Friendship Day: ನಿನ್ನ ಸ್ನೇಹವೇ ಅನನ್ಯ, ನಿನ್ನನ್ನು ಪಡೆದ ನಾನೇ ಧನ್ಯ; ಕ್ರಿಕೆಟ್ ಲೋಕದಲ್ಲಿ ಕೃಷ್ಣ-ಕುಚೇಲರಂತೆ ಇರುವ ಜೀವದ ಗೆಳೆಯರು ಇವರೇ!
- International Friendship Day: ಆಗಸ್ಟ್ 6 ಭಾನುವಾರದಂದು ಅಂತರರಾಷ್ಟ್ರೀಯ ಸ್ನೇಹಿತರ ದಿನ. ಸ್ನೇಹ ಎಂಬ ಎರಡಕ್ಷರದ ಪದ ಹುಟ್ಟಲು ಇಂತಹದ್ದೇ ಕ್ಷೇತ್ರಕ್ಕೆ ಸೀಮಿತ ಎಂಬುದಿಲ್ಲ. ಅದರಂತೆ, ಕ್ರೀಡಾ ಕ್ಷೇತ್ರವೂ ಕೂಡ. ಕ್ರಿಕೆಟ್ ಲೋಕದಲ್ಲಿನ ಅತ್ಯುತ್ತಮ ಸ್ನೇಹಿತರ ಪಟ್ಟಿಯನ್ನು ಈ ಮುಂದೆ ನೋಡೋಣ.
- International Friendship Day: ಆಗಸ್ಟ್ 6 ಭಾನುವಾರದಂದು ಅಂತರರಾಷ್ಟ್ರೀಯ ಸ್ನೇಹಿತರ ದಿನ. ಸ್ನೇಹ ಎಂಬ ಎರಡಕ್ಷರದ ಪದ ಹುಟ್ಟಲು ಇಂತಹದ್ದೇ ಕ್ಷೇತ್ರಕ್ಕೆ ಸೀಮಿತ ಎಂಬುದಿಲ್ಲ. ಅದರಂತೆ, ಕ್ರೀಡಾ ಕ್ಷೇತ್ರವೂ ಕೂಡ. ಕ್ರಿಕೆಟ್ ಲೋಕದಲ್ಲಿನ ಅತ್ಯುತ್ತಮ ಸ್ನೇಹಿತರ ಪಟ್ಟಿಯನ್ನು ಈ ಮುಂದೆ ನೋಡೋಣ.
(1 / 14)
ವಿರಾಟ್ ಕೊಹ್ಲಿ- ಎಂಎಸ್ ಧೋನಿ, ಸಂಗಕ್ಕಾರ-ಜಯವರ್ಧನೆ, ದ್ರಾವಿಡ್-ಲಕ್ಷ್ಮಣ್, ಕೊಹ್ಲಿ-ಎಬಿಡಿ, ಸಚಿನ್-ಕಾಂಬ್ಳಿ,.. ಹೀಗೆ ಕ್ರಿಕೆಟ್ ಜಗತ್ತಿನ ಹಲವು ಗೆಳೆತನದ, ಬಾಂಧವ್ಯದ ಕುರುಹುಗಳು ನಮ್ಮ ಮುಂದಿವೆ. ಕ್ರಿಕೆಟ್ ಲೋಕದ ಅತ್ಯುತ್ತಮ ಸ್ನೇಹಿತರ ಪಟ್ಟಿ ಇಲ್ಲಿದೆ.
(2 / 14)
ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಒಬ್ಬರಿಗೊಬ್ಬರು ಅತ್ಯಂತ ನಿಷ್ಠಾವಂತ ಬಾಂಧವ್ಯ ಹೊಂದಿರುವ ಇಬ್ಬರು ಭಾರತೀಯ ಕ್ರಿಕೆಟಿಗರು. ಈ ಇಬ್ಬರು ಆರಂಭದಿಂದಲೂ ಸಿಎಸ್ಕೆ ಪರ ಆಡಿದ್ದಾರೆ. ಭಾರತದ ಪರವೂ ಒಟ್ಟಿಗೆ ಆಡಿದ್ದಾರೆ. ಇವರ ಸ್ನೇಹ ಎಂತಹದ್ದು ಎಂಬುದಕ್ಕೆ ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದೇ ಇದಕ್ಕೆ ನಿದರ್ಶನ. ಮೈದಾನದಲ್ಲಿ ಮಾತ್ರವಲ್ಲ, ಅದರಾಚೆಗೂ ಭಲೇ ಜೋಡಿ. ವೈಯಕ್ತಿಕ ವಿಚಾರಗಳನ್ನೂ ಪರಸ್ಪರ ಹಂಚಿಕೊಳ್ಳುವ ಈ ಜೋಡಿಯು ಕ್ರಿಕೆಟ್ ಲೋಕದ ಬೆಸ್ಟ್ ಫ್ರೆಂಡ್ಸ್.
(3 / 14)
ಎಂಎಸ್ ಧೋನಿ-ವಿರಾಟ್ ಕೊಹ್ಲಿ ದಿಗ್ಗಜರು. ಹಾಗೆಯೇ ಪ್ರಾಣ ಸ್ನೇಹಿತರು. ಇವರ ಗೆಳೆತನ ಅಂತಿಥದ್ದಲ್ಲ. ಇಡೀ ಜಗತ್ತಿಗೆ ಗೊತ್ತು. ಕೊಹ್ಲಿ ಹಿಂದೊಮ್ಮೆ ಧೋನಿ ಬಗ್ಗೆ ಎರಡೇ ಪದದಲ್ಲಿ ಉತ್ತರಿಸಿದ್ರು. ನಂಬಿಕೆ ಮತ್ತು ಗೌರವ ಎಂದು ಮಾಹಿ ಬಗ್ಗೆ ಹೇಳಿದ್ರು. ಧೋನಿ ನಾಯಕತ್ವದಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೊಹ್ಲಿ, ಅಂದಿನಿಂದ ಈವರೆಗೂ ಕೃಷ್ಣ ಸುಧಾಮನಂತೆಯೇ ಇದ್ದಾರೆ. ಕೊಹ್ಲಿ ತನ್ನ ಕಷ್ಟ-ಸುಖವನ್ನು ಧೋನಿಯೊಂದಿಗೆ ಹಂಚಿಕೊಳ್ಳುತ್ತಾರೆ.
(4 / 14)
ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅತ್ಯುತ್ತಮ ಗೆಳೆಯರು. ಇವರಿಬ್ಬರ ಸ್ನೇಹ ಐಪಿಎಲ್‌ನಿಂದ ಆರಂಭವಾಯಿತು. ಉತ್ತಮ ಒಡನಾಟ ಹೊಂದಿರುವ ಈ ಜೋಡಿ, ಮೈದಾನದ ಹೊರಗೆ ಒಟ್ಟಿಗೆ ಸುತ್ತಾಡುವುದೇ ಹೆಚ್ಚು. ಈ ಜೋಡಿ ಸಖತ್ ಎಂಜಾಯ್ ಮಾಡುತ್ತಿತ್ತು
(5 / 14)
ಯುವರಾಜ್ ಸಿಂಗ್-ವಿರಾಟ್ ಕೊಹ್ಲಿ ನಡುವಿನ ಬಾಂಧವ್ಯಕ್ಕೆ ಸುದೀರ್ಘ ಇತಿಹಾಸವಿದೆ. ಸುಮಧುರ ಬಾಂಧವ್ಯ ಹೊಂದಿರುವ ಈ ಜೋಡಿ, ಅದೆಷ್ಟೋ ಗೆಳೆಯರಿಗೆ ಮಾದರಿ. ಇತ್ತೀಚೆಗೆ ಸಂದರ್ಶನದಲ್ಲಿ ಯುವಿ, ನಾನು ತಂಡಕ್ಕೆ ಕಂಬ್ಯಾಕ್ ಮಾಡಿದ್ದೇ ಕೊಹ್ಲಿಯಿಂದ ಎಂದು ಹೇಳಿದ್ದರು. ಕೊಹ್ಲಿ ಕೂಡ ಅದೆಷ್ಟೋ ಬಾರಿ ಯುವಿಯನ್ನು ಹಾಡಿ ಹೊಗಳಿದ್ದೂ ಇದೆ. ಇವರಿಬ್ಬರ ಆಫ್ಫೀಲ್ಡ್ ಕೆಮಿಸ್ಟ್ರಿ ಅದ್ಭುತವಾಗಿದೆ.
(6 / 14)
ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅತ್ಯುತ್ತಮ ಗೆಳೆಯರಲ್ಲಿ ಈ ಜೋಡಿಯೂ ಒಂದು. ಪದಗಳಿಗೆ ನಿಲುಕದ್ದು, ವರ್ಣಿಸಲಾಗದ್ದು ಇವರ ಸ್ನೇಹ. 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಟ್ಟಿಗೆ ಆಡಲು ಪ್ರಾರಂಭಿಸಿದ ನಂತರ ಈ ಜೋಡಿಯ ಒಡನಾಟ, ಬಾಂಧವ್ಯ ಹೆಚ್ಚಾಯಿತು. ಇಬ್ಬರದ್ದು ಬೇರೆ ಬೇರೆ ದೇಶಗಳೇ ಆದರೂ, ಒಂದೇ ತಾಯಿಯ ಮಕ್ಕಳಂತೆ ಇದ್ದಾರೆ. ಕೊಹ್ಲಿ ಎಬಿಡಿಯನ್ನು, ಎಬಿಡಿ ಕೊಹ್ಲಿಯನ್ನೂ ಎಂದೂ ಬಿಟ್ಟುಕೊಟ್ಟವರಲ್ಲ.
(7 / 14)
ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಬೆಸ್ಟ್ ಫ್ರೆಂಡ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನಿಲ್ಲುತ್ತಾರೆ. ಗಂಗೂಲಿ ನಾಯಕನಾಗಿದ್ದಾಗ ಹೆಚ್ಚು ಬೆಂಬಲಕ್ಕೆ ನಿಂತಿದ್ದೇ ಸಚಿನ್. ಹೀಗಂತ ಹಲವು ಬಾರಿ ಗಂಗೂಲಿ ಹೇಳಿದ್ದಾರೆ. ಈ ಜೋಡಿ ಮೈದಾನದಲ್ಲಿ ಅದೆಷ್ಟೋ ಸ್ಮರಣೀಯ ಇನ್ನಿಂಗ್ಸ್ಗಳನ್ನೂ ಕಟ್ಟಿದ್ದೂ ಇದೆ.
(8 / 14)
ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, ರೋಹಿತ್ ಶರ್ಮಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಚಹಲ್, ರೋಹಿತ್ ಅವರನ್ನು ತಮ್ಮ ಹಿರಿಯ ಸಹೋದರ ಎಂದು ಪರಿಗಣಿಸುತ್ತಾರೆ.
(9 / 14)
ಕರ್ನಾಟಕದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ U-19 ವಿಶ್ವಕಪ್ನಲ್ಲಿ ಒಟ್ಟಿಗೆ ಸ್ಪರ್ಧಿಸುವುದರಿಂದ ಹಿಡಿದು ಭಾರತದ ಪರ ಆರಂಭಿಕರಾಗುವವರೆಗೆ ಒಟ್ಟಿಗೆ ಪ್ರಯಾಣ ಬೆಳೆಸಿದ್ದಾರೆ.
(10 / 14)
ಅತ್ಯುತ್ತಮ ಸ್ನೇಹಿತರ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಜೋಡಿಯೂ ಒಂದು. ಮೈದಾನದಲ್ಲಿ ಸಖತ್ ಆಕ್ರಮಣಕಾರಿಯಾಗಿದ್ದರು. ಏನೇ ಆದರೂ, ಪರಸ್ಪರ ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಲ್ಲುತ್ತಿದ್ದರು. ಭಾರತದ ಪರ ಒಟ್ಟಿಗೆ ಆಡಿದ ಈ ಜೋಡಿ ಸಾಕಷ್ಟು ಸ್ಮರಣೀಯ ಗೆಲುವು ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ.
(11 / 14)
ಪುರುಷ ಕ್ರಿಕೆಟ್ನಲ್ಲಿ ಮಾತ್ರವಲ್ಲ, ಮಹಿಳಾ ಕ್ರಿಕೆಟ್ನಲ್ಲೂ ದಿ ಬೆಸ್ಟ್ ಫ್ರೆಂಡ್ಸ್ ಇದ್ದಾರೆ. ಆ ಪೈಕಿ ಜಮೈಮಾ ರೋಡ್ರಿಗಸ್ ಮತ್ತು ಸ್ಮೃತಿ ಮಂಧಾನ. ಮೈದಾನವೇ ಆಗಿರಲಿ, ಮೈದಾನದ ಹೊರಗೆ ಆಗಿರಲಿ, ಸೋಷಿಯಲ್ ಮೀಡಿಯಾವೇ ಆಗಿರಲಿ; ಒಬ್ಬರಿಗೊಬ್ಬರು ಕಾಲೆಳೆಯುತ್ತಲೇ ಇರುತ್ತಾರೆ. ಅತ್ಯಂತ ಖುಷಿಯಾಗಿರುವ ಜೋಡಿ ಇದು.
ಇತರ ಗ್ಯಾಲರಿಗಳು