ಐಪಿಎಲ್ 2024 ಆರಂಭಕ್ಕೆ ಮುಹೂರ್ತ ಫಿಕ್ಸ್; ಉದ್ಘಾಟನಾ ಪಂದ್ಯದಲ್ಲಿ ಸಿಎಸ್ಕೆ vs ಆರ್ಸಿಬಿ ಸಾಧ್ಯತೆ
- Indian Premier League 2024: ಐಎಎನ್ಎಸ್ ವರದಿಗಳ ಪ್ರಕಾರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ.
- Indian Premier League 2024: ಐಎಎನ್ಎಸ್ ವರದಿಗಳ ಪ್ರಕಾರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ.
(1 / 9)
ಬಹುನಿರೀಕ್ಷಿತ ಐಪಿಎಲ್ 2024 ಆರಂಭಕ್ಕೆ ಮಹೂರ್ತ ನಿಗದಿಯಾಗಿದೆ. ಮಾರ್ಚ್ 22ರಿಂದ 17ನೇ ಆವೃತ್ತಿಯ ಲೀಗ್ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಜರುಗಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.
(PTI)(2 / 9)
ಮಾರ್ಚ್ 22 ರಂದು ಜರುಗುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರನ್ನರ್ಅಪ್ ಗುಜರಾತ್ ಟೈಟಾನ್ಸ್ ಸೆಣಸಾಟ ನಡೆಸಲಿವೆ ಎಂದು ಹೇಳಲಾಗುತ್ತಿದೆ. ಆದರೆ ಇದು ಅಂತಿಮವಲ್ಲ ಎಂದು ಅರುಣ್ ಧುಮಾಲ್ ಹೇಳಿದ್ದಾರೆ.
(PTI)(3 / 9)
17ನೇ ಸೀಸನ್ ಚೆನ್ನೈನಲ್ಲಿ ಪ್ರಾರಂಭವಾಗುವ ಕುರಿತು ಕ್ರಿಕ್ಬಜ್ ವರದಿ ಮಾಡಿದೆ. ಐಪಿಎಲ್‌ಗೆ ಸಂಬಂಧಿಸಿದ ಹಲವು ಅಧಿಕಾರಿಗಳು ಈ ಬಗ್ಗೆ ದೃಢಪಡಿಸಿದ್ದಾರೆ. ಇಂದು (ಫೆಬ್ರವರಿ 22ರಂದು) ಐಪಿಎಲ್ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ವರದಿಯಾಗಿದೆ.
(PTI)(4 / 9)
ಐಎಎನ್ಎಸ್ ವರದಿಗಳ ಪ್ರಕಾರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಮೊದಲ ಹಂತದಲ್ಲಿ 15 ದಿನಗಳ ಕಾಲದ ವೇಳಾಪಟ್ಟಿ ಮಾತ್ರ ಬಿಡುಗಡೆಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
(AFP)(5 / 9)
ಐಪಿಎಲ್ ಮತ್ತು ಲೋಕಸಭಾ ಚುನಾವಣೆ ಕಾರಣ ಏಕ ಕಾಲಕ್ಕೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆ ಬಳಿಕ ಉಳಿದ ವೇಳಾಪಟ್ಟಿ ಪ್ರಕಟಿಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ.
(PTI)(6 / 9)
ಇಡೀ ಐಪಿಎಲ್ ಟೂರ್ನಿಯು ಭಾರತದಲ್ಲೇ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಖಚಿತಪಡಿಸಿದ್ದಾರೆ. ಈ ಮೊದಲು ಚುನಾವಣೆ ಕಾರಣದಿಂದ ವಿದೇಶದಲ್ಲಿ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು.
(PTI)(7 / 9)
ಮಾರ್ಚ್ 22 ರಂದು ಪ್ರಾರಂಭವಾಗಿ ಮೇ 26 ರಂದು ಮುಕ್ತಾಯವಾಗಲಿದೆ. 2023 ರ ಆವೃತ್ತಿಯಂತೆ ಈ ವರ್ಷ 74 ಪಂದ್ಯಗಳು ನಡೆಯಲಿವೆ. ಆದರೆ ಕಳೆದ ವರ್ಷ 60 ದಿನಗಳ ಕಾಲ ನಡೆದಿತ್ತು. ಈ ಬಾರಿ 67 ದಿನಗಳ ಕಾಲ ನಡೆಯಲಿದೆ. ಸಾರ್ವತ್ರಿಕ ಚುನಾವಣೆಯ ಕಾರಣ ಒಂದು ವಾರ ವಿಸ್ತರಣೆಯಾಗಿದೆ.
(PTI)(8 / 9)
ಕಳೆದ ಬಾರಿ 2019ರಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆದಾಗ ಇದೇ ವಿಧಾನವನ್ನು ಅನುಸರಿಸಲಾಗಿತ್ತು. ಪಂದ್ಯಗಳನ್ನು ಎರಡು ಭಾಗಗಳಲ್ಲಿ ಆಡಿಸಲಾಗಿತ್ತು.
ಇತರ ಗ್ಯಾಲರಿಗಳು