ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಂದೇ ಮೆಟ್ರೋ ವೈಶಿಷ್ಟ್ಯಗಳು ಹಲವು: ಸಾಮಾನ್ಯ ಮೆಟ್ರೋ, ವಂದೇ ಭಾರತ್‌ಗಿಂತಲೂ ಹೆಚ್ಚು ಸೌಕರ್ಯ; ಇದು ಸಖತ್ ಸ್ಪೀಡ್ ಕಣ್ರೀ

ವಂದೇ ಮೆಟ್ರೋ ವೈಶಿಷ್ಟ್ಯಗಳು ಹಲವು: ಸಾಮಾನ್ಯ ಮೆಟ್ರೋ, ವಂದೇ ಭಾರತ್‌ಗಿಂತಲೂ ಹೆಚ್ಚು ಸೌಕರ್ಯ; ಇದು ಸಖತ್ ಸ್ಪೀಡ್ ಕಣ್ರೀ

  • ಭಾರತೀಯ ರೈಲ್ವೆ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿದೆ. ವಂದೇ ಭಾರತ್‌ ರೈಲಿನ ಯಶಸ್ಸಿನ ಬೆನ್ನಲ್ಲೇ, ವಂದೇ ಮೆಟ್ರೋ ರೈಲು ಓಡಲು ಸಜ್ಜಾಗುತ್ತಿದೆ. ಎರಡು ನಗರಗಳ ನಡುವಿನ ಪ್ರಯಾಣಕ್ಕಾಗಿ ಈ ರೈಲು ಪ್ರಾಯಾಣಿಕರಿಗೆ ನೆರವಾಗಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ ಸ್ಫೂರ್ತಿ ಪಡೆದ ವಂದೇ ಮೆಟ್ರೋ, ಪ್ರಯಾಣಿಕರ ವಿಶ್ವ ದರ್ಜೆಯ ಸೌಕರ್ಯಗಳನ್ನು ನೀಡಲಿದೆ.

ವಂದೇ ಮೆಟ್ರೋ ರೈಲು 2024ರ ಜುಲೈ ತಿಂಗಳಲ್ಲಿ ಪ್ರಯೋಗಗಳಿಗೆ ಸಿದ್ಧವಾಗಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಈಗಾಗಲೇ ಭಾರತದ ಮೊದಲ ವಂದೇ ಮೆಟ್ರೋ ರೈಲು ಏಪ್ರಿಲ್ 30ರಂದು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಅನಾವರಣಗೊಂಡಿದೆ. ಹಾಗಿದ್ದರೆ ಈ ಹೊಸ ರೈಲಿನ ವಿಶೇಷತೆಗಳೇನು? ಈ ಮೆಟ್ರೋ ರೈಲಿನ ಪ್ರಮುಖ ವೈಶಿಷ್ಟ್ಯಗಳನ್ನು ನೋಡೋಣ ಬನ್ನಿ.
icon

(1 / 11)

ವಂದೇ ಮೆಟ್ರೋ ಮಾದರಿಯನ್ನು ಚೆನ್ನೈನ ರೈಲ್ ಕೋಚ್ ಫ್ಯಾಕ್ಟರಿ (RCF) ಕಪುರ್ತಲಾ ಮತ್ತು ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ತಯಾರಿಸುತ್ತಿದೆ. ವಂದೇ ಮೆಟ್ರೋದ ಮೊದಲ ಮೂಲ ಘಟಕವನ್ನು ಆರ್‌ಸಿಎಫ್ ಕಪುರ್ತಲಾದಲ್ಲಿ ಇತ್ತೀಚೆಗೆ ಪ್ರಯೋಗ ಮಾಡಲಾಯಿತು. ಈ ವರ್ಷದ ಜೂನ್ ತಿಂಗಳ ವೇಳೆಗೆ ರೈಲು ಸಂಪೂರ್ಣ ಸಿದ್ಧಗೊಳ್ಳುವ ನಿರೀಕ್ಷೆಯಿದೆ.
icon

(2 / 11)

(3 / 11)

(Indian Tech & Infra X)

ವಂದೇ ಮೆಟ್ರೋ ಇಂಟೀರಿಯರ್ ಹೀಗಿರಲಿದೆ: ವಂದೇ ಮೆಟ್ರೋ ರೈಲುಗಳು ದೇಶದಲ್ಲಿ ಅಸ್ತಿತ್ವದಲ್ಲಿರುವ ಮೆಟ್ರೋ ರೈಲುಗಳಿಗಿಂತಲೂ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ. ಭಾರತದ ಕೆಲವು ನಗರಗಳಲ್ಲಿರುವ ಮೆಟ್ರೊ ರೈಲುಗಳಂತೆಯೇ, ವಂದೇ ಮೆಟ್ರೋದಲ್ಲಿರಯೂ ಕೋಚ್‌ಗಳು, ಆಸನ ಮತ್ತು ನಿಲ್ಲುವ ವ್ಯವಸ್ಥೆಗಳು ಇರಲಿವೆ.
icon

(4 / 11)

ವಂದೇ ಮೆಟ್ರೋ ರೈಲುಗಳು ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತೆ, ವಂದೇ ಮೆಟ್ರೋದಲ್ಲೂ ಕೋಚ್‌ಗಳ ನಡುವೆ ಸುಲಭವಾಗಿ ಚಲಿಸಬಹುದಾಗಿದೆ. ಅಲ್ಲದೆ, ಧೂಳು-ಮುಕ್ತ ವಾತಾವರಣಕ್ಕಾಗಿ ಸಂಪೂರ್ಣವಾಗಿ ಮುಚ್ಚಿದ ಗ್ಯಾಂಗ್‌ವೇಗಳನ್ನು ಈ ಕೋಚ್‌ಗಳು ಹೊಂದಿವೆ.
icon

(5 / 11)

ವಂದೇ ಮೆಟ್ರೋ ವೇಗ: ವಂದೇ ಮೆಟ್ರೋ ರೈಲುಗಳು ಗಂಟೆಗೆ ಗರಿಷ್ಠ 130 km ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿರಲಿದೆ. 
icon

(6 / 11)

ಪ್ರತಿ ಕೋಚ್‌ಗಳಲ್ಲಿ ಸಿಸಿಟಿವಿ ಕ್ಯಾಮರಾಗಳು, ತುರ್ತು ಟಾಕ್-ಬ್ಯಾಕ್ ಘಟಕಗಳು, ಮಾಡ್ಯುಲರ್ ಶೌಚಾಲಯಗಳು, ಸ್ವಯಂಚಾಲಿತ ಬೆಂಕಿ ಪತ್ತೆ ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಸಹ ಹೊಂದಿರುತ್ತದೆ.
icon

(7 / 11)

ಮಾರ್ಗದ ಬೇಡಿಕೆಗೆ ಅನುಗುಣವಾಗಿ 12 ಅಥವಾ 16 ಕೋಚ್‌ಗಳನ್ನು ರೈಲು ಹೊಂದಿರುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
icon

(8 / 11)

ವಂದೇ ಮೆಟ್ರೋದಲ್ಲಿ ಆಧುನಿಕ ವಿನ್ಯಾಸದ ಹಗುರವಾದ ಮೆತ್ತನೆಯ ಸೀಟುಗಳು ಇರಲಿದೆ. ಪ್ರತಿ ಕೋಚ್‌ನಲ್ಲಿ 100 ಪ್ರಯಾಣಿಕರು ಕುಳಿತುಕೊಳ್ಳಲು ಮತ್ತು 200 ಮಂದಿ ನಿಲ್ಲಲು ಸ್ಥಳಾವಕಾಶವಿರಲಿದೆ.
icon

(9 / 11)

(10 / 11)

icon

(11 / 11)

IPL_Entry_Point

ಇತರ ಗ್ಯಾಲರಿಗಳು