ಕನ್ನಡ ಸುದ್ದಿ  /  Photo Gallery  /  Ipl 2024 Points Table Csk Jumps Top Of The Table In Indian Premier League 2024 Standings Rcb Mi Rr Gt Srh Kkr Lsg Jra

IPL Point Table: ಸತತ 2 ಗೆಲುವುಗಳೊಂದಿಗೆ ಅಗ್ರಸ್ಥಾನಕ್ಕೇರಿದ ಸಿಎಸ್‌ಕೆ; ಆರ್‌ಸಿಬಿಗೆ ಯಾವ ಸ್ಥಾನ? ಹೀಗಿದೆ ಅಂಕಪಟ್ಟಿ

  • Indian Premier League 2024: ಐಪಿಎಲ್ 2024ರ ಆವೃತ್ತಿಯಲ್ಲಿ ಲೀಗ್ ಹಂತದ ಏಳನೇ ಪಂದ್ಯದ ನಂತರ, ಸಿಎಸ್‌ಕೆ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಟೇಬಲ್‌ನನಲ್ಲಿ ಆರ್‌ಸಿಬಿ ತಂಡ ಯಾವ ಸ್ಥಾನದಲ್ಲಿದೆ? ಇತರ ತಂಡಗಳ ಸ್ಥಾನ ಯಾವುದು ಎಂಬ ವಿವರ ಇಲ್ಲಿದೆ.

ಪ್ರಸಕ್ತ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್, ತನ್ನ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಮಣಿಸಿದೆ. ತಂಡವು ಆಡಿದ 2 ಪಂದ್ಯಗಳಿಂದ 4 ಅಂಕಗಳನ್ನು ಗಳಿಸಿದೆ. ಆ ಮೂಲಕ ಅವರು ರಾಜಸ್ಥಾನ್ ರಾಯಲ್ಸ್‌ ತಂಡವನ್ನು ಕೆಳಕ್ಕಿಳಿಸಿ ತMಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ತಂಡದ ಬಳಿ +1.979 ನೆಟ್ ರನ್ ರೇಟ್ ಇದೆ.
icon

(1 / 10)

ಪ್ರಸಕ್ತ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್, ತನ್ನ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಮಣಿಸಿದೆ. ತಂಡವು ಆಡಿದ 2 ಪಂದ್ಯಗಳಿಂದ 4 ಅಂಕಗಳನ್ನು ಗಳಿಸಿದೆ. ಆ ಮೂಲಕ ಅವರು ರಾಜಸ್ಥಾನ್ ರಾಯಲ್ಸ್‌ ತಂಡವನ್ನು ಕೆಳಕ್ಕಿಳಿಸಿ ತMಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ತಂಡದ ಬಳಿ +1.979 ನೆಟ್ ರನ್ ರೇಟ್ ಇದೆ.(AFP)

ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ತನ್ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದ ರಾಜಸ್ಥಾನ್ 1 ಪಂದ್ಯದಲ್ಲಿ 2 ಅಂಕಗಳನ್ನು ಗಳಿಸಿದೆ. ಸಂಜು ಸ್ಯಾಮ್ಸನ್‌ ಬಳಗದ ನೆಟ್ ರನ್ ರೇಟ್ +1.000 ಆಗಿದೆ. ನೆಟ್ ರನ್ ರೇಟ್‌ನಿಂದ ರಾಜಸ್ಥಾನ್ ತಂಡವು ಕೆಕೆಆರ್, ಪಂಜಾಬ್ ಕಿಂಗ್ಸ್, ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳನ್ನು ಹಿಂದಿಕ್ಕಿದೆ.
icon

(2 / 10)

ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ತನ್ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದ ರಾಜಸ್ಥಾನ್ 1 ಪಂದ್ಯದಲ್ಲಿ 2 ಅಂಕಗಳನ್ನು ಗಳಿಸಿದೆ. ಸಂಜು ಸ್ಯಾಮ್ಸನ್‌ ಬಳಗದ ನೆಟ್ ರನ್ ರೇಟ್ +1.000 ಆಗಿದೆ. ನೆಟ್ ರನ್ ರೇಟ್‌ನಿಂದ ರಾಜಸ್ಥಾನ್ ತಂಡವು ಕೆಕೆಆರ್, ಪಂಜಾಬ್ ಕಿಂಗ್ಸ್, ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳನ್ನು ಹಿಂದಿಕ್ಕಿದೆ.(ANI)

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೆಕೆಆರ್ 1 ಪಂದ್ಯದಲ್ಲಿ 2 ಅಂಕಗಳನ್ನು ಗಳಿಸಿದೆ. ತಂಡದ ನೆಟ್ ರನ್ ರೇಟ್ +0.200 ಆಗಿದೆ.  
icon

(3 / 10)

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೆಕೆಆರ್ 1 ಪಂದ್ಯದಲ್ಲಿ 2 ಅಂಕಗಳನ್ನು ಗಳಿಸಿದೆ. ತಂಡದ ನೆಟ್ ರನ್ ರೇಟ್ +0.200 ಆಗಿದೆ.  (AFP)

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತನ್ನ ಐಪಿಎಲ್ 2024ರ ಅಭಿಯಾನ ಪ್ರಾರಂಭಿಸಿತು. ಆದರೆ ತನ್ನ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋತಿತು. ಎರಡು ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ಪಂಜಾಬ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಧವನ್‌ ಪಡೆಯ ನೆಟ್ ರನ್ ರೇಟ್ +0.025 ಆಗಿದೆ.
icon

(4 / 10)

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತನ್ನ ಐಪಿಎಲ್ 2024ರ ಅಭಿಯಾನ ಪ್ರಾರಂಭಿಸಿತು. ಆದರೆ ತನ್ನ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋತಿತು. ಎರಡು ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ಪಂಜಾಬ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಧವನ್‌ ಪಡೆಯ ನೆಟ್ ರನ್ ರೇಟ್ +0.025 ಆಗಿದೆ.

ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತು. ಆದರೆ, ತವರಿನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ‌ ಗೆದ್ದು ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ಆಡಿರುವ 2 ಪಂದ್ಯಗಳಲ್ಲಿ 2 ಅಂಕ ಗಳಿಸಿರುವ ಬೆಂಗಳೂರು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಫಾಫಾ ಪಡೆಯ ನೆಟ್ ರನ್ ರೇಟ್ -0.180 ಆಗಿದೆ.
icon

(5 / 10)

ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತು. ಆದರೆ, ತವರಿನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ‌ ಗೆದ್ದು ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ಆಡಿರುವ 2 ಪಂದ್ಯಗಳಲ್ಲಿ 2 ಅಂಕ ಗಳಿಸಿರುವ ಬೆಂಗಳೂರು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಫಾಫಾ ಪಡೆಯ ನೆಟ್ ರನ್ ರೇಟ್ -0.180 ಆಗಿದೆ.(AFP)

ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನೊಂದಿಗೆ ಐಪಿಎಲ್ 2024ರ ಅಭಿಯಾನವನ್ನು ಆರಂಭಿಸಿದ ಗುಜರಾತ್ ಟೈಟಾನ್ಸ್, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ತಂಡವು 2 ಪಂದ್ಯಗಳಿಂದ 2 ಅಂಕ ಗಳಿಸಿ ಪಾಯಿಂಟ್‌ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಗಿಲ್‌ ಬಳಗದ ನೆಟ್ ರನ್ ರೇಟ್ -1.425.
icon

(6 / 10)

ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನೊಂದಿಗೆ ಐಪಿಎಲ್ 2024ರ ಅಭಿಯಾನವನ್ನು ಆರಂಭಿಸಿದ ಗುಜರಾತ್ ಟೈಟಾನ್ಸ್, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ತಂಡವು 2 ಪಂದ್ಯಗಳಿಂದ 2 ಅಂಕ ಗಳಿಸಿ ಪಾಯಿಂಟ್‌ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಗಿಲ್‌ ಬಳಗದ ನೆಟ್ ರನ್ ರೇಟ್ -1.425.(ANI)

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತ ಸನ್‌ರೈಸರ್ಸ್ ಹೈದರಾಬಾದ್, ಇನ್ನೂ ಅಂಕಗಳ ಖಾತೆಗೆ ತೆರೆದಿಲ್ಲ. ಏಳನೇ ಸ್ಥಾನದಲ್ಲಿರುವ ತಂಡದ ನೆಟ್ ರನ್ ರೇಟ್ -0.200 ಆಗಿದೆ.
icon

(7 / 10)

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತ ಸನ್‌ರೈಸರ್ಸ್ ಹೈದರಾಬಾದ್, ಇನ್ನೂ ಅಂಕಗಳ ಖಾತೆಗೆ ತೆರೆದಿಲ್ಲ. ಏಳನೇ ಸ್ಥಾನದಲ್ಲಿರುವ ತಂಡದ ನೆಟ್ ರನ್ ರೇಟ್ -0.200 ಆಗಿದೆ.(AFP)

ಗುಜರಾತ್ ಟೈಟಾನ್ಸ್ ವಿರುದ್ಧ ಸೋಲಿನೊಂದಿಗೆ ಐಪಿಎಲ್ 2024 ಅಭಿಯಾನವನ್ನು ಪ್ರಾರಂಭಿಸಿದ ಮುಂಬೈ ಇಂಡಿಯನ್ಸ್ ಕೂಡಾ ಪಾಯಿಂಟ್ಸ್ ಖಾತೆಯನ್ನು ತೆರೆದಿಲ್ಲ. ತಂಡವು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ನೆಟ್ ರನ್ ರೇಟ್ -0.300 ಆಗಿದೆ.
icon

(8 / 10)

ಗುಜರಾತ್ ಟೈಟಾನ್ಸ್ ವಿರುದ್ಧ ಸೋಲಿನೊಂದಿಗೆ ಐಪಿಎಲ್ 2024 ಅಭಿಯಾನವನ್ನು ಪ್ರಾರಂಭಿಸಿದ ಮುಂಬೈ ಇಂಡಿಯನ್ಸ್ ಕೂಡಾ ಪಾಯಿಂಟ್ಸ್ ಖಾತೆಯನ್ನು ತೆರೆದಿಲ್ಲ. ತಂಡವು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ನೆಟ್ ರನ್ ರೇಟ್ -0.300 ಆಗಿದೆ.(PTI)

ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ತಂಡ ಕೂಡಾ ಇನ್ನೂ ಪಾಯಿಂಟ್ಸ್ ಖಾತೆ ತೆರೆದಿಲ್ಲ. ಡೆಲ್ಲಿ ತಂಡದ ನೆಟ್ ರನ್ ರೇಟ್ -0.455 ಆಗಿದೆ.
icon

(9 / 10)

ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ತಂಡ ಕೂಡಾ ಇನ್ನೂ ಪಾಯಿಂಟ್ಸ್ ಖಾತೆ ತೆರೆದಿಲ್ಲ. ಡೆಲ್ಲಿ ತಂಡದ ನೆಟ್ ರನ್ ರೇಟ್ -0.455 ಆಗಿದೆ.(ANI)

ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಪ್ರಾರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್, ಲೀಗ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಯಾವುದೇ ಅಂಕವಿಲ್ಲದೆ ತಂಡವು ಕೊನೆಯ ಸ್ಥಾನದಲ್ಲಿದೆ. ಲಕ್ನೋದ ನೆಟ್ ರನ್ ರೇಟ್ -1.000 ಆಗಿದೆ.
icon

(10 / 10)

ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಪ್ರಾರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್, ಲೀಗ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಯಾವುದೇ ಅಂಕವಿಲ್ಲದೆ ತಂಡವು ಕೊನೆಯ ಸ್ಥಾನದಲ್ಲಿದೆ. ಲಕ್ನೋದ ನೆಟ್ ರನ್ ರೇಟ್ -1.000 ಆಗಿದೆ.(ANI)


IPL_Entry_Point

ಇತರ ಗ್ಯಾಲರಿಗಳು