ಸಂಪೂರ್ಣ ಐಪಿಎಲ್ ಯಾವ ಚಾನೆಲ್‌ನಲ್ಲಿ ನೇರಪ್ರಸಾರ; ಉಚಿತವಾಗಿ ವೀಕ್ಷಿಸಲು ಏನು ಮಾಡಬೇಕು? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಂಪೂರ್ಣ ಐಪಿಎಲ್ ಯಾವ ಚಾನೆಲ್‌ನಲ್ಲಿ ನೇರಪ್ರಸಾರ; ಉಚಿತವಾಗಿ ವೀಕ್ಷಿಸಲು ಏನು ಮಾಡಬೇಕು? ಇಲ್ಲಿದೆ ವಿವರ

ಸಂಪೂರ್ಣ ಐಪಿಎಲ್ ಯಾವ ಚಾನೆಲ್‌ನಲ್ಲಿ ನೇರಪ್ರಸಾರ; ಉಚಿತವಾಗಿ ವೀಕ್ಷಿಸಲು ಏನು ಮಾಡಬೇಕು? ಇಲ್ಲಿದೆ ವಿವರ

  • IPL 2024 Live Streaming: ಐಪಿಎಲ್​ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 22ರಿಂದ ಟೂರ್ನಿ ಪ್ರಾರಂಭವಾಗಲಿದ್ದು, ಪಂದ್ಯಗಳ ಸಮಯ ಮತ್ತು ಎಲ್ಲಿ ಲೈವ್ ವೀಕ್ಷಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಈ ವರ್ಷ ಲೋಕಸಭೆ ಚುನಾವಣೆಯ ಕಾರಣ, ಐಪಿಎಲ್ 2024ರ ಋತುವನ್ನು ಎರಡು ಹಂತಗಳಲ್ಲಿ ನಿಗದಿಪಡಿಸಲಾಗಿದೆ. ಮೊದಲ ಹಂತವಾಗಿ ಬಿಸಿಸಿಐ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವರ್ಷದ ಐಪಿಎಲ್ 17ನೇ ಸೀಸನ್ ಮಾರ್ಚ್ 22ರಂದು ಆರಂಭವಾಗಲಿದೆ.
icon

(1 / 6)

ಈ ವರ್ಷ ಲೋಕಸಭೆ ಚುನಾವಣೆಯ ಕಾರಣ, ಐಪಿಎಲ್ 2024ರ ಋತುವನ್ನು ಎರಡು ಹಂತಗಳಲ್ಲಿ ನಿಗದಿಪಡಿಸಲಾಗಿದೆ. ಮೊದಲ ಹಂತವಾಗಿ ಬಿಸಿಸಿಐ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವರ್ಷದ ಐಪಿಎಲ್ 17ನೇ ಸೀಸನ್ ಮಾರ್ಚ್ 22ರಂದು ಆರಂಭವಾಗಲಿದೆ.

ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಈ ಪಂದ್ಯ ಪ್ರಾರಂಭವಾಗಲಿದೆ. ಸದ್ಯ ಬಿಸಿಸಿಐ 15 ದಿನಗಳ ಕಾಲ 21 ಪಂದ್ಯಗಳ ದಿನಾಂಕವನ್ನು ಮಾತ್ರ ಅಂತಿಮಗೊಳಿಸಿದೆ.
icon

(2 / 6)

ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಈ ಪಂದ್ಯ ಪ್ರಾರಂಭವಾಗಲಿದೆ. ಸದ್ಯ ಬಿಸಿಸಿಐ 15 ದಿನಗಳ ಕಾಲ 21 ಪಂದ್ಯಗಳ ದಿನಾಂಕವನ್ನು ಮಾತ್ರ ಅಂತಿಮಗೊಳಿಸಿದೆ.(PTI)

ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗೆ ನಡೆಯಲಿರುವ ಪಂದ್ಯಗಳನ್ನು ಬಿಸಿಸಿಐ ಪ್ರಕಟಿಸಿದೆ. ಈ 15 ದಿನಗಳಲ್ಲಿ ನಾಲ್ಕು ಡಬಲ್ ಹೆಡರ್‌ಗಳು ಬರಲಿವೆ.
icon

(3 / 6)

ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗೆ ನಡೆಯಲಿರುವ ಪಂದ್ಯಗಳನ್ನು ಬಿಸಿಸಿಐ ಪ್ರಕಟಿಸಿದೆ. ಈ 15 ದಿನಗಳಲ್ಲಿ ನಾಲ್ಕು ಡಬಲ್ ಹೆಡರ್‌ಗಳು ಬರಲಿವೆ.(Photo: X/Sunrisers Hyderabad)

ಐಪಿಎಲ್ ಪಂದ್ಯ ಪ್ರತಿದಿನ ಸಂಜೆ 7:30ಕ್ಕೆ ಆರಂಭವಾಗುತ್ತದೆ. ಆರಂಭಿಕ ಪಂದ್ಯ ಮಾತ್ರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ನಾಲ್ಕು ದಿನಗಳ ಡಬಲ್ ಹೆಡರ್‌ಗಳಲ್ಲಿ ಮಧ್ಯಾಹ್ನದ ಪಂದ್ಯವು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುತ್ತದೆ.
icon

(4 / 6)

ಐಪಿಎಲ್ ಪಂದ್ಯ ಪ್ರತಿದಿನ ಸಂಜೆ 7:30ಕ್ಕೆ ಆರಂಭವಾಗುತ್ತದೆ. ಆರಂಭಿಕ ಪಂದ್ಯ ಮಾತ್ರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ನಾಲ್ಕು ದಿನಗಳ ಡಬಲ್ ಹೆಡರ್‌ಗಳಲ್ಲಿ ಮಧ್ಯಾಹ್ನದ ಪಂದ್ಯವು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುತ್ತದೆ.

ಐಪಿಎಲ್ 2024 ಪಂದ್ಯಗಳನ್ನು 'ಸ್ಪೋರ್ಟ್ಸ್ 18 ನೆಟ್‌ವರ್ಕ್' ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಡಿಜಿಟಲ್ 'ಜಿಯೋ ಸಿನಿಮಾ' OTT ಪ್ಲಾಟ್‌ಫಾರ್ಮ್‌ನಲ್ಲಿ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
icon

(5 / 6)

ಐಪಿಎಲ್ 2024 ಪಂದ್ಯಗಳನ್ನು 'ಸ್ಪೋರ್ಟ್ಸ್ 18 ನೆಟ್‌ವರ್ಕ್' ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಡಿಜಿಟಲ್ 'ಜಿಯೋ ಸಿನಿಮಾ' OTT ಪ್ಲಾಟ್‌ಫಾರ್ಮ್‌ನಲ್ಲಿ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಐಪಿಎಲ್ ಪ್ರಶಸ್ತಿಗಾಗಿ 10 ತಂಡಗಳು ಹೋರಾಡುತ್ತಿವೆ. ಈ ಋತುವಿನ 21 ಪಂದ್ಯಗಳ ದಿನಾಂಕವನ್ನು ಪ್ರಕಟಿಸಿರುವ ಬಿಸಿಸಿಐ, ಉಳಿದ ವೇಳಾಪಟ್ಟಿಯನ್ನು ಲೋಕಸಭಾ ಚುನಾವಣಾ ದಿನಾಂಕ ನೋಡಿಕೊಂಡು ಮಾರ್ಚ್​​ನಲ್ಲಿ ಬಹಿರಂಗಪಡಿಸಲಿದೆ.
icon

(6 / 6)

ಐಪಿಎಲ್ ಪ್ರಶಸ್ತಿಗಾಗಿ 10 ತಂಡಗಳು ಹೋರಾಡುತ್ತಿವೆ. ಈ ಋತುವಿನ 21 ಪಂದ್ಯಗಳ ದಿನಾಂಕವನ್ನು ಪ್ರಕಟಿಸಿರುವ ಬಿಸಿಸಿಐ, ಉಳಿದ ವೇಳಾಪಟ್ಟಿಯನ್ನು ಲೋಕಸಭಾ ಚುನಾವಣಾ ದಿನಾಂಕ ನೋಡಿಕೊಂಡು ಮಾರ್ಚ್​​ನಲ್ಲಿ ಬಹಿರಂಗಪಡಿಸಲಿದೆ.(Photo: X/Mumbai Indians)

ಇತರ ಗ್ಯಾಲರಿಗಳು