ಕನ್ನಡ ಸುದ್ದಿ  /  Photo Gallery  /  International Womens Day Sudha Murthy Quotes 10 Best Life Lessons Inspiring Everyone Check Pics Uks

Women's Day Special: ಅಂತಾರಾಷ್ಟ್ರೀಯ ಮಹಿಳಾ ದಿನ; ಲೇಖಕಿ ಸುಧಾ ಮೂರ್ತಿಯವರ ಜೀವನಾನುಭವದ 10 ನುಡಿಮುತ್ತುಗಳು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇಂದು. ಬದುಕಿಗೆ ಪ್ರೇರಣೆ ನೀಡಬಲ್ಲ ಲೇಖಕಿ, ಇನ್‌ಫೋಸಿಸ್ ಫೌಂಡೇಶನ್‌ನ ಮಾಜಿ ಮುಖ್ಯಸ್ಥೆ ಸುಧಾ ಮೂರ್ತಿ ಅವರ ಜೀವನಾನುಭವದ 10 ನುಡಿಮುತ್ತುಗಳು ಇಲ್ಲಿವೆ. 

ಜೀವನ ಅನ್ನೋದು ಒಂದು ಪರೀಕ್ಷೆ. ಅಲ್ಲಿ ಸಿಲೆಬೆಸ್ ಗೊತ್ತಿರಲ್ಲ. ಪ್ರಶ್ನೆ ಪತ್ರಿಕೆ ತಯಾರು ಮಾಡಿರಲ್ಲ. ಮಾದರಿ ಪ್ರಶ್ನೆ ಪತ್ರಿಕೆಯಂತು ಸಿಗೋದೇ ಇಲ್ಲ. 
icon

(1 / 10)

ನೀವು ಪ್ರತಿಯೊಬ್ಬರನ್ನೂ ಓಲೈಸೋದಕ್ಕೆ ಹೋದರೆ, ನಿಮ್ಮಿಂದ ಒಬ್ಬರನ್ನೂ ಓಲೈಸೋದಕ್ಕೆ ಆಗದು. ಇತರರ ಖುಷಿಗಾಗಿ ನೀವು ಬದುಕು ಸಾಗಿಸುವುದು ಅಸಾಧ್ಯದ ಮಾತು. 
icon

(2 / 10)

ನಾವು ಅವರ ಬಗ್ಗೆ ಏನು ಆಲೋಚಿಸುತ್ತೇವೆ ಎಂಬುದನ್ನು ಆಧರಿಸಿ ಅವರ ಕುರಿತಾಗಿ ಒಂದು ತೀರ್ಮಾನಕ್ಕೆ ಬಂದುಬಿಡುತ್ತೇವೆ. ಆದ್ದರಿಂದ, ಎಷ್ಟೋ ಸಲ ನಿರ್ದಿಷ್ಟ ಸಮಸ್ಯೆಗೆ ಸರಿಯಾದ ಪರಿಹಾರ ಅಂತ ಸಿಗಲ್ಲ. ಪರಿಹಾರಕ್ಕೆ ಒಂದು ಪರಿಹಾರವೂ ಸಿಗಲ್ಲ. ಎಲ್ಲವೂ ನೀವು ಅದನ್ನು ಹೇಗೆ ನೋಡ್ತೀರಿ ಎಂಬುದರ ಮೇಲೆ ಅವಲಂಬಿಸಿದೆ. 
icon

(3 / 10)

ಕ್ರಿಯೆಯೇ ಇಲ್ಲದ ಮುನ್ನೋಟ ಇದ್ದರೆ ಅದು ಕನಸು ಮಾತ್ರ; ಇನ್ನು ಮುನ್ನೋಟ ಇಲ್ಲದೇ ಕ್ರಿಯೆ ಮಾತ್ರ ಇದ್ದರೆ ಅದು ಟೈಮ್‌ ಪಾಸ್. ಅದುವೇ ಮುನ್ನೋಟ ಮತ್ತು ಕ್ರಿಯೆ ಎರಡೂ ಸೇರಿದರೆ ಜಗತ್ತನ್ನೇ ಬದಲಾಯಿಸಬಹುದು.
icon

(4 / 10)

ಪ್ರಾಮಾಣಿಕತೆಯನ್ನು ಯಾವುದೇ ವಿಶ್ವವಿದ್ಯಾಲಯದಲ್ಲಿ ಹೇಳಿಕೊಡಲ್ಲ. ಬಹುತೇಕ ಜನರಲ್ಲಿ ಅದು ಅವರ ಅಂತರಂಗದಿಂದಲೇ ಸ್ಫುರಿಸಿ ಹೊರಬರುತ್ತದೆ. 
icon

(5 / 10)

ಪ್ರಾಮಾಣಿಕತೆ ಅನ್ನೋದು ಯಾವುದೇ ವರ್ಗಕ್ಕೆ ಸೇರಿದ ಗುರುತಲ್ಲ. ಅದು ಶಿಕ್ಷಣ ಅಥವಾ ಸಂಪತ್ತಿನ ಜತೆಗಾಗಲೀ ನಂಟು ಹೊಂದಿಲ್ಲ. ಇದು ನನಗೆ ಜೀವನಾನುಭವ ಕಲಿಸಿದ ಪಾಠ. 
icon

(6 / 10)

ಹಣ ಇದೆಯಲ್ಲ ಅದು ಕಾಲಾನುಕ್ರಮದಲ್ಲಿ ನಿಧಾನವಾಗಿ ಬಂದು ಸೇರಬೇಕು. ಆಗ ಮಾತ್ರ ಅದಕ್ಕೊಂದು ಬೆಲೆ.
icon

(7 / 10)

ಹಣ ಇದೆಯಲ್ಲ ಅದು ಕಾಲಾನುಕ್ರಮದಲ್ಲಿ ನಿಧಾನವಾಗಿ ಬಂದು ಸೇರಬೇಕು. ಆಗ ಮಾತ್ರ ಅದಕ್ಕೊಂದು ಬೆಲೆ.

ನನ್ನ ಜೀವನಾನುಭವದ ಪ್ರಕಾರ ಹೇಳ್ತೇನೆ, ಸಾಧನೆ, ಪ್ರಶಸ್ತಿ ಪುರಸ್ಕಾರಗಳು, ಪದವಿ ಅಥವಾ ಹಣ ಇವೆಲ್ಲದಕ್ಕಿಂತಲೂ ಪ್ರಾಮುಖ್ಯವಾದುದು ಮನಸ್ಸಿನ ಶಾಂತಿ ಮತ್ತು ಸಹಾನುಭೂತಿಯ ಉತ್ತಮ ಬಾಂಧವ್ಯಗಳು. 
icon

(8 / 10)

ದುಡ್ಡು ಇದೆಯಲ್ಲ ಅದು ಬಹಳ ವಿರಳವಾಗಿ ಜನರನ್ನು ಒಂದುಗೂಡಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಅದು ಜನರ ನಡುವೆ ಕಂದಕವನ್ನು ಸೃಷ್ಟಿಸಿಬಿಡುತ್ತದೆ. 
icon

(9 / 10)

ಪುರುಷ ಅಥವಾ ಮಹಿಳೆಯೇ ಆದರೂ ಅಲ್ಪಾವಧಿಯಲ್ಲಿ ಅತಿ ಹೆಚ್ಚು ಹಣ ಗಳಿಸಿದರೆ, ಅದು ಅತಿಯಾದ ಮದ್ಯಪಾನದಂತೆ ಕೆಟ್ಟದ್ದು.
icon

(10 / 10)

ಪುರುಷ ಅಥವಾ ಮಹಿಳೆಯೇ ಆದರೂ ಅಲ್ಪಾವಧಿಯಲ್ಲಿ ಅತಿ ಹೆಚ್ಚು ಹಣ ಗಳಿಸಿದರೆ, ಅದು ಅತಿಯಾದ ಮದ್ಯಪಾನದಂತೆ ಕೆಟ್ಟದ್ದು.

IPL_Entry_Point

ಇತರ ಗ್ಯಾಲರಿಗಳು