ಕನ್ನಡ ಸುದ್ದಿ  /  Photo Gallery  /  International Womens Day 2024 Firsts By Indian Women Who Have Made The Nation Proud In Sports Mary Kom Mithali Raj Mgb

Women's Day Special: ಕ್ರೀಡಾ ಕ್ಷೇತ್ರದಲ್ಲಿ ಪ್ರಥಮಗಳಿಗೆ ಕಾರಣರಾದ ಭಾರತೀಯ ಮಹಿಳೆಯರು

  • Firsts by Indian Women in Sports: ಹೆಣ್ಣಿಂದ ಅಸಾಧ್ಯ ಎಂಬುದಿಲ್ಲ, ಹೆಣ್ಣಿಂದ ಎಲ್ಲವೂ ಸಾಧ್ಯ ಎಂದು ನಮ್ಮ ಭಾರತಹ ಹೆಣ್ಮಕ್ಕಳು ಸಾಬೀತು ಮಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲೂ ಇವರ ಸಾಧನೆ ಅಪಾರ. ಅಂತಾರಾಷ್ಟ್ರೀಯ ಮಹಿಳಾ ದಿನ ಸಮೀಪಿಸುತ್ತಿರುವ ಈ ಸಮಯದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಪ್ರಥಮಗಳಿಗೆ ಕಾರಣರಾದ ಭಾರತೀಯ ಮಹಿಳೆಯರು ಬಗ್ಗೆ ತಿಳಿಯೋಣ.

ಮೇರಿ ಕೋಮ್: ಆರು ಬಾರಿ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ ಆಗುವ ಮೂಲಕ ಭಾರತಕ್ಕೆ ಹೆಮ್ಮೆ ತಂದ ಮೇರಿ ಕೋಮ್ ಅವರು ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆಯಾಗಿದ್ದಾರೆ.  
icon

(1 / 8)

ಮಿಥಾಲಿ ರಾಜ್: ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಲೇಡಿ ತೆಂಡೂಲ್ಕರ್ ಎಂದೇ ಕರೆಸಿಕೊಳ್ಳುವ ಮಿಥಾಲಿ ರಾಜ್, 200 ಏಕದಿನ ಪಂದ್ಯಗಳನ್ನಾಡಿದ ಭಾರತ ತಂಡದ ಏಕೈಕ‌ ಮಹಿಳಾ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. 2019ರ ಫೆಬ್ರವರಿ 1ರಂದು ನಡೆದ‌ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಈ‌ ದಾಖಲೆ‌ ಬರೆದರು. 
icon

(2 / 8)

ದೀಪಾ ಕರ್ಮಾಕರ್: 2016 ರಲ್ಲಿ ಒಲಿಂಪಿಕ್ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಜಿಮ್ನಾಸ್ಟ್ ಆಗಿದ್ದಾರೆ.  
icon

(3 / 8)

ಸೈನಾ ನೆಹ್ವಾಲ್: 2015 ರಲ್ಲಿ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಸೈನಾ ನೆಹ್ವಾಲ್ ಅವರು ನಂಬರ್​ 1 ಸ್ಥಾನಕ್ಕೇರಿದ್ದರು. ಈ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಇವರಾಗಿದ್ದಾರೆ. 
icon

(4 / 8)

ಹಿಮಾ ದಾಸ್:  ಭಾರತೀಯ ಸ್ಪ್ರಿಂಟ್ ಓಟಗಾರ್ತಿ ಹಿಮಾ ದಾಸ್ IAAF ವಿಶ್ವ U20 ಚಾಂಪಿಯನ್‌ಶಿಪ್‌ನಲ್ಲಿ ಟ್ರ್ಯಾಕ್ ಈವೆಂಟ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು. 
icon

(5 / 8)

ದೀಪಾ ಮಲಿಕ್: 2016 ರ ಸಮ್ಮರ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಇವರು.  
icon

(6 / 8)

ಕವಿತಾ ದೇವಿ:  WWE ನಲ್ಲಿ ಕುಸ್ತಿಯಾಡಿದ ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು.
icon

(7 / 8)

ಕ್ರೀಡಾ ಕ್ಷೇತ್ರದಲ್ಲಿ ಪ್ರಥಮಗಳಿಗೆ ಕಾರಣರಾದ ಭಾರತೀಯ ಮಹಿಳೆಯರಿವರು 
icon

(8 / 8)

ಕ್ರೀಡಾ ಕ್ಷೇತ್ರದಲ್ಲಿ ಪ್ರಥಮಗಳಿಗೆ ಕಾರಣರಾದ ಭಾರತೀಯ ಮಹಿಳೆಯರಿವರು 

IPL_Entry_Point

ಇತರ ಗ್ಯಾಲರಿಗಳು