ಹೇ ಅವನು ನನ್ ಅಭಿಮಾನಿ, ಹೊಡಿಬೇಡಿ; ಮೈದಾನಕ್ಕೆ ನುಗ್ಗಿದ ಅಭಿಮಾನಿ ಹಿಡಿದೆಳೆದ ಸಿಬ್ಬಂದಿಗೆ ವಿರಾಟ್ ಕೊಹ್ಲಿ ತಾಕೀತು
- ಐಪಿಎಲ್ 2024ರಲ್ಲಿ ಮೈದಾನಕ್ಕೆ ನುಗ್ಗುವ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದ ವೇಳೆ, ವಿರಾಟ್ ಕೊಹ್ಲಿ ಅಭಿಮಾನಿ ಹುಡುಗನೊಬ್ಬ ಭದ್ರತೆ ಮೀರಿ ಮೈದಾನಕ್ಕೆ ಪ್ರವೇಶಿಸಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಬಂದು ಅವರನ್ನು ಹೊರೆಗೆ ಕರೆದುಕೊಂಡು ಹೋಗಿದ್ದಾರೆ.

(1 / 6)
ಈ ಹಿಂದೆ, ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಪಂದ್ಯದ ವೇಳೆ ವಿರಾಟ್ ಅಭಿಮಾನಿ ಮೈದಾನಕ್ಕೆ ನುಗ್ಗಿದ್ದ. ಇದೀಗ, ಜೈಪುರದಲ್ಲಿಯೂ ಇಂತಹದೇ ಘಟನೆ ನಡೆದಿದೆ. ವಿರಾಟ್ ಕೊಹ್ಲಿ ಜೆರ್ಸಿ ಧರಿಸಿದ್ಧ ಯುವ ಅಭಿಮಾನಿಯೊಬ್ಬ ಮೈದಾನಕ್ಕೆ ಬಂದು ವಿರಾಟ್ ಅವರನ್ನು ಭೇಟಿಯಾಗಿದ್ದಾನೆ. ಅಲ್ಲದೆ ಅವರನ್ನು ತಬ್ಬಿಕೊಂಡು ಖುಷಿ ಪಟ್ಟಿದ್ದಾನೆ.(AFP)
(2 / 6)
ಈ ವೇಳೆ ಮೈದಾನದ ಸಿಬ್ಬಂದಿ ಬಂದು ಆತನನ್ನು ತಡೆದು ಹೊರಗೆ ಕರೆದುಕೊಂಡು ಬಂದಿದ್ದಾರೆ. ಆಗ, ಆತನಿಗೆ ಏನೂ ಮಾಡಬೇಡಿ ಎಂದು ಕೊಹ್ಲಿ ಸಿಬ್ಬಂದಿಗೆ ಹೇಳ್ತಾರೆ. ಮೈದಾನದ ಸ್ಟಾಫ್‌ಗೆ ಕೊಹ್ಲಿ ಸಲಹೆ ನೀಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.(AFP)
(3 / 6)
ಇತ್ತೀಚೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ಪ್ರವೇಶಿಸಿ ವಿರಾಟ್ ಭೇಟಿಯಾಗಿದ್ದ. ಆದರೆ, ಆತನನ್ನು ಹೊರಕ್ಕೆ ಕರೆದುಕೊಂಡು ಹೋಗಿದ್ದ ಸಿಬ್ಬಂದಿ ಕಾಲಿಂದ ಒದ್ದು ಥಳಿಸಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ ನೆಟ್ಟಿಗರು ಕೂಡಾ ಸಿಬ್ಬಂದಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.(PTI)
(4 / 6)
ಈ ವಿಚಾರ ಕೊಹ್ಲಿಗೂ ಗೊತ್ತಾಗಿರುವಂತಿದೆ. ಹೀಗಾಗಿ ತನ್ನ ಅಭಿಮಾನಿಗೆ ಯಾವುದೇ ಕಾರಣಕ್ಕೂ ನೋವಾಗಬಾರದು ಎಂದು ಕೊಹ್ಲಿ ಸಿಬ್ಬಂದಿ ಬಳಿ ಹೇಳಿದ್ದಾರೆ.(PTI)
(5 / 6)
ಕೊಹ್ಲಿಯ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಲ್ಲದೆ, ತವರು ಮಾತ್ರವಲ್ಲದೆ ಹೊರ ಮೈದಾನಗಳಲ್ಲಿಯೂ ಆರ್‌ಸಿಬಿ ಆಟಗಾರನಿಗೆ ಸಿಗುತ್ತಿರುವ ಅಪಾರ ಬೆಂಬಲಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.(PTI)
ಇತರ ಗ್ಯಾಲರಿಗಳು