IPL 2023 : ಈ ಐವರು ಆಟಗಾರರಿಗೆ ಇದೇ ಕೊನೆಯ ಐಪಿಎಲ್?
IPL 2023: ಐಪಿಎಲ್ 16ನೇ ಸೀಸನ್ ಮಾರ್ಚ್ 31ರಿಂದ ಆರಂಭವಾಗಲಿದ್ದು, ಎಲ್ಲರ ದೃಷ್ಟಿ ಹಿರಿಯ ಆಟಗಾರರ ಮೇಲೆ ನೆಟ್ಟಿದೆ. MS ಧೋನಿ ಸೇರಿದಂತೆ ಅನುಭವಿ ಮತ್ತು ಹಿರಿಯ ಆಟಗಾರರು ಈ ಆವೃತ್ತಿ ನಂತರ ಐಪಿಎಲ್ಗೆ ವಿದಾಯ ಘೋಷಿಸುವ ಸಾಧ್ಯತೆ ಇದೆ. ಆ ಆಟಗಾರರು ಯಾರು? ಬನ್ನಿ ನೋಡೋಣ.
(1 / 6)
MS Dhoni: MS ಧೋನಿ ಈ ಪಟ್ಟಿಯಲ್ಲಿರುವ ಮೊದಲ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ಎರಡು IPL ಸೀಸನ್‌ಗಳಲ್ಲಿ ಕಣಕ್ಕಿಳಿದಿರುವ ಧೋನಿಗೆ ಪ್ರಸ್ತುತ 41 ವರ್ಷ. ಫಿಟ್ನೆಸ್ ವಿಚಾರದಲ್ಲಿ ಇನ್ನೂ ಫಿಟ್ ಆಗಿದ್ದರೂ, ವಿದಾಯ ಹೇಳಿ ಯುವ ಆಟಗಾರರಿಗೆ ಚೆನ್ನೈ ಸೂಪರ್ ಕಿಂಗ್ಸ್ ಜವಾಬ್ದಾರಿಯನ್ನು ಹಸ್ತಾಂತರಿಸುವ ಸಮಯ ಬಂದಿದೆ. ಹಾಗಾಗಿ ಅವರು ಈ ವರ್ಷ ಚೆನ್ನೈನಲ್ಲಿ ಪ್ರೇಕ್ಷಕರ ಮುಂದೆ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಆಡುವ ಸಾಧ್ಯತೆಗಳಿವೆ.
(2 / 6)
Ambati Rayudu: ಹೈದಾರಾಬಾದ್ ಬ್ಯಾಟರ್ ಅಂಬಟಿ ರಾಯುಡು ಅವರಿಗೆ ಸದ್ಯ 38 ವರ್ಷ. ಕಳೆದ ಸೀಸನ್ನಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಮಧ್ಯಮ ಕ್ರಮಾಂಕಕ್ಕೆ ಆಧಾರವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಇದು ರಾಯುಡುಗೆ ಕೊನೆಯ ಐಪಿಎಲ್ ಸೀಸನ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
(3 / 6)
Amit mishra: ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಇನ್ಮುಂದೆ IPLನಲ್ಲಿ ಕಾಣಿಸಿಕೊಳ್ಳದೇ ಇರಬಹುದು. 40ರ ಹರೆಯದ ಮಿಶ್ರಾ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಆದರೆ, ಯುವ ಆಟಗಾರರ ಅಬ್ಬರದ ಮುಂದೆ ಮಿಶ್ರಾ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಇದೇ ಕೊನೆಯ ಆದರೂ ಅಚ್ಚರಿ ಇಲ್ಲ.
(4 / 6)
David Warner: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ನಾಯಕತ್ವದ ಅವಕಾಶ ಪಡೆದಿರುವ ವಾರ್ನರ್, ಡೆಲ್ಲಿಗೆ ಚೊಚ್ಚಲ ಕಪ್ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ. ಆದರೆ 36 ವರ್ಷದ ವಾರ್ನರ್ ಕೂಡ ಈ ಋತುವಿನ ನಂತರ ಲೀಗ್ ತೊರೆಯುವ ಸಾಧ್ಯತೆಯಿದೆ.
(5 / 6)
Dinesh Karthik: ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಕಳೆದ ವರ್ಷ ಆರ್‌ಸಿಬಿ ತಂಡದ ಪರ ಅತ್ಯುತ್ತಮ ಫಿನಿಶರ್ ಆಗಿದ್ದರು. ಇದರಿಂದ ಟೀಮ್ ಇಂಡಿಯಾಗೂ ಕಂಬ್ಯಾಕ್ ಮಾಡಿದ್ದರು. ಮೊದಲ ಟಿ20 ವಿಶ್ವಕಪ್‌ನಿಂದ ಆಡುತ್ತಿರುವ 37 ವರ್ಷದ ಕಾರ್ತಿಕ್, ಈ ಋತುವಿನ ನಂತರ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿಯಾಗುವ ಸಾಧ್ಯತೆಯಿದೆ.
ಇತರ ಗ್ಯಾಲರಿಗಳು