Womens Day 2024: ರಾಜಕೀಯ ರಂಗದಲ್ಲಿ ವಿಶಿಷ್ಟ ಸಾಧನೆ ಮಾಡಿ, ಇತಿಹಾಸ ಸೃಷ್ಟಿಸಿದ ವಿಶ್ವದ 5 ಪ್ರಭಾವಿ ಮಹಿಳೆಯರಿವರು
- ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭ ರಾಜಕೀಯ ರಂಗದಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದ ವಿಶ್ವದ 5 ಪ್ರಭಾವಿ ಮಹಿಳೆಯರ ಪರಿಚಯ ಇಲ್ಲಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕಮಲಾ ಹ್ಯಾರಿಸ್‌ವರೆಗೆ ಇವರ ಸಾಧನೆ ತಿಳಿಯಿರಿ.
- ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭ ರಾಜಕೀಯ ರಂಗದಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದ ವಿಶ್ವದ 5 ಪ್ರಭಾವಿ ಮಹಿಳೆಯರ ಪರಿಚಯ ಇಲ್ಲಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕಮಲಾ ಹ್ಯಾರಿಸ್‌ವರೆಗೆ ಇವರ ಸಾಧನೆ ತಿಳಿಯಿರಿ.
(1 / 7)
ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಎಲ್ಲಾ ರಂಗದಲ್ಲೂ ಮಿಂಚುತ್ತಿದ್ದಾರೆ. ಭೂಮಿಯಿಂದ ಬಾಹ್ಯಾಕಾಶದವರೆಗೆ ಹೆಣ್ಣುಮಕ್ಕಳ ಸಾಧನೆ ಅನನ್ಯ. ರಾಜಕೀಯ ರಂಗದಲ್ಲಿ ಹೆಣ್ಣುಮಕ್ಕಳು ಹಿಂದಿಲ್ಲ. ಈ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿ, ಜಗತ್ತಿಗೆ ಮಾದರಿಯಾದ 5 ಪ್ರಭಾವಿ ಮಹಿಳೆಯರ ಪರಿಚಯ ಇಲ್ಲಿದೆ. ಇದರಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಇದೆ ಸ್ಥಾನ.
(2 / 7)
ಕಮಲಾ ಹ್ಯಾರಿಸ್: ಭಾರತ ಮೂಲದ ಕಮಲಾ ಹ್ಯಾರಿಸ್ 2021ರಲ್ಲಿ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇವರು ಮಹಿಳಾ ಹಕ್ಕುಗಳು, ಜನಾಂಗೀಯ ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ. ಇವರು ರಾಜಕೀಯ ರಂಗದಲ್ಲಿ ಮಾಡಿದ ಸಾಧನೆಯು ಮಹಿಳೆಯರಿಗೆ ಹೊಸ ಅವಕಾಶದ ಬಾಗಿಲು ತೆರೆಯುವಂತೆ ಮಾಡಿದ್ದು ಸುಳ್ಳಲ್ಲ.
(3 / 7)
ದ್ರೌಪದಿ ಮರ್ಮು: 2022ರಲ್ಲಿ ಭಾರತದ ರಾಜಕೀಯ ಇತಿಹಾಸದಲ್ಲಿ ಕಾಂತ್ರಿಯೊಂದು ನಡೆದಿತ್ತು. ಅದೇನೆಂದರೆ ಇದೇ ಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಉನ್ನತ ರಾಷ್ಟ್ರಪತಿ ಹುದ್ದೆಯನ್ನು ಸ್ವೀಕರಿಸಿದ್ದರು. 2022ರ ಜೂನ್ 21 ರಂದು ಒಡಿಶಾ ಮೂಲದ ಬುಡಕಟ್ಟು ನಾಯಕಿ ದೌಪ್ರದಿ ಮುರ್ಮು ಅವರನ್ನು ಎನ್‌ಡಿಎ ಸರ್ಕಾರ ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿತ್ತು. ಬುಡಕಟ್ಟು ಮೂಲದಿಂದ ರಾಜಕೀಯ ರಂಗಕ್ಕೆ ಬಂದು ಭಾರತದ ರಾಷ್ಟ್ರಪತಿಯಾಗಿರುವ ದ್ರೌಪದಿ ಅವರ ಆರಂಭದ ಹಾದಿ ಹೂವಿನ ಹಾಸಿಗೆಯೇನು ಆಗಿರಲಿಲ್ಲ. ಹಲವು ಸವಾಲುಗಳನ್ನು ಎದುರಿಸಿ ಆಕೆ ಈ ಉನ್ನತ ಸ್ಥಾನಕ್ಕೇರಿದ್ದಾರೆ. ಇವರ ಸಾಧನೆಯ ಹಾದಿಯು ಹಲವು ಮಹಿಳೆಯರಿಗೆ ಸ್ಫೂರ್ತಿಯಾಗಿರುವುದು ಸುಳ್ಳಲ್ಲ.
(4 / 7)
ತ್ಸೈ ಇಂಗ್-ವೆನ್: 2016 ಜನವರಿಯಲ್ಲಿ ತೈವಾನ್‌ನ ಮೊದಲ ಅಧ್ಯಕ್ಷೆಯಾಗಿ ಇತಿಹಾಸ ನಿರ್ಮಿಸಿದ್ದರು ತ್ಸೈ ಇಂಗ್-ವೆನ್. ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ ಸದಸ್ಯರಾಗಿರುವ ತ್ಸೈ ಅವರು ಚೀನಾದಿಂದ ತೈವಾನ್‌ನ ಸ್ವಾತಂತ್ರ್ಯ ಪಡೆಯುವ ವಿಚಾರದಲ್ಲಿ ಹೋರಾಟ ನಡೆಸುತ್ತಾರೆ. ಇವರು ಬಡವರ್ಗ, ಮಹಿಳೆಯರು ಪರವಾಗಿ ಧ್ವನಿ ಎತ್ತುತ್ತಾರೆ. 2016 ರಲ್ಲಿ ಫೋರ್ಬ್ಸ್‌ನಿಂದ 17ನೇ ಅತ್ಯಂತ ಶಕ್ತಿಶಾಲಿ ಮಹಿಳೆಯಾಗಿ ಅವರ ಪಟ್ಟವು ಇವರಿಗೂ ದಕ್ಕಿದೆ.
(5 / 7)
ಶೇಖ್ ಹಸೀನಾ ವಾಜೇದ್: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ವಾಜೆದ್ ಅವರು ಒಟ್ಟು 5 ಬಾರಿ ಪ್ರಚಂಡ ಗೆಲುವನ್ನು ಸಾಧಿಸಿದ ಗಿಟ್ಟಿಗಿತ್ತಿ. ಇವರು ಪ್ರಜಾಪ್ರಭುತ್ವಕ್ಕಾಗಿ ಪ್ರತಿಪಾದಿಸಿದವರು, ಮಾನವ ಹಕ್ಕುಗಳನ್ನು ಬೆಂಬಲಿಸಿದ್ದರು. ಹಿಂಸಾತ್ಮಕ ಮಿಲಿಟರಿ ಆಡಳಿತವನ್ನು ಖಂಡಿಸುವ ಮನೋಭಾವದವರು. 2023 ರಲ್ಲಿ ಫೋರ್ಬ್ಸ್‌ನ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 46 ನೇ ಸ್ಥಾನವನ್ನು ಪಡೆದ ಹೆಗ್ಗಳಿಕೆ ಇವರದ್ದು.
(6 / 7)
ಏಂಜೆಲಾ ಮರ್ಕೆಲ್: 2005 ರಿಂದ 2021 ರವರೆಗೆ, ಏಂಜೆಲಾ ಮರ್ಕೆಲ್ ಜರ್ಮನಿಯ ಚಾನ್ಸೆಲರ್ ಆಗಿ ಸೇವೆ ಸಲ್ಲಿಸಿದರು. ಈ ಸ್ಥಾನವನ್ನು ಪಡೆದ ಮೊದಲ ಮಹಿಳೆ ಮತ್ತು ಜರ್ಮನಿಯ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎರಡನೇ ಚಾನ್ಸೆಲರ್ ಎಂಬುದಕ್ಕೆ ಪಾತ್ರರಾಗಿದ್ದಾರೆ. ಸಿರಿಯನ್ ನಿರಾಶ್ರಿತರ ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸಿಗರಿಗೆ ಜರ್ಮನಿಯಲ್ಲಿ ನೆಲೆಸಲು ಅವಕಾಶ ನೀಡಿರುವ ಖ್ಯಾತಿ ಇವರದ್ದು, ಇದಕ್ಕಾಗಿ ಆಕೆ ಸಾಕಷ್ಟು ವಿರೋಧಗಳನ್ನು ಕಟ್ಟಿಕೊಂಡಿದ್ದರು. ದಿಟ್ಟ ನಿಲುವು ಹಾಗೂ ಕೌಶಲಗಳ ಮೂಲಕ ಹೆಸರು ಗಳಿಸುವ ಈಕೆಯ ಸಾಧನೆ ಜಗತ್ತಿನ ಮಹಿಳೆಯರಿಗೆ ಮಾದರಿ.
ಇತರ ಗ್ಯಾಲರಿಗಳು