IPL 2024: ಮೋಹಿತ್ ಶರ್ಮಾಗೆ ಪರ್ಪಲ್ ಕ್ಯಾಪ್; ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಶುಭ್ಮನ್‌ ಗಿಲ್, ಸಾಯಿ ಸುದರ್ಶನ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2024: ಮೋಹಿತ್ ಶರ್ಮಾಗೆ ಪರ್ಪಲ್ ಕ್ಯಾಪ್; ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಶುಭ್ಮನ್‌ ಗಿಲ್, ಸಾಯಿ ಸುದರ್ಶನ್

IPL 2024: ಮೋಹಿತ್ ಶರ್ಮಾಗೆ ಪರ್ಪಲ್ ಕ್ಯಾಪ್; ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಶುಭ್ಮನ್‌ ಗಿಲ್, ಸಾಯಿ ಸುದರ್ಶನ್

  • ಐಪಿಎಲ್ 2024ರ ಆವೃತ್ತಿಯ 17ನೇ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಎದುರಾದವು. ಶಿಖರ್‌ ಧವನ್‌ ನೇತೃತ್ವದ ಪಂಜಾಬ್‌, ರೋಚಕ ಜಯ ಸಾಧಿಸಿತು. ಪಂದ್ಯದ ಬಳಿಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದವರ ಪಟ್ಟಿ ನೋಡೋಣ.

2014ರ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೋಹಿತ್ ಶರ್ಮಾ, ಈ ಬಾರಿ ಗುಜರಾತ್‌ ಟೈಟಾನ್ಸ್‌ ಪರ ಮತ್ತೆ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಆಗುವತ್ತ ಪೈಪೋಟಿ ನೀಡುತ್ತಿದ್ದಾರೆ. ಪಂಜಾಬ್‌ ವಿರುದ್ಧ ಒಂದು ವಿಕೆಟ್‌ ಕಬಳಿಸಿದ ಅವರು, ಪರ್ಪಲ್‌ ಕ್ಯಾಪ್‌ ಗೆದ್ದಿದ್ದಾರೆ.
icon

(1 / 5)

(AFP)

ಅಹ್ಮದಾಬಾದ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 1 ವಿಕೆಟ್ ಪಡೆಯುವ ಮೂಲಕ, ಮೋಹಿತ್ ಶರ್ಮಾ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 4 ಪಂದ್ಯಗಳಲ್ಲಿ 7 ವಿಕೆಟ್ ಪಡೆದರು. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮುಸ್ತಾಫಿಜುರ್ ರೆಹಮಾನ್ 3 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಆದರೆ, ಮೋಹಿತ್ ಉತ್ತಮ ಎಕಾನಮಿ ರೇಟ್‌ ಹೊಂದಿರುವ ಕಾರಣ ಅಗ್ರಸ್ಥಾನ ಪಡೆದಿದ್ದಾರೆ.
icon

(2 / 5)

(AP)

ಗುಜರಾತ್ ಟೈಟಾನ್ಸ್ ವಿರುದ್ಧ ಎರಡು ವಿಕೆಟ್ ಪಡೆದ ಪಂಜಾಬ್ ಕಿಂಗ್ಸ್‌ ವೇಗಿ ಕಗಿಸೊ ರಬಾಡ, ಪರ್ಪಲ್ ಕ್ಯಾಪ್‌ ಸ್ಪರ್ಧೆಯಲ್ಲಿದ್ದರು. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅವರು ಇದೀಗ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ರಬಾಡ ನಾಲ್ಕು ಪಂದ್ಯಗಳಲ್ಲಿ ಆರು ವಿಕೆಟ್ ಪಡೆದಿದ್ದಾರೆ. 2020ರಲ್ಲಿ ಪರ್ಪಲ್ ಕ್ಯಾಪ್ ಗೆದ್ದಿದ್ದ ದಕ್ಷಿಣ ಆಫ್ರಿಕಾ ವೇಗಿ, ಈ ಬಾರಿಯೂ ಪೈಪೋಟಿ ನೀಡುತ್ತಿದ್ದಾರೆ. ಅತ್ತ ಲಕ್ನೋ ವೇಗಿ ಮಯಾಂಕ್ ಯಾದವ್ 2 ಪಂದ್ಯಗಳಲ್ಲಿ 6 ವಿಕೆಟ್, ಯುಜ್ವೇಂದ್ರ ಚಾಹಲ್ 3 ಪಂದ್ಯಗಳಲ್ಲಿ 6 ವಿಕೆಟ್ ಮತ್ತು ಖಲೀಲ್ ಅಹ್ಮದ್ 4 ಪಂದ್ಯಗಳಲ್ಲಿ 6 ವಿಕೆಟ್ ಪಡೆದು ರಬಾಡ ಅವರೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.
icon

(3 / 5)

ಗುಜರಾತ್ ಟೈಟಾನ್ಸ್ ಬ್ಯಾಟರ್‌ಗಳಾದ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್, ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಗಿಲ್ 89 ರನ್ ಗಳಿಸಿದ್ದರು. ಆಕ್ರಮಣಕಾರಿ ಆಟವಾಡಿದ ಸಾಯಿ ಸುದರ್ಶನ್ 33 ರನ್ ಗಳಿಸಿದರು. ಗಿಲ್ ಒಟ್ಟು 4 ಪಂದ್ಯಗಳಲ್ಲಿ 164 ರನ್ ಗಳಿಸಿದ್ದಾರೆ. ಸುದರ್ಶನ್ 4 ಪಂದ್ಯಗಳಲ್ಲಿ 160 ರನ್ ಗಳಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಗಿಲ್ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದ್ದರೆ, ಸುದರ್ಶನ್ ಐದನೇ ಸ್ಥಾನದಲ್ಲಿದ್ದಾರೆ.
icon

(4 / 5)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ, ಸದ್ಯ ಆರೆಂಜ್ ಕ್ಯಾಪ್ ಧರಿಸಿದ್ದಾರೆ. 4 ಪಂದ್ಯಗಳಲ್ಲಿ ಅವರು 203 ರನ್ ಗಳಿಸಿದ್ದಾರೆ. ಅತ್ತ ರಾಜಸ್ಥಾನ್ ರಾಯಲ್ಸ್‌ ಬ್ಯಾಟರ್‌ ರಿಯಾನ್ ಪರಾಗ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 3 ಪಂದ್ಯಗಳಲ್ಲಿ 181 ರನ್ ಗಳಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ ಸ್ಫೋಟಕ ಆಟಗಾರ ಕ್ಲಾಸೆನ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 3 ಪಂದ್ಯಗಳಲ್ಲಿ ಒಟ್ಟು 167 ರನ್ ಗಳಿಸಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು