156.7kph ವೇಗದ ಬೌಲಿಂಗ್‌ನೊಂದಿಗೆ ತನ್ನದೇ ದಾಖಲೆ ಮುರಿದ ಮಯಾಂಕ್ ಯಾದವ್; ಸತತ 2 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಸಾಧನೆ
- ಐಪಿಎಲ್‌ನ ಸತತ 2 ಪಂದ್ಯಗಳಲ್ಲಿ ಅಬ್ಬರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡ ಮಯಾಂಕ್ ಯಾದವ್, ಸದ್ಯ ವಿಶ್ವದಾದ್ಯಂತ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಭಾರತ ಕ್ರಿಕೆಟ್‌ನ ಹೊಸ ಸೆನ್ಸೇಷನ್ ಮಯಾಂಕ್, ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಕಾಲಿಡುವ ಎಲ್ಲಾ ಸಾಧ್ಯತೆಗಳಿವೆ. ಆರ್‌ಸಿಬಿ ವಿರುದ್ಧ 3 ವಿಕೆಟ್ ಪಡೆದ ಲಕ್ನೋ ವೇಗಿ, ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
- ಐಪಿಎಲ್‌ನ ಸತತ 2 ಪಂದ್ಯಗಳಲ್ಲಿ ಅಬ್ಬರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡ ಮಯಾಂಕ್ ಯಾದವ್, ಸದ್ಯ ವಿಶ್ವದಾದ್ಯಂತ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಭಾರತ ಕ್ರಿಕೆಟ್‌ನ ಹೊಸ ಸೆನ್ಸೇಷನ್ ಮಯಾಂಕ್, ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಕಾಲಿಡುವ ಎಲ್ಲಾ ಸಾಧ್ಯತೆಗಳಿವೆ. ಆರ್‌ಸಿಬಿ ವಿರುದ್ಧ 3 ವಿಕೆಟ್ ಪಡೆದ ಲಕ್ನೋ ವೇಗಿ, ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
(1 / 8)
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು 28 ರನ್‌ಗಳಿಂದ ಗೆದ್ದಿತು. ಆರ್‌ಸಿಬಿ ತಂಡದ ಪ್ರಮುಖ ಮೂರು ವಿಕೆಟ್ ಪಡೆದ ವೇಗಿ ಮಯಾಂಕ್ ಯಾದವ್, ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸತತ ಎರಡನೇ ಪಂದ್ಯದಲ್ಲಿಯೂ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದರು.(AFP)
(2 / 8)
ಪದಾರ್ಪಣೆ ಪಂದ್ಯದಲ್ಲೇ, ಪಂಜಾಬ್ ಕಿಂಗ್ಸ್ ತಂಡದ ಮೂರು ವಿಕೆಟ್ ಪಡೆದಿದ್ದ ಲಕ್ನೋ ವೇಗಿ, ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಗೆದ್ದಿದ್ದರು. ಇದೀಗ ಬೆಂಗಳೂರು ವಿರುದ್ಧ ಅದೇ ಸಾಧನೆ ಪುನರಾವರ್ತಿಸಿದ್ದಾರೆ.(AFP)
(3 / 8)
ಮೊದಲ ಪಂದ್ಯದಲ್ಲೇ ತಮ್ಮ ಅಮೋಘ ಪ್ರದರ್ಶನದಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದ ವೇಗಿ, ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ 155.8 kmph ವೇಗದಲ್ಲಿ ಬೌಲ್ ಮಾಡಿದ್ದರು. ಆ ಮೂಲಕ ಐಪಿಎಲ್ 2024ರ ಆವೃತ್ತಿಯ ಅತ್ಯಂತ ವೇಗದ ಬೌಲಿಂಗ್ ಮಾಡಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಇದೀಗ ಆರ್‌ಸಿಬಿ ವಿರುದ್ಧ ಆಡಿದ ತಮ್ಮ ಎರಡನೇ ಪಂದ್ಯದಲ್ಲಿ ತಮ್ಮದೇ ದಾಖಲೆಯನ್ನು ಮಯಾಂಕ್ ಮುರಿದಿದ್ದಾರೆ.(PTI)
(4 / 8)
ಆರ್‌ಸಿಬಿ ವಿರುದ್ಧ ಬರೋಬ್ಬರಿ 156.7 kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ, ಸ್ವಂತ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ ಪ್ರಕಾರ, ಐಪಿಎಲ್ 2024ರ ಆವೃತ್ತಿಯಲ್ಲಿ ಯಾದವ್ ಅತ್ಯಂತ ವೇಗದ ಎಸೆತವನ್ನು ಬೌಲ್ ಮಾಡಿದ್ದಾರೆ. ಇದರೊಂದಿಗೆ ಸತತ ಎರಡು ಪಂದ್ಯಗಳಲ್ಲಿ ಮೂರು ವಿಕೆಟ್ ಕಬಳಿಸುವುದು ಮಾತ್ರವಲ್ಲದೆ ಪಂದ್ಯಶ್ರೇಷ್ಠರಾಗಿದ್ದಾರೆ. (PTI)
(5 / 8)
ಐಪಿಎಲ್ 2024ರ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಎಲ್‌ಎಸ್‌ಜಿ ವೇಗಿ ಅಗ್ರಸ್ಥಾನದಲ್ಲಿದಾರೆ. ಆ ಬಳಿಕ ರಾಜಸ್ಥಾನದ ನಾಂದ್ರೆ ಬರ್ಗರ್ (153), ಮುಂಬೈ ತಂಡದ ಗೆರಾಲ್ಡ್ ಕೋಯೆಟ್ಜಿ (152.3), ಆರ್‌ಸಿಬಿಯ ಅಲ್ಜಾರಿ ಜೋಸೆಫ್ (151.2) ಮತ್ತು ಸಿಎಸ್‌ಕೆ ತಂಡದ ಮಥೀಶ ಪತಿರಾನ (150.9) ನಂತರದ ಸ್ಥಾನದಲ್ಲಿದ್ದಾರೆ.(PTI)
(6 / 8)
ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಅವರು, ಕೇವಲ 14 ರನ್ ಮಾತ್ರ ಬಿಟ್ಟುಕೊಟ್ಟರು. ಅಲ್ಲದೆ ಆರ್‌ಸಿಬಿಯ ಮೂವರು ಸ್ಟಾರ್ ಆಟಗಾರರನ್ನೇ ವೇಗಿ ಪೆವಿಲಿಯನ್‌ಗೆ ಕಳುಹಿಸಿದರು. (PTI)
(7 / 8)
ಮ್ಯಾಕ್ಸ್‌ವೆಲ್ (0) ಡಕೌಟ್ ಆದರೆ, ರಜತ್ ಪಾಟಿದಾರ್ 29 ರನ್ ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು. ಕ್ಯಾಮರೂನ್ ಗ್ರೀನ್ 9 ರನ್ ಗಳಿಸಿದ್ದಾಗ ಕ್ಲೀನ್ ಬೋಲ್ಡ್ ಆದರು. (PTI)
ಇತರ ಗ್ಯಾಲರಿಗಳು