ಕನ್ನಡ ಸುದ್ದಿ  /  Photo Gallery  /  Ipl 2024 Opening Ceremony Photos From Chepauk Stadium Chennai Akshay Kumar Tiger Shroff Ar Rahman Sonu Nigam Csk Jra

Photos: ಐಪಿಎಲ್ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಅಕ್ಷಯ್, ಟೈಗರ್ ಮೋಡಿ; ಪ್ರೇಕ್ಷಕರ ಮನಗೆದ್ದ ಸೋನು-ರೆಹಮಾನ್

  • ಐಪಿಎಲ್‌ 2024ರ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಚೆನ್ನೈನ ಎಂಎ ಚಿದಂಬರಂ ಕ್ರಿಡಾಂಗಣದಲ್ಲಿ ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವಿನ ಪಂದ್ಯಕ್ಕೂ ಮುನ್ನ, ಮನರಂಜನಾ ಕಾರ್ಯಕ್ರಮಗಳೊಂದಿಗೆ ಟೂರ್ನಿಗೆ ಚಾಲನೆ ಸಿಕ್ಕಿತು. ಉದ್ಘಾಟನಾ ಸಮಾರಂಭದಲ್ಲಿ ಟೈಗರ್‌ ಶ್ರಾಫ್‌, ಅಕ್ಷಯ್‌ ಕುಮಾರ್‌, ಎಆರ್‌ ರೆಹಮಾನ್‌, ಸೋನು ನಿಗಮ್‌ ಸೇರಿದಂತೆ ಸೆಲಿಬ್ರಿಟಿಗಳು ಭಾಗಿಯಾದರು.

ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅದ್ಧೂರಿ ಚಾಲನೆ ಸಿಕ್ಕಿತು. ಉದ್ಘಾಟನಾ ಸಮಾರಂಭದ ವೇಳೆ ಐಪಿಎಲ್ ಟ್ರೋಫಿಯ ಕಂಡುಬಂದಿದ್ದು ಹೀಗೆ.
icon

(1 / 11)

ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅದ್ಧೂರಿ ಚಾಲನೆ ಸಿಕ್ಕಿತು. ಉದ್ಘಾಟನಾ ಸಮಾರಂಭದ ವೇಳೆ ಐಪಿಎಲ್ ಟ್ರೋಫಿಯ ಕಂಡುಬಂದಿದ್ದು ಹೀಗೆ.(PTI)

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರದರ್ಶನ ನೀಡಿದರು. 
icon

(2 / 11)

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರದರ್ಶನ ನೀಡಿದರು. (Lakshmi)

ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಆವೃತ್ತಿಯು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದೊಂದಿಗೆ ಆರಂಭವಾಯಿತು. ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಿತು. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಗಾಯಕರಾದ ಸೋನು ನಿಗಮ್ ಮತ್ತು ಎಆರ್ ರೆಹಮಾನ್ ಪ್ರೇಕ್ಷಕರನ್ನು ರಂಜಿಸಿದರು. 
icon

(3 / 11)

ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಭಾರತದ ತ್ರಿವರ್ಣ ಧ್ವಜ ಹಿಡಿದು ಪ್ರದರ್ಶನ ನೀಡಿದರು. ಜೈ ಜೈ ಶಿವ ಶಂಕರ್, ಮೈನ್ ತೇರಾ ಹೀರೋ, ಹರೇ ರಾಮ್ ಹರೇ ಕೃಷ್ಣ ಮತ್ತು ಮಸ್ತ್ ಮಲಾಂಗ್ ಸೇರಿದಂತೆ ಹಲವು ಹಾಡುಗಳಿಗೆ ಪ್ರದರ್ಶನ ನೀಡಿದರು. 
icon

(4 / 11)

ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಭಾರತದ ತ್ರಿವರ್ಣ ಧ್ವಜ ಹಿಡಿದು ಪ್ರದರ್ಶನ ನೀಡಿದರು. ಜೈ ಜೈ ಶಿವ ಶಂಕರ್, ಮೈನ್ ತೇರಾ ಹೀರೋ, ಹರೇ ರಾಮ್ ಹರೇ ಕೃಷ್ಣ ಮತ್ತು ಮಸ್ತ್ ಮಲಾಂಗ್ ಸೇರಿದಂತೆ ಹಲವು ಹಾಡುಗಳಿಗೆ ಪ್ರದರ್ಶನ ನೀಡಿದರು. 

ಖ್ಯಾತ ಗಾಯಕ ಸೋನು ನಿಗಮ್, ವಂದೇ ಮಾತರಂ ಗೀತೆ ಹಾಡುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಎಆರ್ ರೆಹಮಾನ್ ಕೂಡಾ ವೇದಿಕೆ ಪ್ರವೇಶಿಸಿದರು. 
icon

(5 / 11)

ಖ್ಯಾತ ಗಾಯಕ ಸೋನು ನಿಗಮ್, ವಂದೇ ಮಾತರಂ ಗೀತೆ ಹಾಡುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಎಆರ್ ರೆಹಮಾನ್ ಕೂಡಾ ವೇದಿಕೆ ಪ್ರವೇಶಿಸಿದರು. 

ಸಾಂಸ್ಕ್ರತಿಕ ಕಾರ್ಯಕ್ರಮದ ಬಳಿಕ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರನ್ನು ವೇದಿಕೆಗೆ ಆಹ್ವಾನಿಸಲಾಯ್ತು. ಈ ವೇಳೆ ಉಭಯ ತಂಡಗಳ ನಾಯಕರು ಉಪಸ್ಥಿತರಿದ್ದರು. 
icon

(6 / 11)

ಸಾಂಸ್ಕ್ರತಿಕ ಕಾರ್ಯಕ್ರಮದ ಬಳಿಕ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರನ್ನು ವೇದಿಕೆಗೆ ಆಹ್ವಾನಿಸಲಾಯ್ತು. ಈ ವೇಳೆ ಉಭಯ ತಂಡಗಳ ನಾಯಕರು ಉಪಸ್ಥಿತರಿದ್ದರು. 

ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. 
icon

(7 / 11)

ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. 

ಟಾಸ್‌ ಪ್ರಕ್ರಿಯೆಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. 
icon

(8 / 11)

ಟಾಸ್‌ ಪ್ರಕ್ರಿಯೆಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. (CSK Twitter)

ಉದ್ಘಾಟನಾ ಸಮಾರಂಭದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಸಹ ಆಟಗಾರರು ಮೈದಾನ ಪ್ರವೇಶಿಸುತ್ತಿರುವ ದೃಶ್ಯ 
icon

(9 / 11)

ಉದ್ಘಾಟನಾ ಸಮಾರಂಭದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಸಹ ಆಟಗಾರರು ಮೈದಾನ ಪ್ರವೇಶಿಸುತ್ತಿರುವ ದೃಶ್ಯ (AFP)

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮೈದಾನ ಪ್ರವೇಶಿಸುತ್ತಿರುವುದು. 
icon

(10 / 11)

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮೈದಾನ ಪ್ರವೇಶಿಸುತ್ತಿರುವುದು. (PTI)

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಉದ್ಘಾಟನಾ ಸಮಾರಂಭದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು. 
icon

(11 / 11)

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಉದ್ಘಾಟನಾ ಸಮಾರಂಭದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು. (Lakshmi)

IPL_Entry_Point

ಇತರ ಗ್ಯಾಲರಿಗಳು