International Tiger Day 2024: ಇವರು ಕರ್ನಾಟಕದ ವನ್ಯಜೀವಿ ಛಾಯಾಗ್ರಾಹಕರು, ಹುಲಿ ಆ ಕ್ಷಣಕ್ಕಾಗಿ ದಿನವಿಡೀ ಕಾದವರು, ಅವರ ಫೋಟೋ ಒಮ್ಮೆ ನೋಡಿ
- Wildlife Photography ಛಾಯಾಗ್ರಾಹಣ ಎನ್ನುವುದು ಒಂದು ರೀತಿ ಕಲೆ. ಅದಕ್ಕೆ ತಾಳ್ಮೆ, ಕೌಶಲ್ಯ ಎರಡೂ ಬೇಕು. ಹುಲಿ ದಿನದ(International Tiger Day 2024) ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ವನ್ಯಜೀವಿ ಛಾಯಾಗ್ರಾಹಕರು ವಿಭಿನ್ನವಾಗಿ ಹುಲಿ ಸೆರೆ ಹಿಡಿದ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.
- Wildlife Photography ಛಾಯಾಗ್ರಾಹಣ ಎನ್ನುವುದು ಒಂದು ರೀತಿ ಕಲೆ. ಅದಕ್ಕೆ ತಾಳ್ಮೆ, ಕೌಶಲ್ಯ ಎರಡೂ ಬೇಕು. ಹುಲಿ ದಿನದ(International Tiger Day 2024) ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ವನ್ಯಜೀವಿ ಛಾಯಾಗ್ರಾಹಕರು ವಿಭಿನ್ನವಾಗಿ ಹುಲಿ ಸೆರೆ ಹಿಡಿದ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.
(1 / 9)
ಎಂ.ಎನ್.ಜಯಕುಮಾರ್( MN Jayakumar) ಅವರದ್ದು ಛಾಯಾಗ್ರಹಣದಲ್ಲಿ ದೊಡ್ಡ ಹೆಸರು. ಐಎಫ್‌ಎಸ್ ಅಧಿಕಾರಿಯಾಗಿ ನಿವೃತ್ತರಾಗಿರುವ ಜಯಕುಮಾರ್ ಅವರು ಈಗಲೂ ಕ್ಯಾಮರಾ ಹೊತ್ತು ಕಾಡು ತಿರುಗಿ ವನ್ಯಜೀವಿಗಳ ಅಪರೂಪದ ಕ್ಷಣ ಸೆರೆ ಹಿಡಿಯುತ್ತಾರೆ.
(2 / 9)
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹನಗೋಡಿನಲ್ಲಿ ಪ್ರೌಢಶಾಲೆ ಶಿಕ್ಷಕಿಯಾಗಿರುವ ಛಾಯಾ ಸುನೀಲ್( Chaya Suneel) ಅವರಿಗೆ ಛಾಯಾಗ್ರಹಣ ಪ್ಯಾಷನ್. ಆಗಾಗ ಪ್ರವಾಸ ಮಾಡಿ ಫೋಟೋ ಪಕ್ಷಿ., ಪ್ರಾಣಿಗಳ ಫೋಟೋ ಕ್ಲಿಕ್ಕಿಸುತ್ತಲೇ ಇರುತ್ತಾರೆ.
(3 / 9)
ಇವರು ದಿನೇಶ್ ಬಸವಾಪಟ್ಟಣ( Dinesh Basavapatna). ಮೂಲತಃ ಹಾಸನ ಜಿಲ್ಲೆಯವರು. ಉದ್ಯಮಿ. ಛಾಯಾಗ್ರಾಹಣ ಇವರ ಹವ್ಯಾಸ. ವರ್ಷ ಮೂರ್ನಾಲ್ಕು ತಿಂಗಳು ಇದಕ್ಕೆ ಮೀಸಲಿಟ್ಟು ದೇಶದ ನಾನಾ ಕಡೆ ಪ್ರವಾಸ ಮಾಡುತ್ತಾರೆ.
(4 / 9)
ಡಾ.ಕಲೀಂ ಉಲ್ಲಾ( Dr.Kaleem Ulla) ಲೇಖಕರು. ಶಿವಮೊಗ್ಗದಲ್ಲಿ ಇಂಗ್ಲೀಷ್ ಅಧ್ಯಾಪಕರು. ಇವರದ್ದೂ ಛಾಯಾಗ್ರಾಹಣ ವಿಶೇಷ ಹವ್ಯಾಸ. ಇದಕ್ಕಾಗಿ ಕಾಡು ಸುತ್ತುತ್ತಾರೆ. ಲೇಖನಗಳನ್ನು ಬರೆಯುತ್ತಾರೆ.
(5 / 9)
ಹಾಸನ ಜಿಲ್ಲೆಯವರಾದ ಡಾ.ಲೋಕೇಶ್ ಮೊಸಳೆ( Lokesh Mosale) ಮೈಸೂರಿನಲ್ಲಿ ಅಧ್ಯಾಪಕ. ಛಾಯಾಗ್ರಾಹಕರಾಗಿ ಮೂರು ದಶಕದಿಂದ ವಿಭಿನ್ನ ಚಿತ್ರಗಳ ಮೂಲಕ ಮನೆ ಮಾತಾಗಿದ್ದಾರೆ.
(6 / 9)
ಕೊಡಗಿನವರಾದ ನಾಗೇಶ್ ಪಾಣತ್ತಲೆ( Nagesh Panathale) ಅವರು ವನ್ಯಜೀವಿ ಛಾಯಾಗ್ರಹಣದಲ್ಲಿ ಪ್ರಮುಖ ಹೆಸರು. ಅವರು ನಾಗರಹೊಳೆಯಲ್ಲಿ ಒಂದೇ ಹುಲಿ ಯ ಆರು ನೂರು ಫೋಟೋ ಕ್ಲಿಕ್ಕಿಸಿ ದಾಖಲೆ ಬರೆದವರು.
(7 / 9)
ಸುಪ್ರಿಯಾ( Supriya) ಮೈಸೂರಿನಲ್ಲಿ ಉದ್ಯೋಗಿ. ಛಾಯಾಗ್ರಹಣ ಇವರ ಹವ್ಯಾಸ. ಇದಕ್ಕಾಗಿ ಕಾಡು ಮೇಡು ಎನ್ನದೇ ಸುತ್ತಿ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮರಾ ಮೂಲಕ ಸೆರೆ ಹಿಡಿಯುತ್ತಾರೆ.
(8 / 9)
ಯುವ ಛಾಯಾಗ್ರಾಹಕ ಶ್ರೇಯಸ್ ದೇವನೂರು( Shreyas Devnoor) ಮೈಸೂರಿನವರು. ಸಣ್ಣ ವಯಸ್ಸಿನಲ್ಲಿಯೇ ಛಾಯಾಗ್ರಹಣ ಕಲೆ ಅವರಿಗೆ ಸಿದ್ದಿಸಿದೆ. ವಿಭಿನ್ನ ಚಿತ್ರಗಳೊಂದಿಗೆ ತಮ್ಮ ಕೌಶಲ್ಯವನ್ನು ತೆರೆದಿಟ್ಟಿದ್ದಾರೆ ಶ್ರೇಯಸ್.
ಇತರ ಗ್ಯಾಲರಿಗಳು