ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಿಟಿ ವಿರುದ್ಧ ಗೆದ್ದ ಡೆಲ್ಲಿ ಭಾರಿ ಜಿಗಿತ; ಪ್ಲೇಆಫ್​ಗೇರಲು ರಾಜಸ್ಥಾನ್​ಗೆ ಮೂರೇ ಹೆಜ್ಜೆ ಬಾಕಿ; ಪಾಯಿಂಟ್ಸ್ ಟೇಬಲ್ ಇಲ್ಲಿದೆ

ಜಿಟಿ ವಿರುದ್ಧ ಗೆದ್ದ ಡೆಲ್ಲಿ ಭಾರಿ ಜಿಗಿತ; ಪ್ಲೇಆಫ್​ಗೇರಲು ರಾಜಸ್ಥಾನ್​ಗೆ ಮೂರೇ ಹೆಜ್ಜೆ ಬಾಕಿ; ಪಾಯಿಂಟ್ಸ್ ಟೇಬಲ್ ಇಲ್ಲಿದೆ

  • IPL 2024 Points Table: ಇಂಡಿಯನ್ ಪ್ರೀಮಿಯರ್ ಲೀಗ್ 2024ರ 32ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದ ನಂತರ ಅಂಕಪಟ್ಟಿ ಹೀಗಿದೆ. (ಏಪ್ರಿಲ್ 17ರ ಪಂದ್ಯದ ಅಂತ್ಯಕ್ಕೆ ಮಾತ್ರ ಈ ಪಾಯಿಂಟ್ಸ್ ಟೇಬಲ್) 

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (ಏಪ್ರಿಲ್ 17ರಂದು) ಡೆಲ್ಲಿ ಕ್ಯಾಪಿಟಲ್ಸ್ - ಗುಜರಾತ್ ಟೈಟಾನ್ಸ್ ಪಂದ್ಯ ನಡೆಯಿತು. ರಿಷಭ್ ಪಂತ್​ ಪಡೆಯ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಗುಜರಾತ್, 89 ರನ್​ಗಳಿಗೆ ಆಲೌಟ್ ಆಯಿತು. ಡೆಲ್ಲಿ ಕೇವಲ 8.5 ಓವರ್​​​ಗಳಲ್ಲಿ ಗುರಿ ತಲುಪಿ ಜಯದ ನಗೆ ಬೀರಿತು. ಈ ಗೆಲುವಿನೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ 9 ರಿಂದ ಆರನೇ ಸ್ಥಾನಕ್ಕೇರಿದೆ. ಡೆಲ್ಲಿ ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ 6 ಅಂಕ ಗಳಿಸಿದೆ. 4ರಲ್ಲಿ ಸೋತಿದೆ. ನೆಟ್ ರನ್ ರೇಟ್ -0.074 ಆಗಿದೆ.
icon

(1 / 8)

ಡೆಲ್ಲಿ ವಿರುದ್ಧ ಸೋತ ನಂತರ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಒಂದು ಹೆಜ್ಜೆ ಹಿಂದೆ ಸರಿಯಬೇಕಾಯಿತು.ಶುಭ್ಮನ್ ನೇತೃತ್ವದ ತಂಡವು ಆರನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದೆ. ಗುಜರಾತ್ ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 4ರಲ್ಲಿ ಸೋತಿದೆ. ಡೆಲ್ಲಿಯಂತೆ ಟೈಟಾನ್ಸ್ ಕೂಡ 6 ಅಂಕ ಹೊಂದಿದೆ. ಆದರೆ ನೆಟ್​ರನ್ ರೇಟ್​ ಡಿಸಿಗಿಂತ ಕಡಿಮೆ ಇದೆ. ಜಿಟಿ ನೆಟ್ ರನ್ ರೇಟ್ -1.303 ಆಗಿದೆ.
icon

(2 / 8)

ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಫಲಿತಾಂಶ ಅಗ್ರ 5 ತಂಡಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಐಪಿಎಲ್ 2024ರ ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನದಲ್ಲಿದೆ. ರಾಯಲ್ಸ್ ಆಡಿರುವ 7 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ 12 ಅಂಕ ಗಳಿಸಿದೆ. ಸಂಜು ಸ್ಯಾಮ್ಸನ್ ಪಡೆ ಪ್ರಸ್ತುತ +0.677 ನೆಟ್ ರನ್ ರೇಟ್ ಹೊಂದಿದೆ. ಇನ್ನು ಮೂರು ಪಂದ್ಯಗಳಲ್ಲಿ ಜಯಿಸಿದರೆ ಪ್ಲೇಆಫ್​​ಗೆ ಅರ್ಹತೆ ಪಡೆಯಲಿದೆ.
icon

(3 / 8)

ಕೋಲ್ಕತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಲಾ 6 ಪಂದ್ಯಗಳನ್ನು ಆಡಿದ್ದು, ತಲಾ 4 ಪಂದ್ಯಗಳನ್ನು ಗೆದ್ದಿವೆ ಮತ್ತು ಎರಡು ಪಂದ್ಯಗಳಲ್ಲಿ ಸೋತಿವೆ. ಹೀಗಾಗಿ ಈ ಮೂರು ತಂಡಗಳು ಎಂಟು ಅಂಕಗಳನ್ನು ಹೊಂದಿವೆ. ನೆಟ್ ರನ್ ರೇಟ್ ಪ್ರಕಾರ ಕೆಕೆಆರ್ (+1.399) ಲೀಗ್ ಟೇಬಲ್​​ನಲ್ಲಿ ಎರಡನೇ ಸ್ಥಾನದಲ್ಲಿದೆ. ಚೆನ್ನೈ (+0.726) ಮತ್ತು ಹೈದರಾಬಾದ್ (+0.502) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
icon

(4 / 8)

ಲಕ್ನೋ ಸೂಪರ್ ಜೈಂಟ್ಸ್ 6 ಪಂದ್ಯಗಳಲ್ಲಿ 3 ಗೆಲುವು, 3 ಸೋಲು ಕಂಡಿದ್ದು, 6 ಅಂಕ ಸಂಪಾದಿಸಿದೆ. ನೆಟ್ ರನ್ ರೇಟ್ ವಿಷಯದಲ್ಲಿ ಡೆಲ್ಲಿ ಮತ್ತು ಗುಜರಾತ್​ಗಿಂತ ಹೆಚ್ಚಿರುವ ಕಾರಣ ಲೀಗ್ ಟೇಬಲ್​​ನಲ್ಲಿ ಲಕ್ನೋ 5ನೇ ಸ್ಥಾನದಲ್ಲಿದೆ. ಎಲ್​ಎಸ್​ಜಿ ನೆಟ್ ರನ್ ರೇಟ್ ಪ್ರಸ್ತುತ +0.038 ಆಗಿದೆ.
icon

(5 / 8)

ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ ಆರು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಹೊಂದಿವೆ. ಅಂದರೆ, ತಲಾ ಎರಡು ಪಂದ್ಯಗಳನ್ನು ಗೆದ್ದಿದ್ದು, ನಾಲ್ಕರಲ್ಲಿ ಸೋತಿವೆ. ನೆಟ್ ರನ್ ರೇಟ್ ಪ್ರಕಾರ ಪಂಜಾಬ್ (-0.218) ಲೀಗ್ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಮುಂಬೈ (-0.234) ಒಂಬತ್ತನೇ ಸ್ಥಾನದಲ್ಲಿದೆ. ಡೆಲ್ಲಿ ಗೆಲುವಿನಿಂದಾಗಿ ಈ ಎರಡೂ ತಂಡಗಳು ಒಂದು ಸ್ಥಾನ ಕುಸಿದಿವೆ.
icon

(6 / 8)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 7 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು 6ರಲ್ಲಿ ಸೋತಿದೆ. ಆರ್​ಸಿಬಿ ಎರಡು  ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅವರ ನೆಟ್ ರನ್ ರೇಟ್ ಪ್ರಸ್ತುತ -1.185 ಆಗಿದೆ.
icon

(7 / 8)

ಕ್ಷಣಕ್ಷಣದ ಕ್ರೀಡಾ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ,
icon

(8 / 8)

ಕ್ಷಣಕ್ಷಣದ ಕ್ರೀಡಾ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ,

IPL_Entry_Point

ಇತರ ಗ್ಯಾಲರಿಗಳು