ಕನ್ಯಾಕುಮಾರಿಗೆ ಪ್ರವಾಸ ಹೋದರೆ ಸಮುದ್ರದಲ್ಲಿನ ಗಾಜಿನ ಸೇತುವೆ ಮೇಲೆ ನಡೆದು ಬರುವುದನ್ನು ಮರೆಯಬೇಡಿ; ಹೀಗಿದೆ ಭಾರತದ ಮೊದಲ ವಿಭಿನ್ನ ಸೇತುವೆ
- ಭಾರತದಲ್ಲಿ ಹಲವು ನಗರಗಳಲ್ಲಿ ಸಮುದ್ರ ನಂಟು ಇದ್ದರೂ ಅದನ್ನು ವೀಕ್ಷಿಸಲು ಗಾಜಿನ ಸೇತುವೆ ಇರಲಿಲ್ಲ. ಅಂತಹ ಸೇತುವೆ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕ ಹಾಗೂ ತಿರುವಳ್ಳವರ್ ಪ್ರತಿಮೆ ನಡುವೆ ನಿರ್ಮಾಣಗೊಂಡಿದೆ. ಅದರ ಚಿತ್ರನೋಟ ಇಲ್ಲಿದೆ.
- ಭಾರತದಲ್ಲಿ ಹಲವು ನಗರಗಳಲ್ಲಿ ಸಮುದ್ರ ನಂಟು ಇದ್ದರೂ ಅದನ್ನು ವೀಕ್ಷಿಸಲು ಗಾಜಿನ ಸೇತುವೆ ಇರಲಿಲ್ಲ. ಅಂತಹ ಸೇತುವೆ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕ ಹಾಗೂ ತಿರುವಳ್ಳವರ್ ಪ್ರತಿಮೆ ನಡುವೆ ನಿರ್ಮಾಣಗೊಂಡಿದೆ. ಅದರ ಚಿತ್ರನೋಟ ಇಲ್ಲಿದೆ.
(1 / 6)
ಕನ್ಯಾಕುಮಾರಿ ಭಾರತದ ದಕ್ಷಿಣ ತುತ್ತ ತುದಿ. ಅಲ್ಲಿನ ತಿರುವಳ್ಳವರ್ ಪ್ರತಿಮೆ, ವಿವೇಕಾನಂದರ ಸ್ಮಾರಕದ ನಡುವೆ ವಿಭಿನ್ನ ಸೇತುವೆಯೊಂದು ನಿರ್ಮಾಣಗೊಂಡಿದೆ.
(2 / 6)
ವಿವೇಕಾನಂದ ರಾಕ್ ಮತ್ತು ತಿರುವಳ್ಳವರ್ ಪ್ರತಿಮೆ ಮಧ್ಯೆ ಹೊಸ ಗಾಜಿನ ಸೇತುವೆ ನಿರ್ಮಾಣ ಮಾಡಲಾಗಿದೆ. 77 ಮೀಟರ್ ಉದ್ದ , 10 ಮೀಟರ್ ಅಗಲದ 37ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಬ್ರಿಡ್ಜ್ ಕನ್ಯಾಕುಮಾರಿಯ ವಿಶೇಷ ಆಕರ್ಷಣೆ ಎನ್ನಿಸಿದೆ.
(3 / 6)
ಹಿಂದೆ, ಪ್ರವಾಸಿಗರು ವಿವೇಕಾನಂದ ಬಂಡೆ ಮತ್ತು ತಿರುವಳ್ಳುವರ್ ಪ್ರತಿಮೆ ಎರಡಕ್ಕೂ ಭೇಟಿ ನೀಡಲು ದೋಣಿ ಸೇವೆಗಳನ್ನು ಅವಲಂಬಿಸಬೇಕಾಗಿತ್ತು. ಈಗ ಸೇತುವೆ ಸಂಪರ್ಕ ಕೊಂಡಿಯಾಗಿದೆ.
(4 / 6)
ಸುಧಾರಿತ ನಿರ್ಮಾಣ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಈ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದೆ.ಅದರ ಬಾಳಿಕೆ ಮಾತ್ರವಲ್ಲದೆ ಅದನ್ನು ಹಾದುಹೋಗುವವರ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ
(5 / 6)
ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಗಾಜಿನ ಸೇತುವೆಯು ತುಕ್ಕು ಮತ್ತು ಬಲವಾದ ಸಮುದ್ರದ ಗಾಳಿ ಸೇರಿದಂತೆ ಕಠಿಣ ಸಮುದ್ರ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಹಗಲು ಹಾಗೂ ರಾತ್ರಿ ಕೂಡ ಇದರ ಮೇಲೆ ಸಂಚರಿಸಲು ಅವಕಾಶವಿದೆ.
ಇತರ ಗ್ಯಾಲರಿಗಳು