Monkeys Day2024: ಕೋತಿಗಳಿಗೂ ಉಂಟು ಒಂದು ದಿನ, ಇಂದೇ ಅವುಗಳ ಅಂತರಾಷ್ಟ್ರೀಯ ದಿನ, ಭಾರತದಲ್ಲಿ ಎಷ್ಟು ತಳಿಗಳಿವೆ
- ಪ್ರತಿ ವರ್ಷ ಡಿಸೆಂಬರ್ 14ರಂದು ಕೋತಿಗಳ ದಿನವನ್ನು ಆಚರಿಸುವುದು ವಾಡಿಕೆ. ಅವುಗಳ ಮಹತ್ವ ಅರಿತು ಈ ದಿನವನ್ನು ವಿಶ್ವ ಕೋತಿಗಳ ದಿನ ಅಥವಾ ಅಂತರಾಷ್ಟ್ರೀಯ ಕೋತಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.
- (https://twitter.com/aranya_kfd/status/1867822665014346063)
- ಪ್ರತಿ ವರ್ಷ ಡಿಸೆಂಬರ್ 14ರಂದು ಕೋತಿಗಳ ದಿನವನ್ನು ಆಚರಿಸುವುದು ವಾಡಿಕೆ. ಅವುಗಳ ಮಹತ್ವ ಅರಿತು ಈ ದಿನವನ್ನು ವಿಶ್ವ ಕೋತಿಗಳ ದಿನ ಅಥವಾ ಅಂತರಾಷ್ಟ್ರೀಯ ಕೋತಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.
- (https://twitter.com/aranya_kfd/status/1867822665014346063)
(1 / 10)
ಮಂಗ ಅಥವಾ ಕೋತಿ ಎನ್ನುವುದು ನಮ್ಮ ಪರಿಸರದ ಭಾಗ. ಮನೆಯ ಅಕ್ಕಪಕ್ಕದಲ್ಲೋ. ಮಾಳಿಗೆ ಮೇಲೆ ಗುಂಪಾಗಿ ಓಡಾಡಿಕೊಂಡು ತಂಟೆಕೋರತನದಿಂದಲೇ ನಮ್ಮೆಲ್ಲರಿಗೂ ಆಪ್ತವಾದ ಪ್ರಾಣಿ.
(2 / 10)
ಕೋತಿಗಳ ಆಟದಿಂದ ಅವುಗಳನ್ನೂ ನಮಗೆ ಹೋಲಿಸುವುದುಂಟು. ಕೋತಿ ತರ ಆಡಬೇಡ ಎಂದು ಬೈಯುವುದು ವಾಡಿಕೆ. ಕೋತಿಗಳಿಗೂ ಕುಟುಂಬವಿದೆ. ಸಾಮಾಜಿಕ ಬದುಕಿದೆ ಎನ್ನುವುದು ನಮ್ಮ ಅರಿವಿನಲ್ಲಿದೆ.
(3 / 10)
ವಿಶ್ವಾದ್ಯಂತ ಇರುವ ವಿವಿಧ ಬಗೆಯ ಕೋತಿಗಳು ಮ್ತತು ಸಸ್ತನಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಡಿಸೆಂಬರ್ 14 ರಂದು ಆಚರಣೆ ಮಾಡಲಾಗುತ್ತದೆ
(4 / 10)
ಗಾತ್ರ, ತೂಕ ಮತ್ತು ಆಕಾರದಿಂದ ಹಿಡಿದು ಸುಮಾರು 260 ಜಾತಿಯ ಕೋತಿಗಳು ಆಫ್ರಿಕಾ, ಮಧ್ಯ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾ ಖಂಡದಲ್ಲಿ ಇವೆ. ಭಾರತದಲ್ಲೂ ಹತ್ತಕ್ಕೂ ಹೆಚ್ಚು ಜಾತಿಯ ಕೋತಿಗಳಿವೆ.
(5 / 10)
ಮಾನವರು ಮಾತ್ರವಲ್ಲದೇ ಇತರೆ ಸಸ್ತನಿಗಳಲ್ಲಿ ಪ್ರಮುಖವಾದ ಮಂಗಗಳ ವಿವಿಧ ಜಾತಿಗಳನ್ನೊಳಗೊಂಡಂತೆ ಎಲ್ಲಾ ವೈವಿಧ್ಯಮಯ ಜೀವಿಗಳ ಬಗ್ಗೆ ತಿಳಿಸುವುದು ಈ ದಿನದ ವಿಶೇಷ
(6 / 10)
ಮಂಗಗಳೂ ಕೂಡ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮಾಜದ ಮುಂದೆ ಇಡುವ ಉದ್ದೇಶದಿಂದಲೂ ಡಿ.14ನ್ನು ಕೋತಿಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.(Pic: Mona Patel)
(7 / 10)
ಭಾರತದಲ್ಲಿ ಹಲವು ಜಾತಿಯ ಕೋತಿಗಳಿವೆ. ಬಾನೆಟ್ ಕೋತಿ, ರೆಸೆಸ್ ಕೋತಿ, ಸೀಂಗಳಿಕ, ನೀಲಗಿರಿ ಲಂಗೂರ್, ಟಫ್ಟಡ್ ಲಂಗೂರ್ ಪ್ರಮುಖವಾದವು. ಇದು ಸೀಂಗಳಿಕ ಜಾತಿಯದ್ದು.
(8 / 10)
ಕರ್ನಾಟಕದಲ್ಲಿ ಮುಷಿಯಾ ಎಂದು ಕರೆಯಲ್ಪಡುವ ಉತ್ತರ ಕರ್ನಾಟಕದ ಹಲವಾರು ಹಳ್ಳಿಗಳಲ್ಲ ಬದುಕು ಕಂಡುಕೊಂಡಿರುವ ಕೋತಿ ತಳಿಯ ಪ್ರಾಣಿ ಇದು. ದಕ್ಷಿಣ ಭಾರತದಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿವೆ. (Pic: Arti Marathe)
(9 / 10)
ಚಿಗನ್ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ವಿದ್ಯಾರ್ಥಿಗಳಾದ, ಸಮಕಾಲೀನ ಕಲಾವಿದರೂ ಆದ ಕ್ಯಾಸೆ ಸಾರೋ ಮತ್ತು ಎರಿಕ್ ಮಿಲ್ಲಿಕಿನ್ ಎಂಬಾತರು 2000ನೇ ಇಸವಿಯಲ್ಲಿ ಈ ಕೋತಿಗಳ ದಿನವನ್ನು ಆಚರಿಸಲು ಪ್ರಾರಂಭಿಸಿದರು. ಅಂದಿನಿಂದ ಪ್ರತೀ ವರ್ಷ ಡಿ.14ನ್ನು ವಿಶ್ವ ಕೋತಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.
ಇತರ ಗ್ಯಾಲರಿಗಳು