ಮದುವೆ ಗೊತ್ತಾಗಿರುವ ಜೋಡಿ, ಪುರಿ ಜಗನ್ನಾಥ ದೇವಸ್ಥಾನಕ್ಕೆ ಹೋಗಲು ಏಕೆ ಹೆದರುತ್ತಾರೆ; ರಾಧೆ ನೀಡಿದ ಶಾಪವೇ ಇದಕ್ಕೆ ಕಾರಣವಾ?
Jagannath Rath Yatra 2024: ಒಡಿಶಾದಲ್ಲಿ ಪುರಿ ಜಗನ್ನಾಥ ರಥ ಯಾತ್ರೆ 2024 ಜುಲೈ 7 ರಂದು ಆರಂಭವಾಗಲಿದೆ. ಜಗನ್ನಾಥ ದೇವಾಲಯವು ಅನೇಕ ಆಶ್ಚರ್ಯಕರ ರಹಸ್ಯಗಳು ಮತ್ತು ನಂಬಿಕೆಗಳನ್ನು ಹೊಂದಿದೆ. ಮದುವೆ ಗೊತ್ತಾಗಿರುವ ಜೋಡಿ ಈ ದೇವಸ್ಥಾನಕ್ಕೆ ಹೋಗಬಾರದು ಎಂದು ಹೇಳಲಾಗುತ್ತದೆ.
(1 / 6)
ಜಗನ್ನಾಥ ರಥಯಾತ್ರೆಯಲ್ಲಿ ಭಾಗವಹಿಸುವ ಎಲ್ಲಾ ಭಕ್ತರು ಇದುವರೆಗೂ ಮಾಡಿದ ಪಾಪಗಳೆಲ್ಲಾ ತೊಳೆದು ಪುಣ್ಯ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಲಕ್ಷಾಂತರ ಭಕ್ತರು ರಥ ಎಳೆಯಲು ದೂರದ ಊರುಗಳಿಂದ ಬರುತ್ತಾರೆ.
(2 / 6)
ಆದರೆ ಮದುವೆ ಗೊತ್ತಾಗಿರುವ ದಂಪತಿ ಈ ದೇವಸ್ಥಾನಕ್ಕೆ ಬಂದರೆ ಅವರ ಸಂಬಂಧ ಮುರಿಯುವುದು ಎಂಬ ನಂಬಿಕೆ ಇದ. ಇದಕ್ಕೆ ಸಂಬಂಧಿಸಿದಂತೆ ಒಂದು ಕಥೆ ಕೂಡಾ ಇದೆ. ಒಮ್ಮೆ ರಾಧೆಯು ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ. ಆಕೆ ದೇವಸ್ಥಾನವನ್ನು ಪ್ರವೇಶಿಸಲು ಮುಂದಾದಾಗ, ದೇವಾಲಯದ ಅರ್ಚಕ ಅವಳನ್ನು ಹೊಸ್ತಿಲಲ್ಲಿ ನಿಲ್ಲಿಸಿದನು.
(ANI)(3 / 6)
ದೇವಾಲಯದೊಳಗೆ ನನ್ನನ್ನು ಬಿಡದಿರಲು ಕಾರಣ ಏನು ಎಂದು ಕೇಳಿದಾಗ, ಅರ್ಚಕನು ರಾಧೆಯನ್ನು ಕುರಿತು ನೀನು ಶ್ರೀಕೃಷ್ಣನ ಪ್ರೇಮಿ, ವಿವಾಹಿತ ಹೆಂಡತಿಯಲ್ಲ ಎನ್ನುತ್ತಾನೆ. ಇದರಿಂದ ರಾಧಾ ಕೋಪಗೊಳ್ಳುತ್ತಾಳೆ.
(4 / 6)
ಮದುವೆ ಗೊತ್ತಾಗಿರುವ ಜೋಡಿ ಒಟ್ಟಿಗೆ ಈ ದೇವಾಲಯವನ್ನು ಪ್ರವೇಶಿಸಿದರೆ, ಅವರಿಗೆ ತಮ್ಮ ಜೀವನದಲ್ಲಿ ಎಂದಿಗೂ ಪ್ರೀತಿ ದೊರೆಯುವುದಿಲ್ಲ ಎಂದು ರಾಧೆಯು ಜಗನ್ನಾಥ ದೇವಾಲಯಕ್ಕೆ ಶಾಪ ನೀಡುತ್ತಾಳೆ.
ಇತರ ಗ್ಯಾಲರಿಗಳು