IPL 2024: ಗರಿಷ್ಠ ರನ್ ಮಾತ್ರವಲ್ಲ, ಸಿಕ್ಸರ್ ಸಿಡಿಸುವಲ್ಲೂ ದಾಖಲೆ ನಿರ್ಮಿಸಿದ ಸನ್‌ರೈಸರ್ಸ್ ಹೈದರಾಬಾದ್
- ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಎಸ್‌ಆರ್‌ಎಚ್, ಹಲವು ದಾಖಲೆ ನಿರ್ಮಿಸಿದೆ. ಪಂದ್ಯವೊಂದರಲ್ಲಿ ಗರಿಷ್ಠ ಮೊತ್ತ ಕಲೆ ಹಾಕಿದ್ದು ಮಾತ್ರವಲ್ಲದೆ, ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಮಾಡಿದೆ.
- ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಎಸ್‌ಆರ್‌ಎಚ್, ಹಲವು ದಾಖಲೆ ನಿರ್ಮಿಸಿದೆ. ಪಂದ್ಯವೊಂದರಲ್ಲಿ ಗರಿಷ್ಠ ಮೊತ್ತ ಕಲೆ ಹಾಕಿದ್ದು ಮಾತ್ರವಲ್ಲದೆ, ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಮಾಡಿದೆ.
(1 / 6)
ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದ ಎಸ್‌ಆರ್‌ಎಚ್ ಬ್ಯಾಟರ್‌ಗಳು ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ತಂಡವು 3 ವಿಕೆಟ್ ಕಳೆದುಕೊಂಡು 287 ರನ್ ಪೇರಿಸಿತು. ಅಲ್ಲದೆ ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ದಾಖಲೆಯ ದಾಖಲೆಯ 22 ಸಿಕ್ಸರ್‌ಗಳು ಸಿಡಿದವು. ಇದು ಐಪಿಎಲ್ ಇನ್ನಿಂಗ್ಸ್‌ನಲ್ಲಿ ದಾಖಲಾದ ಅತಿ ಹೆಚ್ಚು ರನ್ ಆಗಿದೆ.
(AFP)(2 / 6)
ಈ ಹಿಂದೆ ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಆರ್‌ಸಿಬಿ ಹೆಸರಲ್ಲಿತ್ತು. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು 21 ಸಿಕ್ಸರ್ ಸಿಡಿಸಿತ್ತು. ಇದೀಗ ಈ ದಾಖಲೆಯನ್ನು ಹೈದರಾಬಾದ್ ತಂಡ ಬ್ರೇಕ್ ಮಾಡಿದೆ.
(ANI )(3 / 6)
ಇತ್ತೀಚೆಗಷ್ಟೇ ಎಸ್‌ಆರ್‌ಎಚ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 20 ಸಿಕ್ಸರ್ ಸಿಡಿಸಿತ್ತು. ಇದು ಐಪಿಎಲ್‌ನ ಮೂರನೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಇನ್ನಿಂಗ್ಸ್ ಆಗಿದೆ.
(PTI)(4 / 6)
ಸನ್‌ರೈಸರ್ಸ್ ಪರ ಟ್ರಾವಿಸ್ ಹೆಡ್ 8 ಸಿಕ್ಸ್ ಸಿಡಿಸಿದರು. ಹೆನ್ರಿಚ್ ಕ್ಲಾಸೆನ್ 7 ಸಿಕ್ಸರ್ ಬಾರಿಸಿದರು. ಉಳಿದಂತೆ ಅಭಿಷೇಕ್ ಶರ್ಮಾ ಹಾಗೂ ಐಡೆನ್ ಮರ್ಕ್ರಾಮ್ ತಲಾ ಎರಡು ಸಿಕ್ಸರ್ ಸಿಡಿಸಿದರೆ, ಅಬ್ದುಲ್ ಸಮದ್ ಮೂರು ಸಿಕ್ಸರ್ ಗಳಿಸಿದರು.
(PTI)(5 / 6)
2016ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಆರ್‌ಸಿಬಿ 20 ಸಿಕ್ಸರ್ ಸಿಡಿಸಿತ್ತು. 2017ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಲಯನ್ಸ್ ವಿರುದ್ಧ 20 ಸಿಕ್ಸ್ ಗಳಿಸಿತ್ತು. ಇದು ಜಂಟಿಯಾಗಿ ಮೂರನೇ ಸ್ಥಾನದಲ್ಲಿದೆ.
(PTI)ಇತರ ಗ್ಯಾಲರಿಗಳು