ಡಬ್ಲ್ಯುಸಿಎಲ್ ಫೈನಲ್ನಲ್ಲಿ ಭಾರತದ ಟಾಪ್-5 ಪ್ರದರ್ಶನಕಾರರು; ಪಾಕಿಸ್ತಾನ ವಿರುದ್ಧ ಗೆಲ್ಲಲು ಹೇಗಿತ್ತು ಅವರ ಪ್ರದರ್ಶನ?
- World Championship of Legends 2024: ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ 2024ರ ಫೈನಲ್ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ.
- World Championship of Legends 2024: ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ 2024ರ ಫೈನಲ್ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ.
(1 / 7)
ಚೊಚ್ಚಲ ಆವೃತ್ತಿಯ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್-2024 ಲೀಗ್ ಫೈನಲ್ನಲ್ಲಿ ಪಾಕಿಸ್ತಾನ ಚಾಂಪಿಯನ್ ವಿರುದ್ಧ ಅಬ್ಬರಿಸಿದ ಭಾರತ ಚಾಂಪಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಲೀಗ್ನಲ್ಲಿ ಕೇವಲ 2 ಪಂದ್ಯ ಗೆದ್ದ ಭಾರತ, ನಾಕೌಟ್ನಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಪ್ರಶಸ್ತಿ ಗೆದ್ದು ಬೀಗಿತು. ಹಾಗಾದರೆ ಫೈನಲ್ನಲ್ಲಿ ಭಾರತದ ಪರ ಉತ್ತಮ ನೀಡಿ ಗೆಲುವಿಗೆ ಕಾರಣರಾದ ಆಟಗಾರರ ಪಟ್ಟಿ ಇಲ್ಲಿದೆ.
(2 / 7)
ಪಾಕಿಸ್ತಾನ ವಿರುದ್ಧದ ಫೈನಲ್ನಲ್ಲಿ ಅನುರೀತ್ ಸಿಂಗ್ ಅವರು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಪ್ರತಿ ಓವರ್ಗೆ 10.75 ರನ್ ಬಿಟ್ಟುಕೊಟ್ಟರೂ ಅನುರೀತ್ ಸತತ ವಿಕೆಟ್ಗಳೊಂದಿಗೆ ಪಾಕಿಸ್ತಾನದ ಬ್ಯಾಟಿಂಗ್ ಲೈನ್ಅಪ್ ಅನ್ನು ಕೆಡವಿದರು. 4 ಓವರ್ ಎಸೆದು 43 ರನ್ ನೀಡಿ 3 ವಿಕೆಟ್ ಪಡೆದರು. ಶಾರ್ಜೀಲ್ ಖಾನ್, ಶೋಯೆಬ್ ಮಲಿಕ್ ಮತ್ತು ಅಮೀರ್ ಯಾಮಿನ್ ಅವರನ್ನು ಔಟ್ ಮಾಡಿದರು.
(3 / 7)
ಚೆಂಡಿನೊಂದಿಗೆ ಗಮನಾರ್ಹ ಪ್ರದರ್ಶನ ನೀಡಿದ ಇರ್ಫಾನ್, 3 ಓವರ್ಗಳನ್ನು ಎಸೆದು ಕೇವಲ 12 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಯೂನಿಸ್ ಖಾನ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಇರ್ಫಾನ್ ಅವರ ಮಾರಕ ಬೌಲಿಂಗ್ನಿಂದ ಪಾಕ್ ಅನ್ನು 150 ರನ್ಗಳಿಗೆ ಕಟ್ಟಿಹಾಕಲು ನೆರವಾಯಿತು.
(4 / 7)
ಫೈನಲ್ನಲ್ಲಿ ಅಂಬಾಟಿ ರಾಯುಡು ಬ್ಯಾಟಿಂಗ್ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನಿಂಗ್ಸ್ ಆರಂಭಿಸಿದ ರಾಯುಡು ಅರ್ಧಶತಕ ಸಿಡಿಸಿದರು, 29 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ಗಳು ಅವರ ಇನ್ನಿಂಗ್ಸ್ನಲ್ಲಿವೆ. ಆ ಮೂಲಕ ಚೇಸಿಂಗ್ನಲ್ಲಿ ಭಾರತದ ಗೆಲುವಿಗೆ ಅಡಿಪಾಯ ಹಾಕಿಕೊಟ್ಟರು.
(5 / 7)
ಗುರುಕೀರತ್ ಸಿಂಗ್ ಮಾನ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆತ್ಮವಿಶ್ವಾಸ ತುಂಬಿದರು. 33 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 34 ರನ್ ಗಳಿಸಿದ ಗುರುಕೀರತ್, 3ನೇ ವಿಕೆಟ್ಗೆ 60 ರನ್ಗಳ ಪಾಲುದಾರಿಕೆ ಒದಗಿಸಿ ಗಮನ ಸೆಳೆದರು.
(6 / 7)
ಯೂಸುಫ್ ಪಠಾಣ್ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಫೈನಲ್ನಲ್ಲೂ ಯೂಸುಫ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 16 ಎಸೆತಗಳಲ್ಲಿ 30 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. 1 ಬೌಂಡರಿ, 3 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನತ್ತ ತಲುಪಿಸಿದರು.
ಇತರ ಗ್ಯಾಲರಿಗಳು