ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿ ಕಳಪೆ ದಾಖಲೆಗೆ ಕಾರಣರಾದ ಫಿಲ್ ಸಾಲ್ಟ್; ಸಿಎಸ್‌ಕೆ ಪರ ತುಷಾರ್ ದೇಶಪಾಂಡೆ ರೆಕಾರ್ಡ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿ ಕಳಪೆ ದಾಖಲೆಗೆ ಕಾರಣರಾದ ಫಿಲ್ ಸಾಲ್ಟ್; ಸಿಎಸ್‌ಕೆ ಪರ ತುಷಾರ್ ದೇಶಪಾಂಡೆ ರೆಕಾರ್ಡ್

ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿ ಕಳಪೆ ದಾಖಲೆಗೆ ಕಾರಣರಾದ ಫಿಲ್ ಸಾಲ್ಟ್; ಸಿಎಸ್‌ಕೆ ಪರ ತುಷಾರ್ ದೇಶಪಾಂಡೆ ರೆಕಾರ್ಡ್

  • Phil Salt: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ ಅನಗತ್ಯ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ. ಕೆಕೆಆರ್ ಪರ ಪಂದ್ಯವೊಂದರ ಮೊದಲ ಎಸೆತದಲ್ಲೇ ಔಟಾಗುವ ಮೂಲಕ, ಈ ಕಳಪೆ ರೆಕಾರ್ಡ್‌ ಮಾಡಿದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ.

ಚೆಪಾಕ್‌ ಮೈದಾನದಲ್ಲಿ ಏಪ್ರಿಲ್‌ 8ರ ಸೋಮವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲಿ ಔಟಾಗುವ ಮೂಲಕ, ಕೋಲ್ಕತಾ ನೈಟ್ ರೈಡರ್ಸ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅನಗತ್ಯ ದಾಖಲೆ ನಿರ್ಮಿಸಿದರು. ಪಂದ್ಯದ ಮೊದಲ ಎಸೆತದಲ್ಲೇ ಔಟಾದ ಕೆಕೆಆರ್ ತಂಡದ ಐದನೇ ಬ್ಯಾಟರ್‌ ಎನಿಸಿಕೊಂಡರು.
icon

(1 / 5)

ಚೆಪಾಕ್‌ ಮೈದಾನದಲ್ಲಿ ಏಪ್ರಿಲ್‌ 8ರ ಸೋಮವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲಿ ಔಟಾಗುವ ಮೂಲಕ, ಕೋಲ್ಕತಾ ನೈಟ್ ರೈಡರ್ಸ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅನಗತ್ಯ ದಾಖಲೆ ನಿರ್ಮಿಸಿದರು. ಪಂದ್ಯದ ಮೊದಲ ಎಸೆತದಲ್ಲೇ ಔಟಾದ ಕೆಕೆಆರ್ ತಂಡದ ಐದನೇ ಬ್ಯಾಟರ್‌ ಎನಿಸಿಕೊಂಡರು.(AFP)

ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಮೊದಲು ಬೌಲಿಂಗ್‌ ಆಯ್ಕೆ ಮಾಡಿತು. ಬ್ಯಾಟಿಂಗ್ ನಡೆಸಿದ ಕೆಕೆಆರ್‌ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಫಿಲ್‌ ಸಾಲ್ಟ್ ಗೋಲ್ಡನ್‌ ಡಕ್‌ ಆದರು. ತುಷಾರ್ ದೇಶಪಾಂಡೆ ಎಸೆತಕ್ಕೆ ರವೀಂದ್ರ ಜಡೇಜಾ ಕ್ಯಾಚ್‌ ಪಡೆದು ಫಿಲ್ ಸಾಲ್ಟ್ ಅವರನ್ನು ಹೊರಕಳುಹಿಸಿದರು.
icon

(2 / 5)

ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಮೊದಲು ಬೌಲಿಂಗ್‌ ಆಯ್ಕೆ ಮಾಡಿತು. ಬ್ಯಾಟಿಂಗ್ ನಡೆಸಿದ ಕೆಕೆಆರ್‌ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಫಿಲ್‌ ಸಾಲ್ಟ್ ಗೋಲ್ಡನ್‌ ಡಕ್‌ ಆದರು. ತುಷಾರ್ ದೇಶಪಾಂಡೆ ಎಸೆತಕ್ಕೆ ರವೀಂದ್ರ ಜಡೇಜಾ ಕ್ಯಾಚ್‌ ಪಡೆದು ಫಿಲ್ ಸಾಲ್ಟ್ ಅವರನ್ನು ಹೊರಕಳುಹಿಸಿದರು.(AP)

ಪಂದ್ಯದ ಮೊದಲ ಎಸೆತದಲ್ಲೇ ಔಟಾದ ಕೆಕೆಆರ್‌ ತಂಡದ ಐದನೇ ಬ್ಯಾಟರ್‌ ಫಿಲ್‌ ಸಾಲ್ಟ್.‌ ಈ ಹಿಂದೆ ಬ್ರೆಂಡನ್ ಮೆಕಲಮ್, ಮನೋಜ್ ತಿವಾರಿ, ಜಾಕ್ ಕಾಲಿಸ್ ಮತ್ತು ಜೋ ಡೆನ್ಲಿ ಅವರು ಮೊದಲ ಬಾಲ್‌ನಲ್ಲೇ ಔಟಾಗಿದ್ದರು.
icon

(3 / 5)

ಪಂದ್ಯದ ಮೊದಲ ಎಸೆತದಲ್ಲೇ ಔಟಾದ ಕೆಕೆಆರ್‌ ತಂಡದ ಐದನೇ ಬ್ಯಾಟರ್‌ ಫಿಲ್‌ ಸಾಲ್ಟ್.‌ ಈ ಹಿಂದೆ ಬ್ರೆಂಡನ್ ಮೆಕಲಮ್, ಮನೋಜ್ ತಿವಾರಿ, ಜಾಕ್ ಕಾಲಿಸ್ ಮತ್ತು ಜೋ ಡೆನ್ಲಿ ಅವರು ಮೊದಲ ಬಾಲ್‌ನಲ್ಲೇ ಔಟಾಗಿದ್ದರು.(ANI)

ಸಿಎಸ್‌ಕೆ ಪರ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ತುಷಾರ್ ದೇಶಪಾಂಡೆ ಕೂಡಾ ಪಾತ್ರರಾದರು. ಇದಕ್ಕೂ ಮುನ್ನ ಹಳದಿ ಆರ್ಮಿ ಪರ ಲಕ್ಷ್ಮೀಪತಿ ಬಾಲಾಜಿ ಮತ್ತು ದೀಪಕ್ ಚಹರ್ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದರು.
icon

(4 / 5)

ಸಿಎಸ್‌ಕೆ ಪರ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ತುಷಾರ್ ದೇಶಪಾಂಡೆ ಕೂಡಾ ಪಾತ್ರರಾದರು. ಇದಕ್ಕೂ ಮುನ್ನ ಹಳದಿ ಆರ್ಮಿ ಪರ ಲಕ್ಷ್ಮೀಪತಿ ಬಾಲಾಜಿ ಮತ್ತು ದೀಪಕ್ ಚಹರ್ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದರು.(BCCI)

ಪಂದ್ಯದಲ್ಲಿ ಕೆಕೆಆರ್‌ ತಂಡ ಮೊದಲು ಬ್ಯಾಟಿಂಗ್‌ ನಡೆಸಿ ಕೇವಲ 137 ರನ್‌ಗಳಿಗೆ ಆಲೌಟ್‌ ಆಯ್ತು. ಸಿಎಸ್‌ಕೆ ತಂಡ ಕೇವಲ 17.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 141 ರನ್‌ ಗಳಿಸಿ ಗೆದ್ದು ಬೀಗಿತು.
icon

(5 / 5)

ಪಂದ್ಯದಲ್ಲಿ ಕೆಕೆಆರ್‌ ತಂಡ ಮೊದಲು ಬ್ಯಾಟಿಂಗ್‌ ನಡೆಸಿ ಕೇವಲ 137 ರನ್‌ಗಳಿಗೆ ಆಲೌಟ್‌ ಆಯ್ತು. ಸಿಎಸ್‌ಕೆ ತಂಡ ಕೇವಲ 17.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 141 ರನ್‌ ಗಳಿಸಿ ಗೆದ್ದು ಬೀಗಿತು.


ಇತರ ಗ್ಯಾಲರಿಗಳು