ಪಂಚಾಕ್ಷರಿ ಗವಾಯಿಗಳ ಊರು, ಮುದ್ರಣ ಕಾಶಿ ಖ್ಯಾತಿಯ ಗದಗದ ರೈಲ್ವೆ ನಿಲ್ದಾಣವೀಗ ಹೈಟೆಕ್; ಹೇಗಿದೆ ಹೊಸ ರೂಪ
ಉತ್ತರ ಕರ್ನಾಟಕದ ಮುದ್ರಣೋದ್ಯಮದ ನಗರಿ ಗದಗ ರೈಲ್ವೆ ನಿಲ್ದಾಣಕ್ಕೆ ಅಮೃತ್ ಭಾರತ್ ಯೋಜನೆಯಡಿ ಆಧುನಿಕ ರೂಪ ನೀಡಲಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಲವು ಸೌಲಭ್ಯಗಳನ್ನು ನೂತನ ನಿಲ್ದಾಣದಲ್ಲಿ ಒದಗಿಸಲಾಗಿದೆ.
(1 / 7)
ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್ ಆಗಿರುವ ಗದಗ ನಗರದಲ್ಲಿ ಮೂರು ವರ್ಷದಿಂದ ನಡೆದಿದ್ದ ರೈಲ್ವೆ ನಿಲ್ದಾಣದ ಆಧುನೀಕರಣ ಕಾಮಗಾರಿ ಮುಗಿದು ಈಗ ಉದ್ಘಾಟನೆಗೊಂಡಿದೆ.
(2 / 7)
ಹುಬ್ಬಳ್ಳಿ, ಬಾಗಲಕೋಟೆ ಹಾಗೂ ಕೊಪ್ಪಳ ಕಡೆಗೆ ಹೋಗುವ ವಿವಿಧ ರೈಲುಗಳ ಜಂಕ್ಷನ್ ಎನ್ನಿಸಿರುವ ಗದಗ ನಿಲ್ದಾಣ ಚಿಕ್ಕದಾಗಿತ್ತು. ಅದನ್ನು ಈಗ ವಿಶಾಲವಾಗಿ ರೂಪಿಸಲಾಗಿದೆ.
(3 / 7)
ಗದಗ ರೈಲ್ವೆ ನಿಲ್ದಾಣ ಒಳಕ್ಕೆ ಬರುವ ಮಾರ್ಗವೇ ಮೊದಲು ಕಿರಿದಾಗಿತ್ತು. ಈಗ ಅದೆಲ್ಲವನ್ನೂ ತೆರವುಗೊಳಿಸಿ ಹೊಸದಾಗಿ ವಿಶಾಲ ದ್ವಾರದೊಂದಿಗೆ ನಿಲ್ದಾಣವನ್ನು ಮರು ನಿರ್ಮಿಸಲಾಗಿದೆ
(4 / 7)
ಪ್ರಯಾಣಿಕರಿಗೆ ಇಲ್ಲಿ ಸೌಲಭ್ಯವೇ ಚೆನ್ನಾಗಿ ಇರಲಿಲ್ಲ. ಜನ ಕುಳಿತುಕೊಳ್ಳಲು ಪರದಾಡುವ ಸ್ಥಿತಿಯಿತ್ತು. ಈಗ ಪ್ರಯಾಣಿಕರಿಗೆ ಅತ್ಯಾಧುನಿಕ ಕುಳಿತುಕೊಳ್ಳುವ ಕೊಠಡಿಯನ್ನು ಒದಗಿಸಲಾಗಿದೆ.
(5 / 7)
ಗದಗ ನಿಲ್ದಾಣದಲ್ಲಿ ಮೊದಲು ಲಿಫ್ಟ್ ಕೂಡ ಇರಲಿಲ್ಲ. ಈಗ ಮೊದಲ ಮಹಡಿಯನ್ನು ನಿರ್ಮಿಸಿ ಅಲ್ಲಿಗೆ ಲಿಫ್ಟ್‌ಗಳನ್ನು ಒದಗಿಸಲಾಗಿದೆ. ಇದರಿಂದ ಜನ ಫ್ಲಾಟ್‌ಫಾರಂ ಅನ್ನು ಬದಲಿಸಲು ಸುಲಭವಾಗಲಿದೆ.
(6 / 7)
ಇದಲ್ಲದೇ ಗದಗ ನಿಲ್ದಾಣದಲ್ಲಿ ಪ್ರಯಾಣಿಕ ಸ್ನೇಹಿ ಎಸ್ಕಲೇಟರ್‌ಗಳನ್ನು ಕೂಡ ನಿರ್ಮಿಸಲಾಗಿದೆ. ಇದು ಕೂಡ ಪ್ರಯಾಣಿಕರು ಫ್ಲಾಟ್‌ಫಾರಂ ಅನ್ನು ಬಹು ಬೇಗನೇ ತಲುಪಲು,ತಮ್ಮ ಲಗೇಜ್‌ಗಳನ್ನು ತೆಗೆದುಕೊಂಡು ಬರಲು ಸಹಕಾರಿಯಾಗಲಿದೆ.
ಇತರ ಗ್ಯಾಲರಿಗಳು