರ ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರು ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದರು. ಈ ಬಾರಿ ಭಾರತೀಯ ಆಟಗಾರರು ಕಮಾಲ್ ಮಾಡಿದ್ದಾರೆ. ಆ ಟಾಪ್ ಐವರು ಆಟಗಾರರು ಮತ್ತು ಪಡೆದಿರುವ ಮೊತ್ತದ ವಿವರ ಇಲ್ಲಿದೆ.
(2 / 9)
ಸ್ಪಿನ್ ಖ್ಯಾತಿಯ ಯುಜ್ವೇಂದ್ರ ಚಾಹಲ್ 2025ರ ಹರಾಜಿನಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿಗೆ ಪಂಜಾಬ್ ಪಾಲಾಗಿದ್ದಾರೆ. ಆ ಮೂಲಕ ಇವರ ಈ ವರ್ಷದ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆದ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
(3 / 9)
2025ರ ಐಪಿಎಲ್ ಹರಾಜಿನಲ್ಲಿ ತಂಡವೊಂದಕ್ಕೆ ಬಿಕರಿಯಾದ ಮೊದಲ ಆಟಗಾರ ಅರ್ಷದೀಪ್ ಸಿಂಗ್. ಇವರನ್ನು ಪಂಜಾಬ್ 18 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಅತಿ ಹೆಚ್ಚು ಮೊತ್ತ ಪಡೆದ ಈ ಸಾಲಿನ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
(4 / 9)
ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡ 23.75 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಅತಿ ಹೆಚ್ಚು ಮೊತ್ತ ಪಡೆದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
(5 / 9)
ಟೀಂ ಇಂಡಿಯಾದ ಮೊತ್ತಬ್ಬ ಆಟಗಾರ ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಗೆ ಪಂಜಾಬ್ ಪಾಲಾಗಿದ್ದಾರೆ. 2025ನೇ ಸಾಲಿನ ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಅಗ್ರ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
(6 / 9)
ರಿಷಭ್ ಪಂತ್ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಬರೋಬ್ಬರಿ 27 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಆ ಮೂಲಕ ಇವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
(7 / 9)
ಇಂಗ್ಲೆಂಡ್ ತಂಡದ ಆಟಗಾರ ಜೋಸ್ ಬಟ್ಲರ್ ಅವರನ್ನು 15.75 ಕೋಟಿ ರೂಪಾಯಿ ಗುಜರಾತ್ ಟೈಟಾನ್ ಖರೀದಿ ಮಾಡಿದೆ. ಅತಿ ಹೆಚ್ಚು ಮೂತ್ತ ಪಡೆದ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.(AFP)
(8 / 9)
ಕನ್ನಡಿಗ ಕೆಎಲ್ ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿ ಮಾಡುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಸುಳ್ಳಾಯಿತು. ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂಪಾಯಿಗೆ ಐಪಿಎಲ್ ಹರಾಜಿನಲ್ಲಿ ಖರೀದಿ ಮಾಡಿದೆ. ಅತಿ ಹೆಚ್ಚು ಮೊತ್ತ ಪಡೆದ ಆಟಗಾರರ ಪಟ್ಟಿಯಲ್ಲಿ ರಾಹುಲ್ 7ನೇ ಸ್ಥಾನದಲ್ಲಿದ್ದಾರೆ.(PTI)
ಇತರ ಗ್ಯಾಲರಿಗಳು