ಕನ್ನಡ ಸುದ್ದಿ  /  Photo Gallery  /  Ipl 2024 Mumbai Indians Replace Injured Dilshan Madushanka With South Africa Teenager Kwena Maphaka Luke Wood Prs

ಗಾಯಾಳು ದಿಲ್ಶನ್ ಮಧುಶಂಕ ಬದಲಿಗೆ ಸೌತ್​ ಆಫ್ರಿಕಾದ ಅಂಡರ್-19 ಬೌಲರ್​​ಗೆ ಮಣೆ ಹಾಕಿದ ಮುಂಬೈ ಇಂಡಿಯನ್ಸ್

  • Mumbai Indians: 17ನೇ ಆವೃತ್ತಿಯ ಆರಂಭಕ್ಕೂ ಮುನ್ನ ಪ್ರಮುಖ ಆಟಗಾರರನ್ನು ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿದೆ.

17ನೇ ಆವೃತ್ತಿಯ ಆರಂಭಕ್ಕೂ ಮುನ್ನ ಪ್ರಮುಖ ಆಟಗಾರರನ್ನು ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಂಡಿದೆ. ಮಾರ್ಚ್ 24ರಂದು ತನ್ನ ಅಭಿಯಾನ ಆರಂಭಿಸಲಿರುವ ಮುಂಬೈ ತಂಡಕ್ಕೆ ಹೊಸ ಆಟಗಾರ ಎಂಟ್ರಿಕೊಟ್ಟಿದ್ದಾರೆ. ಕಳೆದ ಅಂಡರ್-19 ವಿಶ್ವಕಪ್​​ನಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದ್ದ ಆಟಗಾರ ಎಂಐ ಕ್ಯಾಂಪ್ ಸೇರಿದ್ದಾರೆ.
icon

(1 / 5)

ಸ್ನಾಯುಸೆಳೆತದ ಗಾಯದಿಂದಾಗಿ ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ಶ್ರೀಲಂಕಾದ ಯುವ ವೇಗಿ ದಿಲ್ಶಾನ್ ಮಧುಶಂಕ ಸಹ ಗಾಯದ ಕಾರಣ  ಮುಂಬೈ ಇಂಡಿಯನ್ಸ್ ತಂಡದಿಂದ ಹೊರಗುಳಿದಿದ್ದಾರೆ. ಏಕದಿನ ವಿಶ್ವಕಪ್​​​​ನಲ್ಲಿ ಮಧುಶಂಕ ಉತ್ತಮ ಫಾರ್ಮ್​​ನಲ್ಲಿದ್ದರು. ಅವರು 21 ವಿಕೆಟ್​ ಪಡೆದು ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದರು.
icon

(2 / 5)

ದಿಲ್ಶಾನ್ ಮಧುಶಂಕ ಬದಲಿಗೆ ದಕ್ಷಿಣ ಆಫ್ರಿಕಾದ 17 ವರ್ಷದ ವೇಗಿ ಕ್ವೆನಾ ಮಫಾಕಾ ಅವರನ್ನು ಮುಂಬೈ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕಳೆದ ಅಂಡರ್-19 ವಿಶ್ವಕಪ್​​ನಲ್ಲಿ ಕ್ವೆನಾ ಆರು ಪಂದ್ಯಗಳಲ್ಲಿ 21 ವಿಕೆಟ್​ ಪಡೆದು ಮಿಂಚಿದ್ದರು. ಅಲ್ಲದೆ, ಮೂರು ಬಾರಿ ಇನ್ನಿಂಗ್ಸ್​ವೊಂದರಲ್ಲಿ 5 ವಿಕೆಟ್ ಪಡೆದ ಸಾರ್ವಕಾಲಿಕ ದಾಖಲೆಯನ್ನು ಮಫಾಕಾ ಹೊಂದಿದ್ದಾರೆ. ಕ್ವೆನಾ ಈವರೆಗೆ ಸೀನಿಯರ್ ಮಟ್ಟದಲ್ಲಿ ಎರಡು ಪ್ರಥಮ ದರ್ಜೆ, ಎರಡು ಲಿಸ್ಟ್ ಎ ಮತ್ತು ಒಂಬತ್ತು ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
icon

(3 / 5)

ಮಫಾಕಾ 2022ರ ಯೂತ್ ವಿಶ್ವಕಪ್​​ನಲ್ಲೂ ದಕ್ಷಿಣ ಆಫ್ರಿಕಾ ಪರ ಆಡಿದ್ದರು. 3 ಪಂದ್ಯಗಳಲ್ಲಿ 7 ವಿಕೆಟ್​​ ಪಡೆದಿದ್ದರು. ವಿಶೇಷವೆಂದರೆ, 2022ರ ವಿಶ್ವಕಪ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದ ಡೆವಾಲ್ಡ್ ಬ್ರೆವಿಸ್ ಕೂಡ ಮುಂಬೈ ಪರವೇ ಆಡುತ್ತಿದ್ದಾರೆ. ಸದ್ಯ ಮುಂಬೈ ತಂಡದಲ್ಲಿ ಆಟಗಾರರ ನಡುವೆ ಪೈಪೋಟಿ ಹೆಚ್ಚಾಗಿದ್ದು, ಮಫಾಕಾ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುತ್ತಾರಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.
icon

(4 / 5)

ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಜೇಸನ್ ಬೆಹ್ರೆನ್‌ಡಾರ್ಫ್  ಬದಲಿಗೆ ಎಡಗೈ ವೇಗಿ ಲ್ಯೂಕ್ ವುಡ್ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಲ್ಯೂಕ್ 140 ಟಿ20 ಪಂದ್ಯಗಳಲ್ಲಿ 147 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ಪರ 5 ಟಿ20 ಪಂದ್ಯಗಳನ್ನಾಡಿರುವ ಅವರು 8 ವಿಕೆಟ್ ಕಬಳಿಸಿದ್ದಾರೆ. ವುಡ್ ಇತ್ತೀಚೆಗೆ ಮುಕ್ತಾಯಗೊಂಡ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಪೇಶಾವರ್ ಝಲ್ಮಿ ಪರ ಆಡಿದ್ದರು.
icon

(5 / 5)

ಇತರ ಗ್ಯಾಲರಿಗಳು