ರೈಲಿನಲ್ಲಿ ಸಿಗರೇಟ್ ತೆಗೆದುಕೊಂಡು ಹೋಗಬಹುದಾ? ರೈಲಿನಲ್ಲಿ ಮದ್ಯ ಸೇವಿಸಿದ್ರೆ ಎಷ್ಟು ದಂಡ ಹಾಕ್ತಾರೆ?
- ರೈಲಿನಲ್ಲಿ ಧೂಮಪಾನ ಮಾಡಬಹುದಾ, ರೈಲಿನಲ್ಲಿ ಮದ್ಯ ಸೇವಿಸಬಹುದಾ, ರೈಲಿನಲ್ಲಿ ಧೂಮಪಾನ, ಮದ್ಯ ಸೇವಿಸಿದರೆ ದಂಡ ಎಷ್ಟು, ಜೈಲು ಶಿಕ್ಷೆಗೆ ಅವಕಾಶ ಸೇರಿದಂತೆ ಪ್ರಮುಖ ಮಾಹಿತಿಯನ್ನು ತಿಳಿಯಿರಿ.
- ರೈಲಿನಲ್ಲಿ ಧೂಮಪಾನ ಮಾಡಬಹುದಾ, ರೈಲಿನಲ್ಲಿ ಮದ್ಯ ಸೇವಿಸಬಹುದಾ, ರೈಲಿನಲ್ಲಿ ಧೂಮಪಾನ, ಮದ್ಯ ಸೇವಿಸಿದರೆ ದಂಡ ಎಷ್ಟು, ಜೈಲು ಶಿಕ್ಷೆಗೆ ಅವಕಾಶ ಸೇರಿದಂತೆ ಪ್ರಮುಖ ಮಾಹಿತಿಯನ್ನು ತಿಳಿಯಿರಿ.
(1 / 6)
ಭಾರತದ ರೈಲುಗಳಲ್ಲಿ ಮದ್ಯವನ್ನು ಸಾಗಿಸಲು ಅನುಮತಿ ಇರುವುದಿಲ್ಲ. ಕಟ್ಟುನಿಟ್ಟಾದ ನಿಷೇಧ ಕಾನೂನುಗಳೊಂದಿಗೆ ರಾಜ್ಯಗಳ ಮೂಲಕ ಪ್ರಯಾಣಿಸುತ್ತಿದ್ದರೆ ಅನುಮತಿಸಲಾದ ರಾಜ್ಯಗಳಲ್ಲಿ ವೈಯಕ್ತಿಕ ಬಳಕೆಗಾಗಿ ಸೀಮಿತವಾಗಿ ಸಾಗಿಸಬಹುದು. ಆದರೆ ಅನುಮತಿ ಕಡ್ಡಾಯವಾಗಿರುತ್ತದೆ.
(2 / 6)
ರೈಲ್ವೆ ಸ್ಕ್ಯಾನರ್‌ಗಳಲ್ಲಿ ಪ್ರಮಾಣಿಕರು ಆಲ್ಕೋಹಾಲ್ ಸಾಗಿಸುತ್ತಿದ್ದರೆ ಅದನ್ನು ಪತ್ತೆ ಮಾಡಬಹುದು. ರೈಲ್ವೆ ನಿಲ್ದಾಣಗಳಲ್ಲಿ ಬಳಸಲಾಗುವ ಸುಧಾರಿತ ಸ್ಕ್ಯಾನಿಂಗ್ ಉಪಕರಣಗಳು ಲಗೇಜ್‌ಗಳಲ್ಲಿ ಆಲ್ಕೋಹಾಲ್‌ಯುಕ್ತ ಪಾನೀಯಗಳು ಸೇರಿದಂತೆ ಯಾವುದೇ ರೀತಿಯ ದ್ರವಗಳನ್ನು ಸಾಗಿಸಿದರೆ ಪತ್ತೆ ಹಚ್ಚಲಾಗುತ್ತೆ
(3 / 6)
ರೈಲಿನಲ್ಲಿ ಮದ್ಯ ಸಾಗಣೆಗೆ ಸಂಬಂಧಿಸಿದಂತೆ ರೈಲ್ವೆ ನಿಯಮಗಳು ಅಥವಾ ಆಯಾ ರಾಜ್ಯ ಕಾನೂನುಗಳನ್ನು ಉಲ್ಲಂಘಿಸಿದರೆ ಭದ್ರತಾ ಸಿಬ್ಬಂದಿ ಮದ್ಯವನ್ನು ಪರಿಶೀಲಿಸಬಹುದು ಮತ್ತು ಮದ್ಯವನ್ನು ವಶಪಡಿಸಿಕೊಳ್ಳಬಹುದು.
(4 / 6)
ವೈಯಕ್ತಿಕ ಬಳಕೆಗಾಗಿ ರೈಲಿನಲ್ಲಿ ಸಿಗರೇಟ್ ಕೊಂಡೊಯ್ಯಬಹುದು. ಆದರೆ ದೇಶದ ರೈಲುಗಳು ಮತ್ತು ರೈಲು ನಿಲ್ದಾಣಗಳಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರೈಲ್ವೆ ನಿಯಮಗಳ ಪ್ರಕಾರ, ರೈಲು ಅಥವಾ ರೈಲು ನಿಲ್ದಾಣಗಳಲ್ಲಿ ಧೂಮಪಾನ ಮಾಡುವ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತದೆ.
(5 / 6)
ಭಾರತದಲ್ಲಿ ಮದ್ಯಪಾನ ಮಾಡಲು ಕಾನೂನುಬದ್ಧ ವಯಸ್ಸು 21. ಅಪ್ರಾಪ್ತ ವಯಸ್ಕರು ಮದ್ಯಪಾನ ಮಾಡಿ ಸಿಕ್ಕಿಬಿದ್ದರೆ 1000 ರೂಪಾಯಿ ವರೆಗೆ ದಂಡ ಅಥವಾ 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಇರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವುದು ಅಪರಾಧವಾಗಿದೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿದರೆ 500 ರೂಪಾಯಿ ವರೆಗೆ ದಂಡ, ಒಂದು ತಿಂಗಳ ವರೆಗೆ ಜೈಲು ಶಿಕ್ಷೆಗೆ ಅವಕಾಶವಿದೆ
ಇತರ ಗ್ಯಾಲರಿಗಳು