IPL Points Table: ಸತತ 4 ಗೆಲುವು ದಾಖಲಿಸಿದ ರಾಜಸ್ಥಾನ್ ರಾಯಲ್ಸ್ಗೆ ರಾಜಪಟ್ಟ; ಸೋತರೂ ಎಲ್ಲಿತ್ತೋ ಅಲ್ಲೇ ಇದೆ ಆರ್ಸಿಬಿ
- IPL 2024 Points Table : 17ನೇ ಆವೃತ್ತಿಯ ಐಪಿಎಲ್ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ಜಯಿಸಿದ ನಂತರ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣೆ ಏನು ಎಂಬುದರ ವಿವರ ಇಲ್ಲಿದೆ.
- IPL 2024 Points Table : 17ನೇ ಆವೃತ್ತಿಯ ಐಪಿಎಲ್ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ಜಯಿಸಿದ ನಂತರ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣೆ ಏನು ಎಂಬುದರ ವಿವರ ಇಲ್ಲಿದೆ.
(1 / 6)
ಐಪಿಎಲ್ 2024ರ 19ನೇ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ರಾಜಸ್ಥಾನ್ ರಾಯಲ್ಸ್ 6 ವಿಕೆಟ್ಗಳಿಂದ ಸೋಲಿಸಿತು. ರಾಜಸ್ಥಾನ ತಂಡದ ಗೆಲುವು ಅಂಕಪಟ್ಟಿಯಲ್ಲಿ ಹಲವು ಬದಲಾವಣೆ ಮಾಡಿದೆ. ಸತತ ನಾಲ್ಕನೇ ಜಯಿಸಿದ ಆರ್ಆರ್ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟರೆ, ಸೋತ ಆರ್ಸಿಬಿ 8ನೇ ಸ್ಥಾನದಲ್ಲೇ ಮುಂದುವರೆದಿದೆ.
(AFP)(2 / 6)
ರಾಜಸ್ಥಾನ್ ರಾಯಲ್ಸ್ ಸತತ 4ರಲ್ಲಿ ಜಯಿಸಿದೆ. ಸಂಜು ಸ್ಯಾಮ್ಸನ್ ನೇತೃತ್ವದ ತಂಡವು 8 ಅಂಕ ಪಡೆದಿದ್ದು, ಕೋಲ್ಕತಾ ನೈಟ್ ರೈಡರ್ಸ್ಅನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕೆಕೆಆರ್ 3ಕ್ಕೆ 3 ಗೆದ್ದು 6 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದೆ.
(3 / 6)
ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನಕ್ಕೇರಿದ ನಂತರ ಕೋಲ್ಕತಾ ನೈಟ್ ರೈಡರ್ಸ್ 2ನೇ ಸ್ಥಾನಕ್ಕೆ ಕುಸಿದಿದೆ. ಶ್ರೇಯಸ್ ಅಯ್ಯರ್ ಸಾರಥ್ಯದ ತಂಡವು ಅಜೇಯವಾಗಿದ್ದು, ಮೂರಕ್ಕೆ ಮೂರು ಜಯಿಸಿದೆ. ಕೋಲ್ಕತಾ ತನ್ನ ಮುಂದಿನ ಪಂದ್ಯದಲ್ಲಿ ಗೆದ್ದರೆ ಆರ್ಆರ್ ತಂಡವನ್ನು ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರಲಿದೆ. ಏಕೆಂದರೆ ಆರ್ಆರ್ಗಿಂತ ಕೆಕೆಆರ್ ನೆಟ್ರನ್ ರೇಟ್ ಉತ್ತಮವಾಗಿದೆ.
(PTI)(4 / 6)
ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8ನೇ ಸ್ಥಾನದಲ್ಲಿದೆ. ಆಡಿದ 5ರಲ್ಲಿ 1 ಗೆಲುವು, 4 ಸೋಲು ಕಂಡಿದೆ. ಕೇವಲ 2 ಅಂಕ ಸಂಪಾದಿಸಿದೆ.
(PTI)(5 / 6)
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕ್ರಮವಾಗಿ 9 ಮತ್ತು 10ನೇ ಸ್ಥಾನದಲ್ಲಿವೆ. ಡೆಲ್ಲಿ ಒಂದಾದರೂ 2 ಅಂಕ ಸಂಪಾದಿಸಿದ್ದರೆ, ಮುಂಬೈ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಹಾಗಾಗಿ ಏಪ್ರಿಲ್ 7ರಂದು ಉಭಯ ತಂಡಗಳು ಸೆಣಸಾಟ ನಡೆಸಲಿದ್ದು, ಯಾರಿಗೆ ಗೆಲುವು ಸಿಗುತ್ತದೋ ಎಂಬುದನ್ನು ಕಾದು ನೋಡಬೇಕಿದೆ.
(PTI)ಇತರ ಗ್ಯಾಲರಿಗಳು