ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್‌ನ ಒಂದೇ ಪಂದ್ಯದಲ್ಲಿ ಇಬ್ಬರ ಶತಕ; ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಯದ್ದೇ ಸಿಂಹಪಾಲು

ಐಪಿಎಲ್‌ನ ಒಂದೇ ಪಂದ್ಯದಲ್ಲಿ ಇಬ್ಬರ ಶತಕ; ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಯದ್ದೇ ಸಿಂಹಪಾಲು

  • ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಒಂದೇ ಪಂದ್ಯದಲ್ಲಿ 2 ಶತಕಗಳು ದಾಖಲಾಗಿವೆ. ಟೂರ್ನಿಯ ಇತಿಹಾಸದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿರುವುದು ಇದು ಮೂರನೇ ಬಾರಿ. ಒಟ್ಟಾರೆಯಾಗಿ, ಐಪಿಎಲ್‌ನ ಒಂದು ಪಂದ್ಯದಲ್ಲೇ ಒಟ್ಟು 5 ಬಾರಿ ಒಂದಕ್ಕಿಂತ ಹೆಚ್ಚು ಸೆಂಚುರಿ ಸಿಡಿದಿವೆ. ಈ 5 ಪಂದ್ಯಗಳಲ್ಲಿಯೂ ಆರ್‌ಸಿಬಿ ಭಾಗಿಯಾಗಿದೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ. ಜೈಪುರದಲ್ಲಿ ಏಪ್ರಿಲ್‌ 6ರ ಶನಿವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಹ್ಲಿ 8ನೇ ಶತಕ ಬಾರಿಸಿದರು. ಆ ಬಳಿಕ, ಚೇಸಿಂಗ್‌ ವೇಳೆ ರಾಜಸ್ಥಾನದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಕೂಡ ಶತಕ ಗಳಿಸಿದರು. ಅಂದರೆ, ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಒಂದೇ ಪಂದ್ಯದಲ್ಲಿ ಎರಡು ಶತಕಗಳು ಸಿಡಿದವು.
icon

(1 / 7)

ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ. ಜೈಪುರದಲ್ಲಿ ಏಪ್ರಿಲ್‌ 6ರ ಶನಿವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಹ್ಲಿ 8ನೇ ಶತಕ ಬಾರಿಸಿದರು. ಆ ಬಳಿಕ, ಚೇಸಿಂಗ್‌ ವೇಳೆ ರಾಜಸ್ಥಾನದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಕೂಡ ಶತಕ ಗಳಿಸಿದರು. ಅಂದರೆ, ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಒಂದೇ ಪಂದ್ಯದಲ್ಲಿ ಎರಡು ಶತಕಗಳು ಸಿಡಿದವು.(AFP)

ಐಪಿಎಲ್ ಇತಿಹಾಸದಲ್ಲಿ ಎರಡೂ ತಂಡಗಳ ಬ್ಯಾಟರ್‌ಗಳು ಒಂದೇ ಪಂದ್ಯದಲ್ಲಿ ಶತಕ ಬಾರಿಸಿರುವುದು ಇದು ಮೂರನೇ ಬಾರಿ. ವಿಶೇಷವೆಂದರೆ, ಆ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಭಾಗಿಯಾಗಿದೆ. ಇನ್ನೊಂದು ವಿಶೇಷವೆಂದರೆ, ಆ ಎಲ್ಲಾ ಮೂರು ಸಂದರ್ಭಗಳಲ್ಲಿ ಆರ್‌ಸಿಬಿ ಪರ ಶತಕ ಗಳಿಸಿದವರು ವಿರಾಟ್ ಕೊಹ್ಲಿ. ಅಂದರೆ, ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿದಾಗ ಸಂದರ್ಭದಲ್ಲಿಯೇ, ಎದುರಾಳಿ ತಂಡದ ಇನ್ನೊಬ್ಬ ಆಟಗಾರ ಕೂಡಾ ಶತಕದೊಂದಿಗೆ ಗಮನ ಸೆಳೆದಿದ್ದಾರೆ. ಈ ಹಿಂದೆ, ಐಪಿಎಲ್ 2023ರಲ್ಲಿ ಇದೇ ರೀತಿ ನಡೆದಿತ್ತು.
icon

(2 / 7)

ಐಪಿಎಲ್ ಇತಿಹಾಸದಲ್ಲಿ ಎರಡೂ ತಂಡಗಳ ಬ್ಯಾಟರ್‌ಗಳು ಒಂದೇ ಪಂದ್ಯದಲ್ಲಿ ಶತಕ ಬಾರಿಸಿರುವುದು ಇದು ಮೂರನೇ ಬಾರಿ. ವಿಶೇಷವೆಂದರೆ, ಆ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಭಾಗಿಯಾಗಿದೆ. ಇನ್ನೊಂದು ವಿಶೇಷವೆಂದರೆ, ಆ ಎಲ್ಲಾ ಮೂರು ಸಂದರ್ಭಗಳಲ್ಲಿ ಆರ್‌ಸಿಬಿ ಪರ ಶತಕ ಗಳಿಸಿದವರು ವಿರಾಟ್ ಕೊಹ್ಲಿ. ಅಂದರೆ, ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿದಾಗ ಸಂದರ್ಭದಲ್ಲಿಯೇ, ಎದುರಾಳಿ ತಂಡದ ಇನ್ನೊಬ್ಬ ಆಟಗಾರ ಕೂಡಾ ಶತಕದೊಂದಿಗೆ ಗಮನ ಸೆಳೆದಿದ್ದಾರೆ. ಈ ಹಿಂದೆ, ಐಪಿಎಲ್ 2023ರಲ್ಲಿ ಇದೇ ರೀತಿ ನಡೆದಿತ್ತು.(AP)

ಜೈಪುರದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು 3 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ಅವರು 72 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಳೊಂದಿಗೆ 113 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗು ರಾಜಸ್ಥಾನ್ ರಾಯಲ್ಸ್ 19.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 189 ರನ್ ಬಾರಿಸಿ ಜಯ ಸಾಧಿಸಿತು. ಜೋಸ್ ಬಟ್ಲರ್ 58 ಎಸೆತಗಳಲ್ಲಿ ಶತಕ ಸಿಡಿಸಿದರು. ಕೇವಲ 58 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊಹ್ಲಿಯ ಶತಕವನ್ನು ಹಿಂದಿಕ್ಕಿ ಬಟ್ಲರ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
icon

(3 / 7)

ಜೈಪುರದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು 3 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ 67 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ಅವರು 72 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಳೊಂದಿಗೆ 113 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗು ರಾಜಸ್ಥಾನ್ ರಾಯಲ್ಸ್ 19.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 189 ರನ್ ಬಾರಿಸಿ ಜಯ ಸಾಧಿಸಿತು. ಜೋಸ್ ಬಟ್ಲರ್ 58 ಎಸೆತಗಳಲ್ಲಿ ಶತಕ ಸಿಡಿಸಿದರು. ಕೇವಲ 58 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊಹ್ಲಿಯ ಶತಕವನ್ನು ಹಿಂದಿಕ್ಕಿ ಬಟ್ಲರ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.(BCCI)

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ 2023ರ ಆವೃತ್ತಿಯ 70ನೇ ಲೀಗ್ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ವಿರುದ್ಧ ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ ಶತಕ ಬಾರಿಸಿದರು. ಆರ್‌ಸಿಬಿ ತಂಡವು ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಗುಜರಾತ್ ಟೈಟಾನ್ಸ್ 19.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿ ಜಯ ಸಾಧಿಸಿತು. ಶುಬ್ಮನ್ ಗಿಲ್ ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿದರು. 5 ಬೌಂಡರಿ ಹಾಗೂ 8 ಸಿಕ್ಸರ್‌ಗಳೊಂದಿಗೆ 104 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
icon

(4 / 7)

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ 2023ರ ಆವೃತ್ತಿಯ 70ನೇ ಲೀಗ್ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ವಿರುದ್ಧ ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ ಶತಕ ಬಾರಿಸಿದರು. ಆರ್‌ಸಿಬಿ ತಂಡವು ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಗುಜರಾತ್ ಟೈಟಾನ್ಸ್ 19.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿ ಜಯ ಸಾಧಿಸಿತು. ಶುಬ್ಮನ್ ಗಿಲ್ ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿದರು. 5 ಬೌಂಡರಿ ಹಾಗೂ 8 ಸಿಕ್ಸರ್‌ಗಳೊಂದಿಗೆ 104 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.(AFP, AP)

2023ರ ಐಪಿಎಲ್ ಆವೃತ್ತಿಯ 65ನೇ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅನ್ರಿಚ್ ಕ್ಲಾಸೆನ್ 49 ಎಸೆತಗಳಲ್ಲಿ ಶತಕ ಸಿಡಿಸಿದರು. 51 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 104 ರನ್ ಗಳಿಸಿದ್ದರು. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ ತಂಡವು 19.2 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಜಯ ಸಾಧಿಸಿತು. ಕೊಹ್ಲಿ 62 ಎಸೆತಗಳಲ್ಲಿ ಶತಕ ಬಾರಿಸಿದರು. ಅವರು 63 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 100 ರನ್ ಗಳಿಸಿದರು. ವಿರಾಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.
icon

(5 / 7)

2023ರ ಐಪಿಎಲ್ ಆವೃತ್ತಿಯ 65ನೇ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅನ್ರಿಚ್ ಕ್ಲಾಸೆನ್ 49 ಎಸೆತಗಳಲ್ಲಿ ಶತಕ ಸಿಡಿಸಿದರು. 51 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 104 ರನ್ ಗಳಿಸಿದ್ದರು. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ ತಂಡವು 19.2 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಜಯ ಸಾಧಿಸಿತು. ಕೊಹ್ಲಿ 62 ಎಸೆತಗಳಲ್ಲಿ ಶತಕ ಬಾರಿಸಿದರು. ಅವರು 63 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 100 ರನ್ ಗಳಿಸಿದರು. ವಿರಾಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.(BCCI)

ಒಂದೇ ಐಪಿಎಲ್ ಪಂದ್ಯದಲ್ಲಿ ಒಟ್ಟಾರೆಯಾಗಿ ಒಂದಕ್ಕಿಂತ ಹೆಚ್ಚು ಶತಕ ಸಿಡಿದಿರುವುದು ಇದು ಐದನೇ ಬಾರಿ. ಈ ಎಲ್ಲಾ 5 ಪಂದ್ಯಗಳಲ್ಲಿ ಆರ್‌ಸಿಬಿ ಆಡಿದೆ. ಒಂದೇ ತಂಡದ ಇಬ್ಬರು ಬ್ಯಾಟರ್‌ಗಳು ಎರಡು ಬಾರಿ ಶತಕ ಬಾರಿಸಿದ್ದಾರೆ. ಆ ಸಂದರ್ಭದಲ್ಲಿ, ಕೊಹ್ಲಿ ಒಂದು ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಐಪಿಎಲ್ 2016ರಲ್ಲಿ ಆರ್‌ಸಿಬಿಯ ವಿರಾಟ್ ಕೊಹ್ಲಿ (109) ಮತ್ತು ಎಬಿ ಡಿವಿಲಿಯರ್ಸ್ (129) ಗುಜರಾತ್ ಲಯನ್ಸ್ ವಿರುದ್ಧ ಶತಕ ಬಾರಿಸಿದ್ದರು. ಇದು ದಾಖಲೆಯ ಜೊತೆಯಾಟವಾಯ್ತು. ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಡೇವಿಡ್ ವಾರ್ನರ್ (100) ಮತ್ತು ಜಾನಿ ಬೈರ್‌ಸ್ಟೋ (114) ಕೂಡ ಐಪಿಎಲ್ 2019ರಲ್ಲಿ ಆರ್‌ಸಿಬಿ ವಿರುದ್ಧ ಶತಕ ಸಿಡಿಸಿದ್ದಾರೆ.
icon

(6 / 7)

ಒಂದೇ ಐಪಿಎಲ್ ಪಂದ್ಯದಲ್ಲಿ ಒಟ್ಟಾರೆಯಾಗಿ ಒಂದಕ್ಕಿಂತ ಹೆಚ್ಚು ಶತಕ ಸಿಡಿದಿರುವುದು ಇದು ಐದನೇ ಬಾರಿ. ಈ ಎಲ್ಲಾ 5 ಪಂದ್ಯಗಳಲ್ಲಿ ಆರ್‌ಸಿಬಿ ಆಡಿದೆ. ಒಂದೇ ತಂಡದ ಇಬ್ಬರು ಬ್ಯಾಟರ್‌ಗಳು ಎರಡು ಬಾರಿ ಶತಕ ಬಾರಿಸಿದ್ದಾರೆ. ಆ ಸಂದರ್ಭದಲ್ಲಿ, ಕೊಹ್ಲಿ ಒಂದು ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಐಪಿಎಲ್ 2016ರಲ್ಲಿ ಆರ್‌ಸಿಬಿಯ ವಿರಾಟ್ ಕೊಹ್ಲಿ (109) ಮತ್ತು ಎಬಿ ಡಿವಿಲಿಯರ್ಸ್ (129) ಗುಜರಾತ್ ಲಯನ್ಸ್ ವಿರುದ್ಧ ಶತಕ ಬಾರಿಸಿದ್ದರು. ಇದು ದಾಖಲೆಯ ಜೊತೆಯಾಟವಾಯ್ತು. ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಡೇವಿಡ್ ವಾರ್ನರ್ (100) ಮತ್ತು ಜಾನಿ ಬೈರ್‌ಸ್ಟೋ (114) ಕೂಡ ಐಪಿಎಲ್ 2019ರಲ್ಲಿ ಆರ್‌ಸಿಬಿ ವಿರುದ್ಧ ಶತಕ ಸಿಡಿಸಿದ್ದಾರೆ.( AFP)

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಎಂಟು ಶತಕಗಳ ಸಂದರ್ಭಗಳಲ್ಲಿ, ಇನ್ನೊಬ್ಬ ಬ್ಯಾಟರ್ 4 ಪಂದ್ಯಗಳಲ್ಲಿ ಕೊಹ್ಲಿಯೊಂದಿಗೆ ಶತಕ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಅವರೊಂದಿಗಿನ ಒಂದೇ ಪಂದ್ಯದಲ್ಲಿ ಮೂರು ಬಾರಿ ಎದುರಾಳಿ‌ ತಂಡದ ಆಟಗಾರರು (ಕ್ಲಾಸೆನ್, ಗಿಲ್ ಮತ್ತು ಬಟ್ಲರ್) ಶತಕ ಸಿಡಿಸಿದ್ದಾರೆ. ಒಮ್ಮೆ ಕೊಹ್ಲಿಯೊಂದಿಗೆ ಸಹ ಆಟಗಾರ ಡಿವಿಲಿಯರ್ಸ್ ಸೆಂಚುರಿ ಬಾರಿಸಿದ್ದಾರೆ.
icon

(7 / 7)

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಎಂಟು ಶತಕಗಳ ಸಂದರ್ಭಗಳಲ್ಲಿ, ಇನ್ನೊಬ್ಬ ಬ್ಯಾಟರ್ 4 ಪಂದ್ಯಗಳಲ್ಲಿ ಕೊಹ್ಲಿಯೊಂದಿಗೆ ಶತಕ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಅವರೊಂದಿಗಿನ ಒಂದೇ ಪಂದ್ಯದಲ್ಲಿ ಮೂರು ಬಾರಿ ಎದುರಾಳಿ‌ ತಂಡದ ಆಟಗಾರರು (ಕ್ಲಾಸೆನ್, ಗಿಲ್ ಮತ್ತು ಬಟ್ಲರ್) ಶತಕ ಸಿಡಿಸಿದ್ದಾರೆ. ಒಮ್ಮೆ ಕೊಹ್ಲಿಯೊಂದಿಗೆ ಸಹ ಆಟಗಾರ ಡಿವಿಲಿಯರ್ಸ್ ಸೆಂಚುರಿ ಬಾರಿಸಿದ್ದಾರೆ.(AFP)


IPL_Entry_Point

ಇತರ ಗ್ಯಾಲರಿಗಳು