International Museum Day: ಕಲೆ, ಸಂಸ್ಕೃತಿ, ವಿಜ್ಞಾನ ಪರಂಪರೆಯನ್ನು ಬಿಂಬಿಸುವ ಕರ್ನಾಟಕದ ಟಾಪ್ 10 ಮ್ಯೂಸಿಯಂಗಳಿವು
- ಕಲಾತ್ಮಕ, ಸಾಂಸ್ಕೃತಿಕ, ಐತಿಹಾಸಿಕ, ಸಾಂಪ್ರದಾಯಿಕ, ವೈಜ್ಞಾನಿಕ ವಸ್ತುಗಳ ಸಂಗ್ರಹವನ್ನು ಒಂದೇ ಕಡೆ ನೋಡಬೇಕು ಅಂದ್ರೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬೇಕು. ಇವು ನಮ್ಮ ಜ್ಞಾನ ವೃದ್ಧಿಸುವ ಜೊತೆಗೆ ಪರಂಪರೆಯನ್ನು ಪರಿಚಯಿಸುವ ತಾಣವಾಗಿದೆ. ಅಂತರರಾಷ್ಟ್ರೀಯ ಮ್ಯೂಸಿಯಂ ದಿನವಾದ ಇಂದು (ಮೇ 18) ಕರ್ನಾಟಕದ ಟಾಪ್ 10 ವಸ್ತು ಸಂಗ್ರಹಾಲಯಗಳ ಪರಿಚಯ ಇಲ್ಲಿದೆ.
- ಕಲಾತ್ಮಕ, ಸಾಂಸ್ಕೃತಿಕ, ಐತಿಹಾಸಿಕ, ಸಾಂಪ್ರದಾಯಿಕ, ವೈಜ್ಞಾನಿಕ ವಸ್ತುಗಳ ಸಂಗ್ರಹವನ್ನು ಒಂದೇ ಕಡೆ ನೋಡಬೇಕು ಅಂದ್ರೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬೇಕು. ಇವು ನಮ್ಮ ಜ್ಞಾನ ವೃದ್ಧಿಸುವ ಜೊತೆಗೆ ಪರಂಪರೆಯನ್ನು ಪರಿಚಯಿಸುವ ತಾಣವಾಗಿದೆ. ಅಂತರರಾಷ್ಟ್ರೀಯ ಮ್ಯೂಸಿಯಂ ದಿನವಾದ ಇಂದು (ಮೇ 18) ಕರ್ನಾಟಕದ ಟಾಪ್ 10 ವಸ್ತು ಸಂಗ್ರಹಾಲಯಗಳ ಪರಿಚಯ ಇಲ್ಲಿದೆ.
(1 / 11)
ನಮ್ಮ ಪರಂಪರೆ, ಇತಿಹಾಸ, ಸಂಸ್ಕೃತಿ, ವಿಜ್ಞಾನ ನಡೆದ ಬಂದ ಹಾದಿಯ ಪರಿಚಯ ನಿಮಗಾಗಬೇಕು ಅಂದ್ರೆ ನೀವು ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಬೇಕು. ಜ್ಞಾನ ಸಂಪನ್ಮೂಲಗಳ ಆಗರ ತಾಣವಿದು. ಇಲ್ಲಿಗೆ ಭೇಟಿ ನೀಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಮಾತ್ರವಲ್ಲ ನಮ್ಮ ರಾಷ್ಟ್ರದ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಇತಿಹಾಸ ಮತ್ತು ನಾಗರಿಕತೆಯ ಬಗ್ಗೆ ಪರಿಚಯವೂ ಆಗುತ್ತದೆ. ಇಂತಹ ಅಪರೂಪ ತಾಣವನ್ನು ರಕ್ಷಿಸುವ ಹಾಗೂ ಇದರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಮ್ಯೂಸಿಯಂ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಮೇ 18 ರಂದು ಅಂತರರಾಷ್ಟ್ರೀಯ ಮ್ಯೂಸಿಯಂ ದಿನಾಚರಣೆ ಇರುತ್ತದೆ. ಇವತ್ತು ಮ್ಯೂಸಿಯಂ ದಿನವಿದ್ದು ಕರ್ನಾಟಕದ ಟಾಪ್ 10 ವಸ್ತು ಸಂಗ್ರಹಾಲಯಗಳ ಬಗ್ಗೆ ತಿಳಿಯಿರಿ.
(2 / 11)
ಜವಹರ ಲಾಲ್ ನೆಹರೂ ಪ್ಲಾನಟೇರಿಯಂ: ಇದು ಬೆಂಗಳೂರಿನ ಒಂದು ಪ್ರಸಿದ್ಧ ಪ್ರವಾಸಿತಾಣವಾಗಿ ಮಾರ್ಪಟ್ಟಿದ್ದೆ. ತಾರಾಲೋಕದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಬಯಸುವವರು ಈ ಮ್ಯೂಸಿಯಂಗೆ ಭೇಟಿ ನೀಡಲೇಬೇಕು. ಇದು ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿದೆ.
(Bengaluru Tourism )(3 / 11)
ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಅಂಡ್ ಟೆಕ್ನಾಲಾಜಿಕಲ್ ಮ್ಯೂಸಿಯಂ: ಕರ್ನಾಟಕದ ಟಾಪ್ 10 ಮ್ಯೂಸಿಯಂಗಳಲ್ಲಿ ಈ ಮ್ಯೂಸಿಯಂಗೆ ಅಗ್ರಸ್ಥಾನವಿದೆ. ಇದು ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿದೆ. ಕಬ್ಬನ್ ಪಾರ್ಕ್ ಸಮೀಪದಲ್ಲೇ ಇರುವ ಈ ಮ್ಯೂಸಿಯಂನ ಒಳಗೆ ವಿಜ್ಞಾನ, ಬಾಹ್ಯಾಕಾಶ ಲೋಕವೇ ತೆರೆದಿರುವುದನ್ನು ಕಾಣಬಹುದು.
( BioTecNika)(4 / 11)
ಸ್ಯಾಂಡ್ ಮ್ಯೂಸಿಯಂ ಮೈಸೂರು: ಹೆಸರೇ ಹೇಳುವಂತೆ ಇದು ಮರಳಿನ ಶಿಲ್ಪಕಲಾಕೃತಿಗಳು ಇರುವ ವಸ್ತುಸಂಗ್ರಹಾಲಯವಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆಯ ಕೆಸಿ ಲೇಔಟ್‌ನಲ್ಲಿದೆ ಈ ಮ್ಯೂಸಿಯಂ. ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಈ ಮ್ಯೂಸಿಯಂ ತೆರೆದಿರುತ್ತದೆ.
(Tripadvisor)(5 / 11)
ಇಂಡಿಯನ್ ಮ್ಯೂಸಿಕ್ ಎಕ್ಸ್‌ಪಿರೀಯೆನ್ಸ್ ಮ್ಯೂಸಿಯಂ: ನೀವು ಸಂಗೀತ ಪ್ರಿಯರಾಗಿದ್ದರೆ, ಪ್ರಪಂಚದಾದ್ಯಂತದ ವಿವಿಧ ಸಂಗೀತ ಪರಿಕರಗಳನ್ನು ಕಣ್ತುಂಬಿಕೊಳ್ಳಲು ಬಯಸಿದರೆ ನೀವು ಈ ಮ್ಯೂಸಿಯಂಗೆ ಭೇಟಿ ನೀಡಲೇಬೇಕು. ಇತ್ತೀಚಿಗಷ್ಟೇ ಲೋಕಾಪರ್ಣೆಗೊಂಡ ಈ ಮ್ಯೂಸಿಯಂ ಇರುವುದು ಬೆಂಗಳೂರಿನ ಜೆಪಿ ನಗರದಲ್ಲಿ.
(6 / 11)
ಎಚ್‌ಎಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂ: ಭಾರತದ ಮೊದಲ ಏರೋಸ್ಪೇಸ್ ಮ್ಯೂಸಿಯುಂ ಎಂಬ ಖ್ಯಾತಿ ಮ್ಯೂಸಿಯಂಗಿದೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಆವರಣದಲ್ಲಿ ಈ ಮ್ಯೂಸಿಯಂ ಅನ್ನು 2001ರಲ್ಲಿ ಸ್ಥಾಪಿಸಲಾಯಿತು. ಇದು ಆರು ದಶಕಗಳ ಕಾಲ ಭಾರತೀಯ ವಾಯುಯಾನ ಉದ್ಯಮ ಮತ್ತು HAL ನ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ.
(Wikipedia)(7 / 11)
ರೈಲ್ವೇ ಮ್ಯೂಸಿಯಂ ಮೈಸೂರು: ಈ ವಸ್ತು ಸಂಗ್ರಹಾಲಯದಲ್ಲಿ ವಿಂಟೇಜ್ ಲೋಕೋಮೋಟಿವ್‌ಗಳನ್ನ ಹೋರಾಂಗಣದಲ್ಲಿ ನೋಡಬಹುದಾಗಿದೆ. 1979ರಲ್ಲಿ ಇಂಡಿಯನ್ ರೈಲ್ವೇಸ್ ಮೈಸೂರಿನಲ್ಲಿ ಈ ವಸ್ತುಸಂಗ್ರಹಾಲಯವನ್ನು ಸ್ಥಾಪನೆ ಮಾಡಿತು. ದೆಹಲಿಯ ರಾಷ್ಟ್ರೀಯ ರೈಲ್ವೇ ಮ್ಯೂಸಿಯಂ ನಂತರದ ಸ್ಥಾನ ಈ ಮ್ಯೂಸಿಯಂಗಿದೆ. ಕೃಷ್ಣರಾಜ ಸಾಗರ ರಸ್ತೆಯಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಎದುರು ಈ ವಸ್ತುಸಂಗ್ರಹಾಲಯವಿದೆ.
(8 / 11)
ಜಗನ್ಮೋಹನ ಪ್ಯಾಲೇಸ್ ಆರ್ಟ್ ಗ್ಯಾಲರಿ ಅಂಡ್ ಆಡಿಟೋರಿಯಂ: ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯ ಹಿಂದಿನ ಹೆಸರು ಜಗನ್ಮೋಹನ ಪ್ಯಾಲೇಸ್ ಎಂದಾಗಿತ್ತು. ಇದು ಕಲಾವಸ್ತುಗಳ ಸಂಗ್ರಹಾಲಯವಾಗಿದೆ. ಹಿಂದೆ ಮೈಸೂರಿನ ಆಡಳಿತ ಮಹಾರಾಜರ ಪರ್ಯಾಯ ರಾಜ ನಿವಾಸವಾಗಿತ್ತು.
( Mysore Tourism)(9 / 11)
ನ್ಯಾಷನಲ್ ಆರ್ಟ್ ಗ್ಯಾಲರಿ ಮಾರ್ಡನ್ ಆರ್ಟ್: ಇದನ್ನು ಬೆಂಗಳೂರಿನ ಅರಮನೆ ರಸ್ತೆ 49ರಲ್ಲಿ ಮಾಣಿಕ್ಯವೇಲು ಮ್ಯಾನ್ಷನ್ ಆವರಣದಲ್ಲಿ ಸ್ಥಾಪಿಸಲಾಗಿತ್ತು. 2009ರ ಫೆಬ್ರವರಿ 18 ರಿಂದ ಸಾರ್ವಜನಿಕರಿಗೆ ಈ ಸ್ಥಳದ ಪ್ರವೇಶಾವಕಾಶ ನೀಡಲಾಯಿತು. ಇಲ್ಲಿ ನೀವು ಕಲಾ ಪ್ರಪಂಚವನ್ನು ಕಣ್ತುಂಬಿಕೊಳ್ಳಬಹುದು.
(tripadvisor)(10 / 11)
ಕಾಯಿನ್ ಮ್ಯೂಸಿಯಂ: ಕಾರ್ಪೋರೇಷನ್ ಬ್ಯಾಂಕ್ ಹೆರಿಟೇಜ್ ಮ್ಯೂಸಿಯಂ ಅನ್ನು ಕಾಯಿನ್ ಮ್ಯೂಸಿಯಂ ಎಂದು ಕರೆಯಲಾಗುತ್ತದೆ. ಇದಿರುವುದು ಉಡುಪಿಯಲ್ಲಿ. ತೆಂಕಬೆಟ್ಟಿನಲ್ಲಿರುವ ಈ ಮ್ಯೂಸಿಯಂ ವಿವಿಧ ದೇಶಗಳ ಹಾಗೂ ಭಾರತದ ನೋಟು, ನಾಣ್ಯಗಳನ್ನು ಕಣ್ತುಂಬಿಕೊಳ್ಳಬಹುದು.
(Holidify)ಇತರ ಗ್ಯಾಲರಿಗಳು