ಸೋತರೂ ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಆರ್‌ಸಿಬಿ; ರಾಯಲ್ ಚಾಲೆಂಜರ್ಸ್ ಆಟಕ್ಕೆ ಬೆಂಗಳೂರು ಪ್ರೇಕ್ಷಕರ ಬಹುಪರಾಕ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೋತರೂ ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಆರ್‌ಸಿಬಿ; ರಾಯಲ್ ಚಾಲೆಂಜರ್ಸ್ ಆಟಕ್ಕೆ ಬೆಂಗಳೂರು ಪ್ರೇಕ್ಷಕರ ಬಹುಪರಾಕ್

ಸೋತರೂ ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಆರ್‌ಸಿಬಿ; ರಾಯಲ್ ಚಾಲೆಂಜರ್ಸ್ ಆಟಕ್ಕೆ ಬೆಂಗಳೂರು ಪ್ರೇಕ್ಷಕರ ಬಹುಪರಾಕ್

  • ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 25 ರನ್‌ಗಳಿಂದ ಸೋತಿತು. ಆದರೂ, ಪಂದ್ಯದಲ್ಲಿ ಆರ್‌ಸಿಬಿ ತಂಡ ದಾಖಲೆ ನಿರ್ಮಿಸಿದೆ. ಐಪಿಎಲ್‌ ಇತಿಹಾಸದಲ್ಲೇ ಚೇಸಿಂಗ್‌ ವೇಳೆ ಅತಿ ಹೆಚ್ಚು ರನ್‌ ಕಲೆ ಹಾಕಿದ ತಂಡ ಹೆಗ್ಗಳಿಕೆಗೆ ಫಾಫ್‌ ಡುಪ್ಲೆಸಿಸ್‌ ಪಡೆ ಪಾತ್ರವಾಗಿದೆ.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ನಡುವಿನ ಪಂದ್ಯವು, ಐಪಿಎಲ್ ಹಾಗೂ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತಿ ಹೆಚ್ಚು ರನ್‌ ದಾಖಲಾದ ಪಂದ್ಯ ಎಂಬ ದಾಖಲೆ ನಿರ್ಮಿಸಿತು. ವಿಶೇಷವಾಗಿ ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಇನ್ನಿಂಗ್ಸ್‌ ಕೂಡಾ ರೆಕಾರ್ಡ್‌ ಪಟ್ಟಿ ಸೇರಿದೆ.
icon

(1 / 6)

(AFP)

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌, ಐಪಿಎಲ್‌ ಇತಿಹಾಸದಲ್ಲೇ ಗರಿಷ್ಠ ಮೊತ್ತ 287 ರನ್‌ ಕಲೆ ಹಾಕಿತು. ಚೇಸಿಂಗ್‌ಗೆ ನಡೆಸಿದ ಆರ್‌ಸಿಬಿ, ಅಂತಿಮವಾಗಿ 7 ವಿಕೆಟ್‌ ಕಳೆದುಕೊಂಡು 262 ರನ್‌ ಗಳಿಸಿತು. ಕೇವಲ 25 ರನ್‌ಗಳಿಂದ ಪಂದ್ಯ ಕಳೆದುಕೊಂಡಿತು.
icon

(2 / 6)

ಐಪಿಎಲ್‌ನಲ್ಲಿ ಚೇಸಿಂಗ್‌ ವೇಳೆ ಅಥವಾ ಎರಡನೇ ಇನ್ನಿಂಗ್ಸ್‌ನಲ್ಲಿ ದಾಖಲಾದ ಅತಿ ಹೆಚ್ಚು ಮೊತ್ತವೇ ಆರ್‌ಸಿಬಿ ಗಳಿಸಿದ 262 ರನ್‌. ಈ ಹಿಂದೆ ಈ ದಾಖಲೆಯು ಮುಂಬೈ ಇಂಡಿಯನ್ಸ್‌ ಹೆಸರಲ್ಲಿತ್ತು. ಇದೇ ಆವೃತ್ತಿಯಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಎಂಐ ಗಳಿಸಿದ್ದ 246 ರನ್‌, ಐಪಿಎಲ್‌ನಲ್ಲಿ ಈವರೆಗೆ ದಾಖಲಾದ ಗರಿಷ್ಠ ಎರಡನೇ ಇನ್ನಿಂಗ್ಸ್‌ ಮೊತ್ತವಾಗಿತ್ತು. ಇದೀಗ ಆ‌ ದಾಖಲೆಯನ್ನು ಆರ್‌ಸಿಬಿ ಬ್ರೇಕ್‌ ಮಾಡಿದೆ. 
icon

(3 / 6)

ಇದೇ ವೇಳೆ ಟಿ20 ಕ್ರಿಕೆಟ್‌ನಲ್ಲಿಯೂ ಆರ್‌ಸಿಬಿ ಹಾಗೂ ಹೈದರಾಬಾದ್‌ ನಡುವಿನ ಪಂದ್ಯ ದಾಖಲೆ ನಿರ್ಮಿಸಿದೆ. ಎರಡೂ ಇನ್ನಿಂಗ್ಸ್‌ ಸೇರಿ ಪಂದ್ಯವೊಂದರಲ್ಲಿ ಗರಿಷ್ಠ ಮೊತ್ತ ಈ ಪಂದ್ಯದಲ್ಲಿ ಒಟ್ಟಾಗಿದೆ.
icon

(4 / 6)

(ANI )

ಸನ್‌ರೈಸರ್ಸ್‌ 287 ರನ್‌ ಗಳಿಸಿದರೆ, ಆರ್‌ಸಿಬಿ 262 ರನ್‌ ಕಲೆ ಹಾಕಿತು. ಒಟ್ಟಾರೆಯಾಗಿ ಪಂದ್ಯದಲ್ಲಿ 549 ರನ್‌ ಒಟ್ಟಯ್ತು. ಇದು ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ದಾಖಲಾದ ಗರಿಷ್ಠ ಮೊತ್ತವಾಗಿದೆ.
icon

(5 / 6)

(PTI)

ಈ ಹಿಂದೆ ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಇದೇ ಆವೃತ್ತಿಯಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್‌ ತಂಡಗಳು 523 ರನ್‌ ಕಲೆ ಹಾಕಿದ್ದವು. ಇದು ಪಂದ್ಯವೊಂದರಲ್ಲಿ ದಾಖಲಾದ ಎರಡನೇ ಗರಿಷ್ಠ ಮೊತ್ತವಾಗಿದೆ.
icon

(6 / 6)

ಇತರ ಗ್ಯಾಲರಿಗಳು