ಜಯದೇವ್ ಉನದ್ಕತ್ ಇಂಪ್ಯಾಕ್ಟ್‌ ಪ್ಲೇಯರ್;‌ ಕೆಕೆಆರ್‌ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಎಸ್‌ಆರ್‌ಎಚ್ ಆಡುವ ಬಳಗ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಯದೇವ್ ಉನದ್ಕತ್ ಇಂಪ್ಯಾಕ್ಟ್‌ ಪ್ಲೇಯರ್;‌ ಕೆಕೆಆರ್‌ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಎಸ್‌ಆರ್‌ಎಚ್ ಆಡುವ ಬಳಗ

ಜಯದೇವ್ ಉನದ್ಕತ್ ಇಂಪ್ಯಾಕ್ಟ್‌ ಪ್ಲೇಯರ್;‌ ಕೆಕೆಆರ್‌ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಎಸ್‌ಆರ್‌ಎಚ್ ಆಡುವ ಬಳಗ

  • ಐಪಿಎಲ್‌ 2024ರ ಲೀಗ್‌ ಹಂತ ಅಂತ್ಯವಾದ ಬಳಿಕ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಸವಾಲೆಸೆಯಲು ಸಜ್ಜಾಗಿದೆ. ನಿರ್ಣಾಯಕ ಪಂದ್ಯಕ್ಕೆ ಎಸ್‌ಆರ್‌ಎಚ್‌ ಸಂಭಾವ್ಯ ತಂಡ ಹೇಗಿರಲಿದೆ ನೋಡೋಣ.

ಪ್ಲೇಆಫ್‌ ಹಂತದ ಮೊದಲನೇ ಪಂದ್ಯವು ಮೇ 21ರ ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಗೆದ್ದರೆ, ಸನ್‌ರೈಸರ್ಸ್‌ ತಂಡವು ನೇರವಾಗಿ ಫೈನಲ್‌ಗೆ ಲಗ್ಗೆ ಹಾಕಲಿದೆ. ಒಂದು ವೇಳೆ ಸೋತರೆ, ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಆಡುವ ಮತ್ತೊಂದು ಅವಕಾಶ ಪಡೆಯುತ್ತದೆ.
icon

(1 / 7)

(AFP)

ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುವ ಬಳಗದ ಸಂಯೋಜನೆಗೆ ಎಲ್ಲಾ ಆಟಗಾರರು ಲಭ್ಯರಿದ್ದಾರೆ. ವಿದೇಶಿ ಆಟಗಾರರು ಕೂಡಾ ತಂಡ ಬಿಟ್ಟು ತೆರಳಿಲ್ಲ.
icon

(2 / 7)

(PTI)

ಎಸ್‌ಆರ್‌ಎಚ್‌ ತಂಡ ಬ್ಯಾಟಿಂಗ್‌ನಲ್ಲಿ ಸ್ಫೋಟಕ ಪ್ರದರ್ಶನ ನೀಡುತ್ತಿದೆ. ಆರಂಭಿಕ ಜೋಡಿಯಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅಬ್ಬರಿಸುತ್ತಿದ್ದಾರೆ. ಟೂರ್ನಿಯಲ್ಲಿ ಅಭಿಷೇಕ್‌ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದರೆ, ಟ್ರಾವಿಸ್‌‌ ಹೆಡ್‌ ಹೆಚ್ಚು ಫೋರ್‌ ಬಾರಿಸಿದ ಬ್ಯಾಟರ್‌ ಆಗಿದ್ದಾರೆ.
icon

(3 / 7)

ತಂಡದ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್, ನಿತೀಶ್ ರೆಡ್ಡಿ ಅವರಂಥ ಬ್ಯಾಟರ್‌ಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕೆಳಕ್ರಮಾಂಕದಲ್ಲಿ ಶಹಬಾಜ್‌ ಅಹ್ಮದ್‌, ಪ್ಯಾಟ್‌ ಕಮಿನ್ಸ್‌ ಕೂಡಾ ನೆರವಾಗಬಲ್ಲರು.
icon

(4 / 7)

ಬೌಲಿಂಗ್‌ನಲ್ಲಿ ವೇಗಿ ಮಾರ್ಕೊ ಜಾನ್ಸೆನ್ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಇದೇ ವೇಳೆ ಜಯದೇವ್ ಉನದ್ಕತ್ ಇಂಪ್ಯಾಕ್ಟ್‌ ಆಟಗಾರನಾಗಿ ಛಾಪು ಮೂಡಿಸಬಹುದು.
icon

(5 / 7)

ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಶಹಬಾಜ್ ಅಹ್ಮದ್, ಸನ್ವಿರ್ ಸಿಂಗ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್.
icon

(6 / 7)

(ANI)

ಇಂಪ್ಯಾಕ್ಟ್ ಆಟಗಾರ: ಜಯದೇವ್ ಉನದ್ಕತ್
icon

(7 / 7)

ಇಂಪ್ಯಾಕ್ಟ್ ಆಟಗಾರ: ಜಯದೇವ್ ಉನದ್ಕತ್

(AFP)

ಇತರ ಗ್ಯಾಲರಿಗಳು