ತೈವಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪನ; 10 ಮಂದಿ ಸಾವು, 1,100 ಮಂದಿಗೆ ಗಾಯ; ಫೋಟೊಸ್ -Taiwan Earthquake
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತೈವಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪನ; 10 ಮಂದಿ ಸಾವು, 1,100 ಮಂದಿಗೆ ಗಾಯ; ಫೋಟೊಸ್ -Taiwan Earthquake

ತೈವಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪನ; 10 ಮಂದಿ ಸಾವು, 1,100 ಮಂದಿಗೆ ಗಾಯ; ಫೋಟೊಸ್ -Taiwan Earthquake

  • ತೈವಾನ್‌ನಲ್ಲಿ ಏಪ್ರಿಲ್‌ 3ರ ಬುಧವಾರ ಸಂಭವಿಸಿದ 7.4 ತೀವ್ರತೆಯ ಭೂಕಂಪದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಸುಮಾರು 1,100 ಜನರು ಗಾಯಗೊಂಡಿದ್ದಾರೆ. ಪ್ರಬಲ ಭೂಕಂಪನ ಕಂಡಿರುವ ಹುವಾಲಿಯನ್ ನಗರ ಪರಿಸ್ಥಿತಿ ಹೇಗಿದೆ. ಇಲ್ಲಿದೆ ಫೋಟೊಸ್.

ತೈವಾನ್ 25 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಪ್ರಬಲ ಭೂಕಂಪವನ್ನು ಅನುಭವಿಸಿದೆ. ಭಂಕಪನ ಬಳಿಕ ಕಾಣೆಯಾದವರನ್ನ ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಶೋಧ ನಡೆಸುತ್ತಿದ್ದಾರೆ. ಭೂಕಂಪದಿಂದಾಗಿ ಬಂಡೆಗಳು ಮತ್ತು ಮಣ್ಣು ಪರ್ವತಗಳು ರಸ್ತೆ ಬಿದ್ದಿದ್ದು, ಸಂಚಾರ ಬಂದ್ ಆಗಿದೆ. ಈ ದುರಂತದಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ. 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 
icon

(1 / 8)

ತೈವಾನ್ 25 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಪ್ರಬಲ ಭೂಕಂಪವನ್ನು ಅನುಭವಿಸಿದೆ. ಭಂಕಪನ ಬಳಿಕ ಕಾಣೆಯಾದವರನ್ನ ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಶೋಧ ನಡೆಸುತ್ತಿದ್ದಾರೆ. ಭೂಕಂಪದಿಂದಾಗಿ ಬಂಡೆಗಳು ಮತ್ತು ಮಣ್ಣು ಪರ್ವತಗಳು ರಸ್ತೆ ಬಿದ್ದಿದ್ದು, ಸಂಚಾರ ಬಂದ್ ಆಗಿದೆ. ಈ ದುರಂತದಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ. 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. (AP)

ತೈವಾನ್ ನ ಹುವಾಲಿಯನ್ ನಲ್ಲಿ ಸಂಭವಿಸಿದ ಭೂಕಂಪದ ನಂತರ ಸಿಲ್ಕ್ಸ್ ಪ್ಲೇಸ್ ಟಾರೊಕೊ ಹೋಟೆಲ್‌ನಿಂದ ರಕ್ಷಣೆ ಮಾಡಿದ ನಂತರ ಮಹಿಳೆಯೊಬ್ಬಳು ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ.
icon

(2 / 8)

ತೈವಾನ್ ನ ಹುವಾಲಿಯನ್ ನಲ್ಲಿ ಸಂಭವಿಸಿದ ಭೂಕಂಪದ ನಂತರ ಸಿಲ್ಕ್ಸ್ ಪ್ಲೇಸ್ ಟಾರೊಕೊ ಹೋಟೆಲ್‌ನಿಂದ ರಕ್ಷಣೆ ಮಾಡಿದ ನಂತರ ಮಹಿಳೆಯೊಬ್ಬಳು ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ.(Bloomberg)

ತೈವಾನ್ ದ್ವೀಪವು ಎರಡೂವರೆ ದಶಕದ ಬಳಿಕ ಅತಿದೊಡ್ಡ ಭೂಕಂಪನವನ್ನು ಎದುರಿಸುತ್ತಿದ್ದು, ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಕಂಬನದ ಸಂಭವಿಸಿದ ಒಂದು ದಿನದ ಬಳಿಕ ಅವಶೇಷಗಳಡಿ ಸಿಲುಕಿರುವ ನೂರಾರು ಗಣಿಗಾರರು, ಹೋಟೆಲ್ ಸಿಬ್ಬಂದಿ ಮತ್ತು ಪ್ರವಾಸಿಗರ ರಕ್ಷಣೆಗಾಗಿ ತೈವಾನ್ ತುರ್ತು ಪ್ರತಿಕ್ರಿಯೆ ಘಟಕಗಳನ್ನು ತೆರೆದು ರಕ್ಷಣಾ ಕಾರ್ಯವನ್ನು ಮುಂದುವರಿಸಿದೆ.
icon

(3 / 8)

ತೈವಾನ್ ದ್ವೀಪವು ಎರಡೂವರೆ ದಶಕದ ಬಳಿಕ ಅತಿದೊಡ್ಡ ಭೂಕಂಪನವನ್ನು ಎದುರಿಸುತ್ತಿದ್ದು, ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಕಂಬನದ ಸಂಭವಿಸಿದ ಒಂದು ದಿನದ ಬಳಿಕ ಅವಶೇಷಗಳಡಿ ಸಿಲುಕಿರುವ ನೂರಾರು ಗಣಿಗಾರರು, ಹೋಟೆಲ್ ಸಿಬ್ಬಂದಿ ಮತ್ತು ಪ್ರವಾಸಿಗರ ರಕ್ಷಣೆಗಾಗಿ ತೈವಾನ್ ತುರ್ತು ಪ್ರತಿಕ್ರಿಯೆ ಘಟಕಗಳನ್ನು ತೆರೆದು ರಕ್ಷಣಾ ಕಾರ್ಯವನ್ನು ಮುಂದುವರಿಸಿದೆ.(REUTERS)

ವೀಡಿಯೊದಿಂದ ತೆಗೆದ ಈ ಸ್ಕ್ರೀನ್ಗ್ರಾಫ್ನಲ್ಲಿ, ತೈವಾನ್ನ ಹುವಾಲಿಯನ್ನಲ್ಲಿ ಭೂಕಂಪದ ನಂತರ ರಕ್ಷಣಾ ಸಿಬ್ಬಂದಿ ಒಬ್ಬ ವ್ಯಕ್ತಿಯನ್ನು ಸ್ಟ್ರೆಚರ್ನಲ್ಲಿ ಕರೆದೊಯ್ಯುವುದನ್ನು ಕಾಣಬಹುದು.
icon

(4 / 8)

ವೀಡಿಯೊದಿಂದ ತೆಗೆದ ಈ ಸ್ಕ್ರೀನ್ಗ್ರಾಫ್ನಲ್ಲಿ, ತೈವಾನ್ನ ಹುವಾಲಿಯನ್ನಲ್ಲಿ ಭೂಕಂಪದ ನಂತರ ರಕ್ಷಣಾ ಸಿಬ್ಬಂದಿ ಒಬ್ಬ ವ್ಯಕ್ತಿಯನ್ನು ಸ್ಟ್ರೆಚರ್ನಲ್ಲಿ ಕರೆದೊಯ್ಯುವುದನ್ನು ಕಾಣಬಹುದು.(REUTERS)

ಪೂರ್ವ ತೈವಾನ್ನ ಹುವಾಲಿಯನ್ ಕೌಂಟಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಒಂದು ದಿನದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಟಾರೊಕೊ ರಾಷ್ಟ್ರೀಯ ಉದ್ಯಾನವನದಿಂದ ಸ್ಥಳಾಂತರಿಸಿದ್ದಾರೆ.
icon

(5 / 8)

ಪೂರ್ವ ತೈವಾನ್ನ ಹುವಾಲಿಯನ್ ಕೌಂಟಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಒಂದು ದಿನದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಟಾರೊಕೊ ರಾಷ್ಟ್ರೀಯ ಉದ್ಯಾನವನದಿಂದ ಸ್ಥಳಾಂತರಿಸಿದ್ದಾರೆ.(AP)

ಪೂರ್ವ ತೈವಾನ್ ನ ಹುವಾಲಿಯನ್ ಕೌಂಟಿಯಲ್ಲಿರುವ ಟರೊಕೊ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಲುಕೊಂಡಿದ್ದ ಪ್ರವಾಸಿಗರನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಯಿತು.
icon

(6 / 8)

ಪೂರ್ವ ತೈವಾನ್ ನ ಹುವಾಲಿಯನ್ ಕೌಂಟಿಯಲ್ಲಿರುವ ಟರೊಕೊ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಲುಕೊಂಡಿದ್ದ ಪ್ರವಾಸಿಗರನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಯಿತು.(AP)

 ಭೂಕಂಪನದಿಂದ ತುಂಡಾದ ಬಂಡೆಗಳಡಿ ಸಿಲುಕಿದ್ದವರನ್ನು ರಕ್ಷಣಾ ಕಾರ್ಯಕರ್ತರು ಹಗ್ಗಗಳನ್ನು ಬಳಸಿ ರಕ್ಷಿಸಿದ್ದಾರೆ.
icon

(7 / 8)

 ಭೂಕಂಪನದಿಂದ ತುಂಡಾದ ಬಂಡೆಗಳಡಿ ಸಿಲುಕಿದ್ದವರನ್ನು ರಕ್ಷಣಾ ಕಾರ್ಯಕರ್ತರು ಹಗ್ಗಗಳನ್ನು ಬಳಸಿ ರಕ್ಷಿಸಿದ್ದಾರೆ.(AP)

ತೈವಾನ್‌ನ ಹಲವೆಡೆ ಭೂಕಂಪನದ ಬಳಿಕ ಸುರಂಗಗಳು ಅಥವಾ ಸಂಪರ್ಕ ಕಡಿತ ಪ್ರದೇಶಗಳಲ್ಲಿ ಸಿಲುಕಿರುವ 700 ಕ್ಕೂ ಹೆಚ್ಚು ಜನರೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆೆ. ಆದರೆ ಅವರು ಸುರಕ್ಷಿತವೆಂದು ನಂಬಲಾಗಿದ್ದರೂ ಸುಮಾರು 12ಕ್ಕೂ ಅಧಿಕ ಮಂದಿ ಸಂಪರ್ಕ ಕಳೆದುಕೊಂಡಿದ್ದಾರೆ. ಹೆಲಿಕ್ಟಾಪರ್‌ಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
icon

(8 / 8)

ತೈವಾನ್‌ನ ಹಲವೆಡೆ ಭೂಕಂಪನದ ಬಳಿಕ ಸುರಂಗಗಳು ಅಥವಾ ಸಂಪರ್ಕ ಕಡಿತ ಪ್ರದೇಶಗಳಲ್ಲಿ ಸಿಲುಕಿರುವ 700 ಕ್ಕೂ ಹೆಚ್ಚು ಜನರೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆೆ. ಆದರೆ ಅವರು ಸುರಕ್ಷಿತವೆಂದು ನಂಬಲಾಗಿದ್ದರೂ ಸುಮಾರು 12ಕ್ಕೂ ಅಧಿಕ ಮಂದಿ ಸಂಪರ್ಕ ಕಳೆದುಕೊಂಡಿದ್ದಾರೆ. ಹೆಲಿಕ್ಟಾಪರ್‌ಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.(Bloomberg)


ಇತರ ಗ್ಯಾಲರಿಗಳು