Dubai Rains2024: ದುಬೈ ನಗರದಲ್ಲಿ ಕುಂಭದ್ರೋಣ ಮಳೆ, ಕೊಚ್ಚಿ ಹೋದ ಪ್ರವಾಸಿ ನಗರ, ಹೇಗಿದೆ ಮಳೆ ಸ್ಥಿತಿಗತಿ photos
ಒಂದೂವರೆ ವರ್ಷ ಕಾಲ ಸುರಿಯಬೇಕಾದ ಮಳೆ ಒಂದೇ ದಿನ ಬಂದರೆ ಹೇಗಿರಬೇಡ. ವಿಶ್ವದ ಪ್ರಮುಖ ಪ್ರವಾಸಿ ನಗರ ದುಬೈನಲ್ಲಿ ಬುಧವಾರ ಸುರಿದ ಮಳೆ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಅದರ ಚಿತ್ರಣ ಇಲ್ಲಿದೆ.
(1 / 8)
ದುಬೈ ಮಹಾನಗರದ ರಸ್ತೆಯಿದು. ಈ ರಸ್ತೆಯೇ ನದಿಯಾಗಿ ಮಾರ್ಪಡುವ ಮಟ್ಟಿಗೆ ಭಾರೀ ಮಳೆ ಸುರಿದಿದೆ. ಜನ ಮಳೆಯಿಂದ ಉಕ್ಕಿ ಹರಿಯುತ್ತಿರುವ ರಸ್ತೆಯಲ್ಲೇ ಸಂಚರಿಸುವ ಸನ್ನಿವೇಶವಿದು.
(2 / 8)
ಭಾರೀ ಮಳೆಯಿಂದ ದುಬೈನ ಸಹಸ್ರಾರು ವಾಹನಗಳು ನಿಂತಲ್ಲೇ ನಿಂತಿವೆ. ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಜನ ಪ್ರಯಾಸ ಪಟ್ಟುಕೊಂಡು ಹೋಗಬೇಕಾಗಿದೆ.
(3 / 8)
ದುಬೈನ ವಿಮಾನ ಸೇವೆಯಲ್ಲೂ ವ್ಯತ್ಯಯವಾಗಿದೆ. ಹಲವಾರು ವಿಮಾನಗಳನ್ನು ರದ್ದುಪಡಿಸಲಾಗಿದೆ. ಮಳೆ ಕಾರಣದಿಂದ ನೂರಾರು ವಿಮಾನ ನಿಲ್ದಾಣದಲ್ಲೇ ನಿಂತಿವೆ.
(5 / 8)
ದುಬೈನಲ್ಲಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಅಲ್ಲಿಗೆ ಆಹಾರವನ್ನು ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ.
(6 / 8)
ಇಂತಹ ಮಳೆ ಬಹಳ ವರ್ಷದಿಂದ ಬಂದಿರಲಿಲ್ಲ. ಮಳೆ ಮಾಲ್‌ಗಳು, ಅಪಾರ್ಟ್‌ಮೆಂಟ್‌ನ ಕೆಲವು ಮಹಡಿಗಳು ನುಗ್ಗಿದೆ. ಗಾಳಿಯ ರಭಸಕ್ಕೆ ಹಲವಾರು ವಸ್ತುಗಳು ಕೊಚ್ಚಿಕೊಂಡು ಹೋಗಿವೆ.
(7 / 8)
ಎರಡು ದಿನದಿಂದ ದುಬೈನಲ್ಲಿ ಮಳೆಯಿತ್ತು. ಸೋಮವಾರ ಹಾಗೂ ಮಂಗಳವಾರ ಸಣ್ಣ ಪ್ರಮಾಣದಲ್ಲಿದ್ದುದು ಬುಧವಾರ ಬೆಳಿಗ್ಗೆಯಿಂದ ಏಕಾಏಕಿ ಭಾರೀ ಪ್ರಮಾಣಕ್ಕೆ ತಿರುಗಿತು. ಇದರಿಂದ ಜನಜೀವನವೇ ಅಸ್ತವ್ಯಸ್ತಗೊಂಡಿತು. ಮಳೆಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಇತರ ಗ್ಯಾಲರಿಗಳು