IPL 2024: ಹೈದರಾಬಾದ್ ವಿರುದ್ಧ 1 ವಿಕೆಟ್ ಕಬಳಿಸಿ ಮೊಹಮ್ಮದ್ ಶಮಿ ದಾಖಲೆ ಮುರಿದ ರಶೀದ್ ಖಾನ್
- ಪ್ರಸಕ್ತ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ವಿಕೆಟ್ ಕಬಳಿಸದೆ ಅಭಿಯಾನ ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ನರ್ ರಶೀದ್ ಖಾನ್, ತಂಡದ ಪರ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 1 ವಿಕೆಟ್ ಪಡೆಯುವ ಮೂಲಕ, ತಮ್ಮದೇ ತಂಡದ ಆಟಗಾರನ ದಾಖಲೆ ಮುರಿದಿದ್ದಾರೆ.
- ಪ್ರಸಕ್ತ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ವಿಕೆಟ್ ಕಬಳಿಸದೆ ಅಭಿಯಾನ ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ನರ್ ರಶೀದ್ ಖಾನ್, ತಂಡದ ಪರ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 1 ವಿಕೆಟ್ ಪಡೆಯುವ ಮೂಲಕ, ತಮ್ಮದೇ ತಂಡದ ಆಟಗಾರನ ದಾಖಲೆ ಮುರಿದಿದ್ದಾರೆ.
(1 / 5)
ಮಾರ್ಚ್ 31ರ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಶೀದ್ ಖಾನ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಗುಜರಾತ್ ಟೈಟಾನ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ರಶೀದ್ ಪಾತ್ರರಾಗಿದ್ದಾರೆ. ಇದರೊಂದಿಗೆ ಅವರು ಮೊಹಮ್ಮದ್ ಶಮಿ ದಾಖಲೆ ಮುರಿದಿದ್ದಾರೆ.
(AFP)(2 / 5)
ಇದಕ್ಕೂ ಮುನ್ನ ಟೈಟಾನ್ಸ್ ಪರ ಮೊಹಮ್ಮದ್ ಶಮಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಭಾನುವಾರದ ಪಂದ್ಯದಲ್ಲಿ ರಶೀದ್ ಟೈಟಾನ್ಸ್ ಪರ ತಮ್ಮ 49ನೇ ಐಪಿಎಲ್ ವಿಕೆಟ್ ಪಡೆದರು. ಆ ಮೂಲಕ ಶಮಿ ದಾಖಲೆಯನ್ನು ಮುರಿದರು. ಗುಜರಾತ್ ಪರ ಎರಡು ಋತುಗಳಲ್ಲಿ ಶಮಿ ಒಟ್ಟು 48 ವಿಕೆಟ್ ಪಡೆದಿದ್ದಾರೆ. ರಶೀದ್ ಇಂದು ಆ ದಾಖಲೆ ಮುರಿದಿದ್ದಾರೆ. ಗಾಯದಿಂದಾಗಿ ಶಮಿ ಈ ಋತುವಿನಲ್ಲಿ ಆಡುತ್ತಿಲ್ಲ.
(AP)(3 / 5)
ಪಂದ್ಯದಲ್ಲಿ ಹೆನ್ರಿಚ್ ಕ್ಲಾಸೆನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ರಶೀದ್ ಒಂದು ವಿಕೆಟ್ ಪಡೆದರು. ಕ್ಲಾಸೆನ್ 13 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಪಂದ್ಯದಲ್ಲಿ ರಶೀದ್ 4 ಓವರ್ ಬೌಲಿಂಗ್ ಮಾಡಿ 33 ರನ್ ನೀಡಿ 1 ವಿಕೆಟ್ ಪಡೆದರು.
(AFP)(4 / 5)
2022ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಪರ ರಶೀದ್ ಖಾನ್ 19 ವಿಕೆಟ್ ಪಡೆದಿದ್ದರು. 2023ರಲ್ಲಿ 27 ವಿಕೆಟ್ ಪಡೆದರು. ಪ್ರಸಕ್ತ ಆವೃತ್ತಿಯಲ್ಲಿ ವಿಕೆಟ್ ಕಬಳಿಸದೆ ಅಭಿಯಾನ ಆರಂಭಿಸಿದ ಸ್ಪಿನ್ನರ್, ಆ ಬಳಿಕ ಸಿಎಸ್‌ಕೆ ವಿರುದ್ಧ 2 ವಿಕೆಟ್ ಪಡೆದರು. ಇದೀಗ ಹೈದರಾಬಾದ್ ವಿರುದ್ಧ 1 ವಿಕೆಟ್ ಪಡೆದರೂ, ತಂಡದ ಪರ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
ಇತರ ಗ್ಯಾಲರಿಗಳು