Iran Attacks Israel: ಇಸ್ರೇಲ್ ಮೇಲೆ ಇರಾನ್ ಮಾಡಿದ ಕ್ಷಿಪಣಿಗಳ ಪ್ರತಿ ದಾಳಿ ಹೇಗಿದೆ photos
World 3rd War ಇಸ್ರೇಲ್ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲಲು ಕಾಯುತ್ತಿದ್ದ ಇರಾನ್ ಈಗ ದಾಳಿ ಮಾಡಿದೆ. ಅದರಲ್ಲೂ ಬಗೆಬಗೆಯ ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಲಾಗಿದೆ. ಇದು ವಿಶ್ವದ ಮೂರನೇ ಜಾಗತಿಕ ಯುದ್ದ ಎಂದೇ ಬಿಂಬಿಸಲಾಗುತ್ತಿದೆ. ದಾಳಿಯ ಚಿತ್ರ ನೋಟ ಇಲ್ಲಿದೆ.
(1 / 7)
ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ಮೇಲೆ ದಾಳಿಗೆ ಹಲವು ದಿನಗಳಿಂದ ತಯಾರಿ ನಡೆಸುತ್ತಲೇ ಇದೆ. ಈಗಲೂ ಇನ್ನಷ್ಟು ಪ್ರತಿ ದಾಳಿಗೆ ಸಿದ್ದವಿರುವುದಾಗಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೊಂಡಿದೆ.
(2 / 7)
ಇಸ್ರೇಲ್‌ನ ಪ್ರಮುಖ ನಗರದ ಮೇಲೆ ಯುದ್ದದ ಕಾರ್ಮೋಡ ಜೋರಾಗಿಯೇದೆ. ಆರೇಳು ತಿಂಗಳಿನಿಂದ ಇಸ್ರೇಲ್ ನಿರಂತರವಾಗಿ ದಾಳಿ ನಡೆಸಿಕೊಂಡು ಬಂದಿತ್ತು. ಈಗ ಇರಾನ್ ಕ್ಷಿಪಣಿಗಳ ಮೂಲಕ ದಾಳಿ ಶುರು ಮಾಡಿದೆ.
(3 / 7)
ಶನಿವಾರ ರಾತ್ರಿ ಇರಾನ್ ರಕ್ಷಣಾ ಪಡೆಗಳು ಕ್ಷಿಪಣಿಗಳ ಮೂಲಕ ದಾಳಿ ಮಾಡಿದ ಚಿತ್ರವನ್ನು ಹಲವು ಮಾಧ್ಯಮಗಳು ಬಿಡುಗಡೆ ಮಾಡಿವೆ. ಅದರಲ್ಲೂ ಅತ್ಯಾಧುನಿಕ ದ್ರೋಣ್ ಗಳನ್ನು ದಾಳಿಗೆ ಬಳಸಲಾಗಿದೆ.
(4 / 7)
ಇಸ್ರೇಲ್‌ನಲ್ಲಿ ನೆಮಟಿಂ(Nevatim Air Base) ಸೇನಾ ನೆಲೆಯ ಸಮೀಪದಲ್ಲೂ ಇರಾನ್‌ನ ಕ್ಷಿಪಣಿಗಳು ದಾಳಿ ಮಾಡಿವೆ. ಸೇನಾ ನೆಲೆ ಜಖಂಗೊಳಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.
(5 / 7)
ಇಸ್ರೇಲ್‌ನ ನಗರಗಳ ಮನೆಗಳ ಮೇಲೆಯೇ ಕ್ಷಿಪಣಿಗಳ ಹಾರಾಟ ಜೋರಾಗಿಯೇ ಇದೆ. ಆದರೆ ಈವರೆಗೂ ಯಾವುದೇ ಜನವಸತಿ ಪ್ರದೇಶದ ಮೇಲೆ ದಾಳಿಯಾಗಿಲ್ಲ.
(6 / 7)
ಇರಾನ್ ಹಲವಾರು ಯುದ್ದ ವಿಮಾನಗಳನ್ನು ಅಣಿಗೊಳಿಸಿದೆ. ಅದರಲ್ಲೂ ಸ್ಪೋಟಿಸುವ ದ್ರೋಣ್‌ಗಳನ್ನು ಬಳಕೆ ಮಾಡುತ್ತಿದೆ. ಈ ಚಿತ್ರ ಇರಾನ್ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.
ಇತರ ಗ್ಯಾಲರಿಗಳು