ಭಾರತದಲ್ಲಿ ಎನ್‌ಬಿ.1.8.7 ಮತ್ತು ಎಲ್‌ಎಫ್.7 ಎಂಬ ಎರಡು ವಿಧದ ಕೋವಿಡ್ ವೇರಿಯೆಂಟ್ ಪತ್ತೆ, ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು
ಭಾರತದ ಉದ್ದಗಲಕ್ಕೂ ಕೋವಿಡ್ 19 ಕೇಸ್‌ಗಳ ಹೆಚ್ಚಳವಾಗುತ್ತಿದ್ದು, ಎರಡು ಹೊಸ ವೇರಿಯೆಂಟ್ ಪತ್ತೆಯಾಗಿರುವುದಾಗಿ ಇಂಡಿಯನ್ ಸಾರ್ಸ್-ಸಿಒವಿ-2 ಜಿನೋಮಿಕ್ಸ್ ಕನ್ಸೋರ್ಟಿಯಂ (INSACOG) ಹೇಳಿದೆ. ಎನ್‌ಬಿ.1.8.7 ಮತ್ತು ಎಲ್‌ಎಫ್.7 ಎಂಬ ಎರಡು ವಿಧದ ಕೋವಿಡ್ ವೇರಿಯೆಂಟ್ ಪತ್ತೆಯಾಗಿದ್ದು, ಈ ಕುರಿತ ವಿವರ ಇಲ್ಲಿದೆ.
(1 / 12)
ಭಾರತದಲ್ಲಿ ಕೋವಿಡ್ ಸೋಂಕು ಹೆಚ್ಚಾಗುವುದಕ್ಕೆ ಕಾರಣವಾಗಿರುವ ಎರಡು ವೇರಿಯೆಂಟ್‌ಗಳನ್ನು ಗುರುತಿಸಲಾಗಿದೆ. ಎನ್‌ಬಿ.1.8.7 ಮತ್ತು ಎಲ್‌ಎಫ್.7 ಎಂಬ ಎರಡು ವಿಧದ ವೇರಿಯೆಂಟ್ ಹೆಚ್ಚು ತೊಂದರೆ ಕೊಡುತ್ತಿವೆ ಎಂದು ಹೇಳಲಾಗಿದೆ.
(2 / 12)
ಇಂಡಿಯನ್ ಸಾರ್ಸ್-ಸಿಒವಿ-2 ಜಿನೋಮಿಕ್ಸ್ ಕನ್ಸೋರ್ಟಿಯಂ (INSACOG) ನೀಡಿರುವ ಮಾಹಿತಿ ಪ್ರಕಾರ, ಎನ್‌ಬಿ.1.8.7 ಮತ್ತು ಎಲ್‌ಎಫ್.7 ಎಂಬ ಎರಡು ವಿಧದ ವೇರಿಯೆಂಟ್ ಪತ್ತೆಯಾಗಿದೆ.
(3 / 12)
ಏಪ್ರಿಲ್ ತಿಂಗಳಲ್ಲಿ ತಮಿಳುನಾಡಲ್ಲಿ ದೃಢಪಟ್ಟ ಸೋಂಕು ಕೇಸ್‌ಗಳ ಪೈಕಿ ಒಂದನ್ನು ಹರಡಿದ್ದು ಎನ್‌ಬಿ.1.8.7 ಎಂದು ಗುರುತಿಸಲಾಗಿದೆ.
(4 / 12)
ಗುಜರಾತ್‌ನಲ್ಲಿ ಪತ್ತೆಯಾದ ಕೋವಿಡ್ ಸೋಂಕುಗಳ ಪೈಕಿ ನಾಲ್ಕು ಕೇಸ್‌ಗಳಿಗೆ ಎಲ್‌ಎಫ್.7 ಎಂಬ ವೇರಿಯೆಂಟ್ ಕಾರಣ ಎಂದು ದೃಢೀಕರಿಸಲಾಗಿದೆ ಎಂದು ಇಂಡಿಯನ್ ಸಾರ್ಸ್-ಸಿಒವಿ-2 ಜಿನೋಮಿಕ್ಸ್ ಕನ್ಸೋರ್ಟಿಯಂ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
(5 / 12)
ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ, ಮೇ 2025ರಲ್ಲಿ ಕೋವಿಡ್ ಸೋಂಕು ಹರಡುವ ಕೊರೊನಾ ವೈರಸ್‌ಗಳ ಪೈಕಿ ಎಲ್‌ಎಫ್.7 ಮತ್ತು ಎನ್‌ಬಿ.1.8 ಸಬ್‌ವೇರಿಯೆಂಟ್‌ಗಳನ್ನು “ವೇರಿಯೆಂಟ್ಸ್ ಅಂಡರ್ ಮಾನಿಟರಿಂಗ್” ಎಂದು ಗುರುತಿಸಲಾಗಿದೆ.
(6 / 12)
ಎಲ್‌ಎಫ್.7 ಮತ್ತು ಎನ್‌ಬಿ.1.8.1 ಸಬ್‌ವೇರಿಯೆಂಟ್‌ಗಳನ್ನು ವೇರಿಯೆಂಟ್ ಆಫ್ ಕನ್ಸರ್ನ್ ಅಥವಾ ವೇರಿಯೆಂಟ್ಸ್ ಆಫ್ ಇಂಟರೆಸ್ಟ್ ಎಂದು ಗುರುತಿಸಲಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
(7 / 12)
ಭಾರತದಲ್ಲಿ ದೃಢೀಕರಿಸಲ್ಪಟ್ಟ ಕೋವಿಡ್ ಸೋಂಕುಗಳ ಪೈಕಿ ಶೇಕಡ 53 ಜೆಎನ್.1 ವೇರಿಯೆಂಟ್‌ನಿಂದ ಹರಡಲ್ಪಟ್ಟದ್ದು. ಬಿಎ.2 ವೇರಿಯೆಂಟ್ ಕೇಸ್‌ಗಳು ಶೇಕಡ 26 ಮತ್ತು ಒಮಿಕ್ರಾನ್ ವೇರಿಯೆಂಟ್f ಶೇಕಡ 20 ಕೇಸ್‌ಗಳಿವೆ.
(8 / 12)
ಸದ್ಯ ಲಭ್ಯವಿರುವ ಪುರಾವೆಗಳಿಗೆ ಅನುಗುಣವಾಗಿ ಹೇಳುವುದಾದರೆ ಎನ್‌ಬಿ.1.8.1 ಸಬ್‌ವೇರಿಯೆಂಟ್‌ಗಳು ಹೆಚ್ಚುವರಿಯಾಗಿ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಗುರುತಿಸಲಾಗಿದೆ.
(9 / 12)
ಎನ್‌ಬಿ.1.8.1 ಸಬ್‌ವೇರಿಯೆಂಟ್ ಸದ್ಯ ಜಾಗತಿಕವಾಗಿಕಡಿಮೆ ಅಪಾಯಕಾರಿ ಮಟ್ಟದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
(10 / 12)
ಕೋವಿಡ್ ಸೋಂಕು ಚಿಕಿತ್ಸೆಗಾಗಿ ಸದ್ಯ ಅನುಮೋದಿತ ಕೋವಿಡ್ 19 ಲಸಿಕೆಗಳು ಪರಿಣಾಮಕಾರಿಯಾಗಿ ಬಳಸಬಹುದು. ಅವುಗಳು ಪರಿಣಾಮಕಾರಿ ಚಿಕಿತ್ಸೆಗೆ ಸೂಕ್ತವಾಗಿರುವುದಾಗಿ ನಂಬಲಾಗಿದೆ ಎಂದು ಅದು ಹೇಳಿದೆ.
(11 / 12)
ಭಾರತದಲ್ಲಿ ದೃಢೀಕರಿಸಲ್ಪಟ್ಟ ಕೋವಿಡ್ ಸೋಂಕುಗಳ ಪೈಕಿ ಶೇಕಡ 53 ಜೆಎನ್.1 ವೇರಿಯೆಂಟ್‌ನಿಂದ ಹರಡಲ್ಪಟ್ಟದ್ದು. ಬಿಎ.2 ವೇರಿಯೆಂಟ್ ಕೇಸ್‌ಗಳು ಶೇಕಡ 26 ಮತ್ತು ಒಮಿಕ್ರಾನ್ ವೇರಿಯೆಂಟ್f ಶೇಕಡ 20 ಕೇಸ್‌ಗಳಿವೆ.
ಇತರ ಗ್ಯಾಲರಿಗಳು