IPL 2024 Points Table: ಗೆದ್ದ ಕೆಕೆಆರ್, ಗುಜರಾತ್ ತಂಡಗಳಿಗೆ ಬಡ್ತಿ; ಕೊನೆಯ ಸ್ಥಾನಗಳಲ್ಲೇ ಉಳಿದ ಆರ್‌ಸಿಬಿ-ಪಂಜಾಬ್
- ಐಪಿಎಲ್ 2024 ರ 36 ಹಾಗೂ 37ನೇ ಪಂದ್ಯದಲ್ಲಿ ಕ್ರಮವಾಗಿ ಕೆಕೆಆರ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಜಯ ಸಾಧಿಸಿವೆ. ಇದರೊಂದಿಗೆ ಈ ಎರಡೂ ತಂಡಗಳು ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿವೆ. ಕೋಲ್ಕತ್ತಾ ತಂಡವು ಆರ್‌ಸಿಬಿಯನ್ನು ಮಣಿಸಿದರೆ, ಗುಜರಾತ್ ತಂಡ ಪಂಜಾಬ್ ವಿರುದ್ಧ ಗೆದ್ದು ಬೀಗಿದೆ. ಲೀಗ್ ಹಂತದ 37ನೇಪಂದ್ಯದ ಬಳಿಕ ಅಂಕಪಟ್ಟಿ ಹೀಗಿದೆ.

(1 / 6)
ರಾಜಸ್ಥಾನ್ ರಾಯಲ್ಸ್ ತಂಡವು ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ತಂಡದ ಬಳಿ 12 ಅಂಕಗಳಿವೆ.(ANI )
(2 / 6)
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೊನೆಯ ಎಸೆತದಲ್ಲಿ ಕೇವಲ 1 ರನ್ ಅಂತರದಿಂದ ಜಯ ಗಳಿಸಿದ ಕೆಕೆಆರ್ ತಂಡವು, ಅಂಕಪಟ್ಟಿಯಲ್ಲಿ ಮತ್ತೆ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ತಂಡವು ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿದೆ.
(3 / 6)
ಏಪ್ರಿಲ್ 21ರ ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ. ತಂಡವು ಈವರೆಗೆ ಆಡಿದ 8 ಪಂದ್ಯಗಳಲ್ಲಿ ತಲಾ 4 ಗೆಲುವು ಹಾಗೂ ಸೋಲು ಕಂಡಿದೆ.(PTI)
(4 / 6)
ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಡಿದ ಏಳು ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕಗಳನ್ನು ಗಳಿಸಿದೆ. ಇದರೊಂದಿಗೆ ಪ್ಯಾಟ್ ಕಮಿನ್ಸ್ ಪಡೆಯು ಮೂರನೇ ಸ್ಥಾನದಲ್ಲಿದೆ.(PTI)
(5 / 6)
ಕೋಲ್ಕತ್ತಾ ವಿರುದ್ಧ ಸೋತ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ. ಟೂರ್ನಿಯಲ್ಲಿ ತಂಡವು ಏಕೈಕ ಗೆಲುವು ಮಾತ್ರ ಕಂಡಿದ್ದು, ಎಲಿಮನೇಟ್ ಆಗುವ ಭೀತಿಯಲ್ಲಿದೆ.(PTI)
ಇತರ ಗ್ಯಾಲರಿಗಳು