ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾರನ್ನು ರೈಲಿನಲ್ಲಿ ಸಾಗಿಸುವುದು ಹೇಗೆ? ಪಾರ್ಸೆಲ್ ದರ, ಬುಕಿಂಗ್ ವಿಧಾನವನ್ನು ತಿಳಿಯಿರಿ -Car Transport By Train

ಕಾರನ್ನು ರೈಲಿನಲ್ಲಿ ಸಾಗಿಸುವುದು ಹೇಗೆ? ಪಾರ್ಸೆಲ್ ದರ, ಬುಕಿಂಗ್ ವಿಧಾನವನ್ನು ತಿಳಿಯಿರಿ -Car Transport by Train

  • ಕಾರನ್ನು ರೈಲಿನಲ್ಲಿ ಬೇರೆ ಸ್ಥಳಕ್ಕೆ ಸಾಗಿಸುವುದು ಹೇಗೆ, ಬುಕಿಂಗ್ ವಿಧಾನ ಹೇಗೆ, ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಎಷ್ಟು ಖರ್ಚಾಗುತ್ತೆ, ಕಾರು ಪಾರ್ಸೆಲ್‌ ಬಗ್ಗೆ ರೈಲ್ವೆ ನಿಯಮಗಳು ಏನು ಹೇಳುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಮ್ಮ ಕಾರನ್ನು ಬೇರೆ ಸ್ಥಳಕ್ಕೆ ಸಾಗಿಸಲು ಹಲವು ಆಯ್ಕೆಗಳಿವೆ. ಆದರೆ ರೈಲಿನಲ್ಲಿ ಕಾರನ್ನು ಸಾಗಿಸುವ ವಿಧಾನ ಮತ್ತು ಎಷ್ಟು ಖರ್ಚಾಗುತ್ತೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳುವುದು ಒಳ್ಳೆಯದು. ರೈಲಿನಲ್ಲಿ ಕಾರು ಸಾಗಿಸುವ ಪ್ರಕ್ರಿಯೆ, ವೆಚ್ಚ, ವಿಧಾನ ಹಾಗೂ ಸಾಧಕ-ಬಾಧಕಗಳನ್ನು ಇಲ್ಲಿ ನೀಡಲಾಗಿದೆ.
icon

(1 / 8)

ರೈಲಿನಲ್ಲಿ ಕಾರನ್ನು ಹೇಗೆ ಸಾಗಿಸುವುದು ಎಂಬುದರ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನೀವೇನಾದರೂ ಬೇರೊಂದು ಸ್ಥಳಕ್ಕೆ ಕಾರನ್ನು ಸಾಗಿಸಬೇಕಾದರೆ ಇಲ್ಲಿ ನೀಡಲಾಗಿರುವ ಮಾಹಿತಿ ನಿಮಗೆ ನೆರವಾಗಬಹುದು. 
icon

(2 / 8)

ಬುಕಿಂಗ್ ಕಾರ್ಯ ವಿಧಾನ - ನಿಮ್ಮ ಕಾರನ್ನು ರೈಲಿನಲ್ಲಿ ಬೇರೊಂದು ಸ್ಥಳಕ್ಕೆ ಸಾಗಿಸಬೇಕಾದರೆ ಮೊದಲು ಎಲ್ಲಿಂದ ಎಲ್ಲಿಗೆ ಸಾಗಿಸಬೇಕು ಎಂಬುದರ ಮಾಹಿತಿಯೊಂದಿಗೆ ಬುಕ್ಕಿಂಗ್ ಮಾಡಬೇಕು. ಪೀಕ್ ಸೀಸನ್‌ಗಳಲ್ಲಿ ಕನಿಷ್ಠ 1 ವಾರ ಮುಂಚಿತವಾಗಿ ಬುಕ್ ಮಾಡಿಕೊಳ್ಳುವುದು ಉತ್ತಮ. 
icon

(3 / 8)

ಕಾರಿನ ತಯಾರಿಕೆ, ಮಾದರಿ, ತಲುಪಬೇಕಾದ ನಿಲ್ದಾಣ, ನಿಮ್ಮ ಆದ್ಯತೆಯ ಸಾರಿಗೆ ದಿನಾಂಕಗಳಂತ ವಿವರಗಳನ್ನು ಒದಗಿಸಬೇಕು.ಕೆಲವು ರೈಲ್ವೆ ವಲಯಗಳು ಆನ್‌ಲೈನ್ ಬುಕಿಂಗ್ ಸೌಲಭ್ಯಗಳನ್ನು ಸರಿ ನೀಡುತ್ತಿವೆ. ಇದು ಅನುಕೂಲಕರ ಆಯ್ಕೆಯಾಗಿದೆ. ನಿಮ್ಮ ಕಾರನ್ನು ರೈಲಿನಲ್ಲಿ ಬೇರೆ ಸ್ಥಳಕ್ಕೆ ಸಾಗಿಸುವ ಮುನ್ನ ಒಂದಷ್ಟು ಕ್ರಮಗಳನ್ನು ಅನುಸರಿಸಬೇಕು. ಮೊದಲು ಕಾರನ್ನು ಸ್ವಚ್ಛಗೊಳಿಸಬೇಕು. ಇದು ಕಾರಿನಲ್ಲಿರುವ ಯಾವುದೇ ಹಾನಿ ಅಥವಾ ಗೀರುಗಳನ್ನು ಪರಿಶೀಲಿಸಲು ಮತ್ತು ಗುರುತಿಸಲು ಸುಲಭವಾಗುತ್ತೆ
icon

(4 / 8)

ನಿಮ್ಮ ಕಾರಿನಲ್ಲಿ ಯಾವುದೇ ರೀತಿಯ ವೈಕ್ತಿಕ ವಸ್ತುಗಳು, ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಯಾವುದೇ ರೀತಿಯ ಸೋರಿಕೆ ಇದ್ದರೆ ಅದನ್ನು ಸರಿಪಡಿಸಬೇಕು. ಏಕೆಂದರೆ ಸಾಗಿಸುವ ಸಮಯದಲ್ಲಿ ಅಪಾಯವನ್ನು ಉಂಟುಮಾಡಬಹುದು. ಕಾರಿನ ತೂಕ ಮತ್ತು ಅಪಾಯವನ್ನು ಕಡಿಮೆ ಮಾಡುವ ಸಲುವಾಗಿ ಕಡಿಮೆ ಇಂಧನ ಇರಬೇಕು. ಟ್ಯಾಂಕ್‌ನ ಸುಮಾರು ಕಾಲು ಭಾಗ ತೈಲ ಇರಬೇಕು. 
icon

(5 / 8)

ಕಾರನ್ನು ರೈಲಿಗೆ ಲೋಡ್ ಮಾಡುವ ಪ್ರದೇಶಕ್ಕೆ ಓಡಿಸಲಾಗುತ್ತದೆ. ನಂತರ ರೈಲ್ವೆ ಸಿಬ್ಬಂದಿ ನಿಮ್ಮ ಕಾರನ್ನು ವಿಶೇಷ ಕಾರ್ ಕ್ಯಾರಿಯರ್ ವ್ಯಾಗನ್‌ಗೆ ಲೋಡ್ ಮಾಡುತ್ತಾರೆ. ವೀಲ್ ಜಾಮರ್‌, ಸರಪಳಿಗಳನ್ನು ಬಳಸಿ ಕಾರು ಸುರಕ್ಷಿತಗೊಳಿಸಲಾಗುತ್ತದೆ. ನೀವು ಕಾರನ್ನು ರೈಲಿನಲ್ಲಿ ಪಾರ್ಸೆಲ್ ಮಾಡಬೇಕಾದರೆ ವಾಹನ ನೋಂದಣಿ ಪ್ರಮಾಣ ಪತ್ರ, ವಿಮಾ ಪ್ರಮಾಣ ಪತ್ರ, ಹೊರಸೂಸುವಿಕೆ ಪ್ರಮಾಣಪತ್ರ, ಗುರುತಿನ ಪುರಾವೆ ಹಾಗೂ ಸಾರಿಗೆ ಫಾರ್ಮ್ ಅವನ್ನು ರೈಲಿನ ಪಾರ್ಸೆಲ್ ಕಚೇರಿಗೆ ನೀಡಬೇಕು
icon

(6 / 8)

ಭಾರತದಲ್ಲಿ ರೈಲಿನಲ್ಲಿ ಕಾರುಗಳನ್ನು ಸಾಗಿಸಲು ಇರುವ ವೆಚ್ಚದ ವಿವರಗಳನ್ನು ನೋಡುವುದಾದರೆ, ದೆಹಲಿಯಿಂದ ಮುಂಬೈಗೆ ಸಾಗಿಸಲು 6 ರಿಂದ 10 ಸಾವಿರ, ಮುಂಬೈನಿಂದ ಕೋಲ್ಕತ್ತಗೆ 7 ರಿಂದ 12 ಸಾವಿರ, ಕೋಲ್ಕತ್ತದಿಂದ ಚೆನ್ನೈಗೆ 8 ರಿಂದ 13 ಸಾವಿರ, ಚೆನ್ನೈನಿಂದ ಬೆಂಗಳೂರಿಗೆ 4 ರಿಂದ 7 ಸಾವಿರ ಹಾಗೂ ಬೆಂಗಳೂರಿನಿಂದ ದೆಹಲಿ 10 ರಿಂದ 15 ಸಾವಿರ ವೆಚ್ಚವಾಗುತ್ತದೆ.
icon

(7 / 8)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ… ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಸ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
icon

(8 / 8)

ಇತರ ಗ್ಯಾಲರಿಗಳು