International Women Day 2024: ಕಿರಣ್ ಮಜುಂದಾರ್ ಷಾ, ಲೀನಾ ನಾಯರ್ ಸೇರಿದಂತೆ ಭಾರತದ 5 ಅತ್ಯಂತ ಪ್ರಭಾವಿ ಮಹಿಳಾ ಸಿಇಓಗಳಿವರು
International Women's Day: ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಪ್ರತಿದಿನವೂ ಮಹಿಳೆಯರ ದಿನವೇ. ಅದರೆ ವರ್ಷಕ್ಕೆ ಒಮ್ಮೆಯಾದರೂ ಆಕೆಯ ತ್ಯಾಗ, ಸಾಧನೆಯನ್ನು ನೆನಪಿಸುವ ದಿನವಾಗಲಿ ಎಂದು ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗಿದೆ. ಭಾರತದಲ್ಲಿ ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ.
(1 / 6)
ವಿಶ್ವಾದ್ಯಂತ ಮಹಿಳೆಯರ ಸಾಧನೆ, ಕೊಡುಗೆಗಳನ್ನು ಸ್ಮರಿಸಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇದು ಪ್ರಪಂಚದಾದ್ಯಂತ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಮಹತ್ವವನ್ನು ನೆನಪಿಸುತ್ತದೆ. ಭಾರತದಲ್ಲಿ ಮಹಿಳಾ ಸಿಇಒಗಳು ವಿವಿಧ ಉದ್ಯಮಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದಾರೆ ಮತ್ತು ಅಡೆತಡೆಗಳನ್ನು ನಿವಾರಿಸುತ್ತಿದ್ದಾರೆ. ಅವರು ತಮ್ಮ ನಾಯಕತ್ವದ ಗುಣಗಳಿಂದ ಇತರರರಿಗೆ ಮಾದರಿಯಾಗಿ ನಿಂತಿದ್ದಾರೆ.
(2 / 6)
ಸ್ವಾತಿ ಅಜಯ್ ಪಿರಮಲ್: ಆರೋಗ್ಯ ರಕ್ಷಣೆ ಮತ್ತು ನಾವೀನ್ಯತೆಯ ಬಗ್ಗೆ ಆಸಕ್ತಿ ಹೊಂದಿರುವ ಸ್ವಾತಿ ಅಜಯ್ ಪಿರಮಲ್ ಅವರು ಪಿರಮಲ್ ಗ್ರೂಪ್‌ನ ಉಪಾಧ್ಯಕ್ಷರಾಗಿದ್ದಾರೆ. ಅವರ ನಾಯಕತ್ವವು ಭಾರತದಲ್ಲಿ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ತಮಗೆ ಇದ್ದ ಎಲ್ಲಾ ಅಡೆತಡೆಗಳನ್ನು ದಾಟಿ ಅವರು ಮಾಡಿದ ಸಾಧನೆ ಎಲ್ಲರಿಗೂ ಸ್ಫೂರ್ತಿ. (PTI)
(3 / 6)
ದೇವಿಕಾ ಬುಲ್ಚಂದಾನಿ: ದೇವಿಕಾ ಬುಲ್ಚಂದಾನಿ ಅವರು ಕೆಲವು ಅಪ್ರತಿಮ ಜಾಹೀರಾತು ಪ್ರಚಾರಗಳ ಹಿಂದಿನ ಪ್ರೇರಕ ಶಕ್ತಿಯಾಗಿದ್ದಾರೆ. ಆಕೆಯ ಸೃಜನಶೀಲತೆ, ದೃಷ್ಟಿ ಮತ್ತು ಕಾರ್ಯತಂತ್ರದ ಕುಶಾಗ್ರಮತಿಯು ಜಾಹೀರಾತು ಉದ್ಯಮದಲ್ಲಿ ಮನ್ನಣೆ ಗಳಿಸಿಕೊಟ್ಟಿದೆ. ಮಹಿಳೆಯರು ಸೃಜನಶೀಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೇರೇಪಿಸಿದ ಇವರು ಸದ್ಯಕ್ಕೆ ಓಗಿಲ್ವಿ ನಾರ್ತ್ ಅಮೆರಿಕದ CEO ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. (ogilvy.com)
(4 / 6)
ಲೀನಾ ನಾಯರ್: ಚಾನೆಲ್‌ವೊಂದರ CEO ಆಗಿ ಕೆಲಸ ನಿರ್ವಹಿಸುತ್ತಿರುವ ಲೀನಾ ನಾಯರ್ ಫ್ಯಾಷನ್ ಉದ್ಯಮದಲ್ಲೂ ಎತ್ತಿದ ಕೈ. ಆಕೆಯ ಕಾರ್ಯತಂತ್ರದ ದೃಷ್ಟಿ ಮತ್ತು ನಾಯಕತ್ವವು ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿದೆ, ಫ್ಯಾಷನ್ ಉದ್ಯಮದಲ್ಲಿ ಮಹತ್ವಾಕಾಂಕ್ಷೆಯ ಮಹಿಳೆಯರಿಗೆ ಅವರು ಮಾದರಿಯಾಗಿದ್ದಾರೆ.(HT File Photo)
(5 / 6)
ಕಿರಣ್ ಮಜುಂದಾರ್ ಷಾ: ಇವರು ಭಾರತದಲ್ಲಿ ಜೈವಿಕ ತಂತ್ರಜ್ಞಾನ ಉದ್ಯಮದ ಪ್ರವರ್ತಕರು. ಬಯೋಕಾನ್ ಲಿಮಿಟೆಡ್‌ನ ಸಂಸ್ಥಾಪಕರಾಗಿ ಗುರುತಿಸಿಕೊಂಡಿದ್ದಾರೆ, ಅವರ ದಣಿವರಿಯದ ಕೆಲಸ ಮತ್ತು ಸಮರ್ಪಣಾ ಮನೋಭಾವ ಬಯೋಕಾನ್ ಅನ್ನು ಜೈವಿಕ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕರನ್ನಾಗಿ ಮಾಡಿದೆ. ಪ್ರಪಂಚದ ಮಹಿಳಾ ಉದ್ಯಮಿಗಳಿಗೆ ಇವರೂ ಸ್ಫೂರ್ತಿ. (HT File Photo)
(6 / 6)
ರೋಶಿನಿ ನಾಡಾರ್: ಹೆಚ್‌ಸಿಎಲ್ ಟೆಕ್ನಾಲಜೀಸ್‌ನ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ರೋಶಿನಿ ನಾಡಾರ್, ಟೆಕ್ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಸೃಜನಶೀಲತೆಗೆ ಬದ್ಧತೆ ಮತ್ತು ಸುಸ್ಥಿರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದ ಅವರು HCL ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ತನ್ನಂತೆ ಸಾಧನೆ ಮಾಡಬೇಕೆನ್ನುವ ಇತರ ಮಹಿಳೆಯರಿಗೂ ಸ್ಫೂರ್ತಿಯಾಗಿದ್ದಾರೆ. (HT Photo)
ಇತರ ಗ್ಯಾಲರಿಗಳು