ಕನ್ನಡ ಸುದ್ದಿ  /  Photo Gallery  /  International Womens Day 2024 Women Independence In India Equal Rights For Women Law In Foreign Countries Rst

Women's Day 2024: ಭಾರತದಲ್ಲಿ ಮಹಿಳೆಗೆ ಸ್ವಾತಂತ್ರ್ಯವಿಲ್ಲ ಎನ್ನುವ ಮುನ್ನ ವಿದೇಶದಲ್ಲಿನ ಈ ಕಾನೂನುಗಳ ಬಗ್ಗೆಯೂ ತಿಳಿಯಿರಿ

  • ಮಹಿಳಾ ಸ್ವಾತಂತ್ರದ ವಿಚಾರಕ್ಕೆ ಬಂದಾಗ ಇಂದಿಗೂ ಅಪಸ್ವರಗಳು ಮೂಡುವುದು ಸಹಜ. ಭಾರತದಂತಹ ದೇಶದಲ್ಲಿ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯವಿಲ್ಲ, ಕಾನೂನು ಸುರಕ್ಷತೆಯೂ ಇಲ್ಲ ಎಂಬ ದೂರು ಕೂಡ ಇದೆ. ಆದರೆ ಇದಕ್ಕೂ ಮುನ್ನ ವಿಶ್ವದ ದೊಡ್ಡಣ್ಣ ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಹೆಣ್ಣುಮಕ್ಕಳ ವಿಚಾರದಲ್ಲಿ ಕಾನೂನುಗಳು ಹೇಗಿವೆ ಎಂಬುದನ್ನು ಅರಿಯಿರಿ.

ಪ್ರತಿವರ್ಷ ಮಾರ್ಚ್‌ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಹೆಣ್ಣು ಸಮಾಜದ ಕಣ್ಣು ಎಂಬ ನಾಣ್ನುಡಿ ಇದ್ದರೂ ಹೆಣ್ಣಿಗೆ ಸಲ್ಲಬೇಕಾದ ಸ್ವಾತಂತ್ರ್ಯ, ಗೌರವ ಇಂದಿಗೂ ಸಿಗುತ್ತಿಲ್ಲ ಎಂಬ ದೂರುಗಳು ಸಹ ಕೇಳಿ ಬರುತ್ತವೆ. ಭಾರತದಲ್ಲಿ ಲಿಂಗ ಸಮಾನತೆ ಇಲ್ಲ, ಹೆಣ್ಣುಮಕ್ಕಳಿಗೆ ಅವಕಾಶವಿಲ್ಲ, ಹೆಣ್ಣುಮಕ್ಕಳಿಗೆ ಸುರಕ್ಷತೆಯಿಲ್ಲ ಎಂದೆಲ್ಲಾ ಹೇಳುವ ಮುನ್ನ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ವಿದೇಶಗಳಲ್ಲಿನ ಕಾನೂನುಗಳ ಬಗ್ಗೆಯೂ ಅರಿಯುವುದು ಬಹಳ ಮುಖ್ಯ. ಅಮೆರಿಕ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಹೆಣ್ಣುಮಕ್ಕಳಿಗಿರುವ ಕಾನೂನು ಹಾಗೂ ಸ್ವಾತಂತ್ರ್ಯದ ಬಗ್ಗೆ ಅರಿಯಿರಿ. 
icon

(1 / 10)

ಅಮೆರಿಕದ 7 ರಾಜ್ಯಗಳಲ್ಲಿ ಇಂದಿಗೂ ಅತ್ಯಾಚಾರ ಎಸಗಿದ (ರೇಪಿಸ್ಟ್) ವ್ಯಕ್ತಿ ಮಗುವಿನ ಕಸ್ಟಡಿ ಪಡೆಯಬಹದು. ಅಂದರೆ ಆಕಸ್ಮಿಕವಾಗಿ ಇಂತಹ ಸಮಯದಲ್ಲಿ ಸಂತ್ರಸ್ತೆಯು (ವಿಕ್ಟಿಮ್) ಮಗುವಿಗೆ ಜನ್ಮವಿತ್ತರೆ ಅತ್ಯಾಚಾರಿಯು ಆ ಮಗುವಿನ ಪೂರ್ಣ ಜವಾಬ್ದಾರಿ (ಫುಲ್ ಕಸ್ಟಡಿ) ಅಥವಾ ಜಂಟಿ ಜವಾಬ್ದಾರಿ (ಜಾಯಿಂಟ್ ಕಸ್ಟಡಿ) ಪಡೆಯಬಹುದು.
icon

(2 / 10)

ಸೌದಿ ಅರೇಬಿಯಾ ಹೆಂಗಸಿಗರಿಗೆ ಮತದಾನದ ಅವಕಾಶ ನೀಡಿದ್ದು 2015ರಲ್ಲಿ. ತೀರಾ ಇತ್ತೀಚಿನವರೆಗೆ ಹೆಂಗಸರು ಅಲ್ಲಿ ಡ್ರೈವ್ ಮಾಡುವಂತಿರಲಿಲ್ಲ.
icon

(3 / 10)

ಈಜಿಪ್ಟ್‌ನಲ್ಲಿ ಮದುವೆಯಾದ ಹೆಂಗಸು ತರಕಾರಿ, ಹಾಲು-ಹಣ್ಣು ಇತ್ಯಾದಿ ತರಲು ಮಾತ್ರ ಹೊರಗೆ ಹೋಗಬಹುದು. ಇದಲ್ಲದೆ ಬೇರೆ ಕಾರಣಗಳಿಗೆ ಮನೆಯಿಂದ ಹೊರ ಹೋಗಲು ಆಕೆಗೆ ಗಂಡನ ಅನುಮತಿ ಬೇಕು.
icon

(4 / 10)

ಇಂದಿಗೂ ಜಗತ್ತಿನ 30 ಕ್ಕೂ ಹೆಚ್ಚು ದೇಶಗಳಲ್ಲಿ ಹೆಂಗಸರು ಪಾಸ್‌ಪೋರ್ಟ್‌ ಪಡೆಯಲು ಗಂಡನ ಅನುಮತಿ ಪತ್ರ ಬೇಕು ಎನ್ನುವ ನಿಯಮಗಳಿವೆ.
icon

(5 / 10)

ನೈಜಿರಿಯಾ ದೇಶದಲ್ಲಿ ಹೆಂಡತಿಯ ತಪ್ಪನ್ನ ತಿದ್ದಲು ಆಕೆಯನ್ನು ಹೊಡೆಯಬಹುದು ಎಂದು ಕಾನೂನು ಅನುಮತಿ ನೀಡಿದೆ.
icon

(6 / 10)

ಲಿಂಗ ತಾರತಮ್ಯದ ವಿರುದ್ಧ ಮಂಡಿಸಿದ ಮಸೂದೆ ರಷ್ಯಾ ದೇಶದಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಜಾಗತಿಕ ಮಟ್ಟದ ಹೋಲಿಕೆಯಲ್ಲಿ ಪರವಾಗಿಲ್ಲ ಎನ್ನಿಸಿದರೂ, ರಾಜಕೀಯದಲ್ಲಿ ಮಹಿಳೆಯರನ್ನು ಆರಿಸಲು ರಷ್ಯಾ ಸಿದ್ದವಿಲ್ಲ. ಹೀಗಾಗಿ ಮಹಿಳೆಯರ ಸಂಖ್ಯೆ ರಾಜಕೀಯದಲ್ಲಿ ಕಡಿಮೆ. ಅದರಲ್ಲೂ ಅಧ್ಯಕ್ಷ ಗಾದಿಯಲ್ಲಿ ಮಹಿಳೆಯನ್ನು ಊಹಿಸಲು ಕೂಡ ಸಾಧ್ಯವಿಲ್ಲ ಎನ್ನುವುದು ರಷ್ಯನ್ ಸಮಾಜದ ಅಭಿಪ್ರಾಯ.
icon

(7 / 10)

1959 ರಲ್ಲಿ ಸ್ವಿಟ್ಜರ್‌ಲೆಂಡ್ ದೇಶದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕೊಡುವುದನ್ನು ಶೇ 67 ರಷ್ಟು ಗಂಡಸರು ವಿರೋಧಿಸಿದ್ದರು. 1971 ರಿಂದ ಸ್ವಿಸ್ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು. ಅದೂ ಎಲ್ಲಾ ರಾಜ್ಯಗಳಲ್ಲಿ ಅಲ್ಲ. ಸ್ವಿಸ್‌ನ ಕೊನೆಯ ರಾಜ್ಯ ಮತದಾನದ ಹಕ್ಕು ನೀಡಿದ್ದು 1991 ರಲ್ಲಿ ಎಂದರೆ ನಂಬಲೇಬೇಕು. 
icon

(8 / 10)

ಸಮಾನ ವೇತನ ಎನ್ನುವುದು ತೀರಾ ಅಸಹ್ಯ ಪದವಾಗಿ ಹೋಗಿದೆ . ಕಟ್ಟಡ ಕಟ್ಟುವ ಕೂಲಿ ಮಹಿಳೆಯಿಂದ ಕೋಡಿಂಗ್ ಬರೆಯುವ ಮಹಿಳೆಯವರೆಗೆ, ಭಾರತದಿಂದ ಅಮೆರಿಕ, ಯೂರೋಪ್ ಎಲ್ಲೆಡೆ ವೇತನದಲ್ಲಿ ಲಿಂಗ ಅಸಮಾನತೆ ಇಂದಿಗೂ ಎದ್ದು ಕಾಣುವಷ್ಟಿದೆ.
icon

(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(10 / 10)

IPL_Entry_Point

ಇತರ ಗ್ಯಾಲರಿಗಳು