International Tiger Day 2024: ಇವರು ಕರ್ನಾಟಕದ ವನ್ಯಜೀವಿ ಛಾಯಾಗ್ರಾಹಕರು, ಹುಲಿ ಆ ಕ್ಷಣಕ್ಕಾಗಿ ದಿನವಿಡೀ ಕಾದವರು, ಅವರ ಫೋಟೋ ಒಮ್ಮೆ ನೋಡಿ-international tiger day 2024 karnataka wildlife photographers clicked tiger waiting for days in forests kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  International Tiger Day 2024: ಇವರು ಕರ್ನಾಟಕದ ವನ್ಯಜೀವಿ ಛಾಯಾಗ್ರಾಹಕರು, ಹುಲಿ ಆ ಕ್ಷಣಕ್ಕಾಗಿ ದಿನವಿಡೀ ಕಾದವರು, ಅವರ ಫೋಟೋ ಒಮ್ಮೆ ನೋಡಿ

International Tiger Day 2024: ಇವರು ಕರ್ನಾಟಕದ ವನ್ಯಜೀವಿ ಛಾಯಾಗ್ರಾಹಕರು, ಹುಲಿ ಆ ಕ್ಷಣಕ್ಕಾಗಿ ದಿನವಿಡೀ ಕಾದವರು, ಅವರ ಫೋಟೋ ಒಮ್ಮೆ ನೋಡಿ

  • Wildlife Photography  ಛಾಯಾಗ್ರಾಹಣ ಎನ್ನುವುದು ಒಂದು ರೀತಿ ಕಲೆ. ಅದಕ್ಕೆ ತಾಳ್ಮೆ, ಕೌಶಲ್ಯ ಎರಡೂ ಬೇಕು. ಹುಲಿ ದಿನದ(International Tiger Day 2024)  ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ವನ್ಯಜೀವಿ ಛಾಯಾಗ್ರಾಹಕರು ವಿಭಿನ್ನವಾಗಿ ಹುಲಿ ಸೆರೆ ಹಿಡಿದ ಫೋಟೋಗಳನ್ನು ಇಲ್ಲಿ  ನೀಡಲಾಗಿದೆ.

ಎಂ.ಎನ್‌.ಜಯಕುಮಾರ್‌( MN Jayakumar) ಅವರದ್ದು ಛಾಯಾಗ್ರಹಣದಲ್ಲಿ ದೊಡ್ಡ ಹೆಸರು. ಐಎಫ್‌ಎಸ್‌ ಅಧಿಕಾರಿಯಾಗಿ ನಿವೃತ್ತರಾಗಿರುವ ಜಯಕುಮಾರ್‌ ಅವರು ಈಗಲೂ ಕ್ಯಾಮರಾ ಹೊತ್ತು ಕಾಡು ತಿರುಗಿ ವನ್ಯಜೀವಿಗಳ ಅಪರೂಪದ ಕ್ಷಣ ಸೆರೆ ಹಿಡಿಯುತ್ತಾರೆ.
icon

(1 / 9)

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹನಗೋಡಿನಲ್ಲಿ ಪ್ರೌಢಶಾಲೆ ಶಿಕ್ಷಕಿಯಾಗಿರುವ ಛಾಯಾ ಸುನೀಲ್‌( Chaya Suneel) ಅವರಿಗೆ ಛಾಯಾಗ್ರಹಣ ಪ್ಯಾಷನ್‌. ಆಗಾಗ ಪ್ರವಾಸ ಮಾಡಿ ಫೋಟೋ ಪಕ್ಷಿ., ಪ್ರಾಣಿಗಳ ಫೋಟೋ ಕ್ಲಿಕ್ಕಿಸುತ್ತಲೇ ಇರುತ್ತಾರೆ.
icon

(2 / 9)

ಇವರು ದಿನೇಶ್‌ ಬಸವಾಪಟ್ಟಣ( Dinesh Basavapatna). ಮೂಲತಃ ಹಾಸನ ಜಿಲ್ಲೆಯವರು. ಉದ್ಯಮಿ. ಛಾಯಾಗ್ರಾಹಣ ಇವರ ಹವ್ಯಾಸ. ವರ್ಷ ಮೂರ್ನಾಲ್ಕು ತಿಂಗಳು ಇದಕ್ಕೆ ಮೀಸಲಿಟ್ಟು ದೇಶದ ನಾನಾ ಕಡೆ ಪ್ರವಾಸ ಮಾಡುತ್ತಾರೆ. 
icon

(3 / 9)

ಡಾ.ಕಲೀಂ ಉಲ್ಲಾ( Dr.Kaleem Ulla) ಲೇಖಕರು. ಶಿವಮೊಗ್ಗದಲ್ಲಿ ಇಂಗ್ಲೀಷ್‌ ಅಧ್ಯಾಪಕರು. ಇವರದ್ದೂ ಛಾಯಾಗ್ರಾಹಣ ವಿಶೇಷ ಹವ್ಯಾಸ. ಇದಕ್ಕಾಗಿ ಕಾಡು ಸುತ್ತುತ್ತಾರೆ. ಲೇಖನಗಳನ್ನು ಬರೆಯುತ್ತಾರೆ. 
icon

(4 / 9)

ಹಾಸನ ಜಿಲ್ಲೆಯವರಾದ ಡಾ.ಲೋಕೇಶ್‌ ಮೊಸಳೆ( Lokesh Mosale) ಮೈಸೂರಿನಲ್ಲಿ ಅಧ್ಯಾಪಕ. ಛಾಯಾಗ್ರಾಹಕರಾಗಿ ಮೂರು ದಶಕದಿಂದ ವಿಭಿನ್ನ ಚಿತ್ರಗಳ ಮೂಲಕ ಮನೆ ಮಾತಾಗಿದ್ದಾರೆ.
icon

(5 / 9)

ಕೊಡಗಿನವರಾದ ನಾಗೇಶ್‌ ಪಾಣತ್ತಲೆ( Nagesh Panathale) ಅವರು ವನ್ಯಜೀವಿ ಛಾಯಾಗ್ರಹಣದಲ್ಲಿ ಪ್ರಮುಖ ಹೆಸರು. ಅವರು ನಾಗರಹೊಳೆಯಲ್ಲಿ ಒಂದೇ ಹುಲಿ ಯ ಆರು ನೂರು ಫೋಟೋ ಕ್ಲಿಕ್ಕಿಸಿ ದಾಖಲೆ ಬರೆದವರು. 
icon

(6 / 9)

ಸುಪ್ರಿಯಾ( Supriya) ಮೈಸೂರಿನಲ್ಲಿ ಉದ್ಯೋಗಿ. ಛಾಯಾಗ್ರಹಣ ಇವರ ಹವ್ಯಾಸ. ಇದಕ್ಕಾಗಿ ಕಾಡು ಮೇಡು ಎನ್ನದೇ ಸುತ್ತಿ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮರಾ ಮೂಲಕ ಸೆರೆ ಹಿಡಿಯುತ್ತಾರೆ.
icon

(7 / 9)

ಯುವ ಛಾಯಾಗ್ರಾಹಕ ಶ್ರೇಯಸ್‌ ದೇವನೂರು( Shreyas Devnoor) ಮೈಸೂರಿನವರು. ಸಣ್ಣ ವಯಸ್ಸಿನಲ್ಲಿಯೇ ಛಾಯಾಗ್ರಹಣ ಕಲೆ ಅವರಿಗೆ ಸಿದ್ದಿಸಿದೆ. ವಿಭಿನ್ನ ಚಿತ್ರಗಳೊಂದಿಗೆ ತಮ್ಮ ಕೌಶಲ್ಯವನ್ನು ತೆರೆದಿಟ್ಟಿದ್ದಾರೆ ಶ್ರೇಯಸ್‌.
icon

(8 / 9)

ಜಿ.ಎಸ್‌.ರವಿಶಂಕರ್(‌ GS Ravishankar) ಕೂಡ ಮೈಸೂರಿನವರು. ಹಲವಾರು ವರ್ಷಗಳಿಂದ ವನ್ಯಜೀವಿಗಳ ಚಿತ್ರಗಳನ್ನು ಸೆರೆ ಹಿಡಿದಿರುವವರು. ಅನಾರೋಗ್ಯದಿಂದ ಈಗ ಬಿಡುವು ನೀಡಿದ್ದರೂ ಅವರ ಕಾಡಿನ ತುಡಿತ ಬಿಟ್ಟಿಲ್ಲ.
icon

(9 / 9)

ಇತರ ಗ್ಯಾಲರಿಗಳು