ಒಂದೇ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲು ತಲುಪಿದ ನಾಲ್ವರು ಕೆಕೆಆರ್ ಆಟಗಾರರು; ದಾಖಲೆಯೊಂದಿಗೆ ಗೆಲುವಿನ ಖುಷಿ
- RCB vs KKR: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಕೆಆರ್ ತಂಡದ ನಾಲ್ವರು ಆಟಗಾರರು ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ನಾಲ್ವರು ಆಟಗಾರು ನಾಲ್ಕು ವಿಭಿನ್ನ ದಾಖಲೆ ಮಾಡಿದ್ದು, ಪಂದ್ಯದಲ್ಲಿಯೂ ಕೋಲ್ಕತ್ತಾ ಗೆಲುವು ಸಾಧಿಸಿದೆ.
- RCB vs KKR: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಕೆಆರ್ ತಂಡದ ನಾಲ್ವರು ಆಟಗಾರರು ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ನಾಲ್ವರು ಆಟಗಾರು ನಾಲ್ಕು ವಿಭಿನ್ನ ದಾಖಲೆ ಮಾಡಿದ್ದು, ಪಂದ್ಯದಲ್ಲಿಯೂ ಕೋಲ್ಕತ್ತಾ ಗೆಲುವು ಸಾಧಿಸಿದೆ.
(1 / 6)
ಒಂದೇ ತಂಡದ ನಾಲ್ವರು ಆಟಗಾರರು ಒಂದೇ ಪಂದ್ಯದಲ್ಲಿ ವೈಯಕ್ತಿಕ ಮೈಲಿಗಲ್ಲು ತಲುಪುವುದು ಎಂದರೆ ಸಾಮಾನ್ಯವೇನಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಐಪಿಎಲ್ 2024ರ ಪಂದ್ಯದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಲ್ವರು ಆಟಗಾರರು ವೈಯಕ್ತಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ.
(AFP)(2 / 6)
ಒಬ್ಬ ಆಟಗಾರ ಐಪಿಎಲ್‌ನಲ್ಲಿ 100 ಸಿಕ್ಸರ್ ಬಾರಿಸಿದರೆ, ಇನ್ನೋರ್ವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 100 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು. ಮೂರನೇ ಆಟಗಾರ 500 ಟಿ20 ಪಂದ್ಯಗಳನ್ನು ಆಡಿದ ಅಪರೂಪದ ದಾಖಲೆ ನಿರ್ಮಿಸಿದರೆ. ನಾಲ್ಕನೇ ಆಟಗಾರ ಐಪಿಎಲ್‌ನಲ್ಲಿ 1000 ರನ್ ಗಡಿ ದಾಟಿದರು.
(AFP)(3 / 6)
ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್, ಆರ್‌ಸಿಬಿ ವಿರುದ್ಧ 24 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಅಜೇಯ 39 ರನ್ ಗಳಿಸಿದರು. ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 100 ಸಿಕ್ಸರ್‌ಗಳ ಮೈಲಿಗಲ್ಲು ತಲುಪಿದರು. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 100 ಸಿಕ್ಸರ್ ಬಾರಿಸಿದ 34ನೇ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೇಯಸ್ ಪಾತ್ರರಾದರು. ಶ್ರೇಯಸ್ ಅಯ್ಯರ್ 103 ಐಪಿಎಲ್ ಪಂದ್ಯಗಳಲ್ಲಿ 101 ಸಿಕ್ಸರ್ ಸಿಡಿಸಿದ್ದಾರೆ.
(PTI)(4 / 6)
ಪಂದ್ಯದಲ್ಲಿ ಆಂಡ್ರೆ ರಸೆಲ್ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರು. ಕೆರಿಬಿಯನ್ ಸ್ಟಾರ್ ವಿಶ್ವದ 23ನೇ ಬೌಲರ್ ಆಗಿ ಐಪಿಎಲ್‌ನಲ್ಲಿ 100 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿಕೆಟ್‌ಗಳ ಶತಕ ಬಾರಿಸಿದ ಏಳನೇ ವಿದೇಶಿ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ರಸೆಲ್ ಪಾತ್ರರಾದರು. ಇದಲ್ಲದೆ, ಐಪಿಎಲ್‌ನಲ್ಲಿ ಆಡಿದ 114 ಪಂದ್ಯಗಳಲ್ಲಿ 100 ಇನ್ನಿಂಗ್ಸ್‌ಗಳಲ್ಲಿ ಅವರು 100 ವಿಕೆಟ್ ಪಡೆದಿದ್ದಾರೆ.
(PTI)(5 / 6)
ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ವಿರುದ್ಧ ಮೈದಾನಕ್ಕಿಳಿಯುವ ಮೂಲಕ ಸುನಿಲ್ ನರೈನ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ 500 ಟಿ20 ಪಂದ್ಯಗಳನ್ನು ಆಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ಕೀರನ್ ಪೊಲಾರ್ಡ್ (660), ಡ್ವೇನ್ ಬ್ರಾವೋ (573) ಹಾಗೂ ಪಾಕಿಸ್ತಾನದ ಶೋಯೆಬ್ ಮಲಿಕ್ (542) ಈ ಸಾಧನೆ ಮಾಡಿದ್ದಾರೆ. ನರೈನ್ ತಮ್ಮ ವಿಶೇಷ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
(PTI)(6 / 6)
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಕೇವಲ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 1000 ರನ್ ಗಡಿ ದಾಟಿದ 90ನೇ ಆಟಗಾರ ಎಂಬ ಹೆಗ್ಗಳಿಕೆಗೆ ವೆಂಕಟೇಶ್ ಪಾತ್ರರಾದರು. ಈ ಪಂದ್ಯದ ನಂತರ, ಐಪಿಎಲ್‌ನಲ್ಲಿ ವೆಂಕಟೇಶ್ ಅವರ ಒಟ್ಟಾರೆ ರನ್ ಗಳಿಕೆಯು 1013 ರನ್ ಆಗಿದೆ.
(AP)ಇತರ ಗ್ಯಾಲರಿಗಳು