ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್ ಜೊತೆಗೆ ಯಾರಿಗೆ ಯಾವೆಲ್ಲಾ ಪ್ರಶಸ್ತಿ ಸಿಕ್ಕಿದೆ? ಇಲ್ಲಿದೆ ವಿವರ
ಐಪಿಎಲ್ 2025 ಮುಗಿದಿದೆ. ಇದೇ ಮೊದಲ ಆರ್‌ಸಿಬಿ ಐಪಿಎಲ್ ಪ್ರಶಸ್ತಿ ಗೆದ್ದು 18 ವರ್ಷಗಳ ಕಾಯುವಿಕೆ ಕೊನೆಗೊಳಿಸಿದೆ. ಹಾಗಾದರೆ ಈ ಋತುವಿನಲ್ಲಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಜೊತೆಗೆ ವಿವಿಧ ಪ್ರಶಸ್ತಿ ಪಡೆದವರ ಯಾರು? ಇಲ್ಲಿದೆ ವಿವರ
(1 / 7)
ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ಪಡೆದರು. 15 ಪಂದ್ಯಗಳಲ್ಲಿ 1 ಶತಕ, 6 ಅರ್ಧಶತಕ ಸಹಿತ 759 ರನ್ ಗಳಿಸಿದರು. ಇದರ ಜೊತೆಗೆ ಸುದರ್ಶನ್ ಅವರು ಉದಯೋನ್ಮುಖ ಆಟಗಾರ, ಫ್ಯಾಂಟಸಿ ಕಿಂಗ್ ಮತ್ತು ಮೋಸ್ಟ್ ಫೋರ್ಸ್ (88) ಪ್ರಶಸ್ತಿಗಳನ್ನೂ ಪಡೆಯುವ ಮೂಲಕ ಗಮನ ಸೆಳೆದರು.
(2 / 7)
ಗುಜರಾತ್ ಟೈಟಾನ್ಸ್ ವೇಗಿ ಪ್ರಸಿದ್ಧ್ ಕೃಷ್ಣ 15 ಪಂದ್ಯಗಳಲ್ಲಿ 25 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ.
(Surjeet Yadav)(3 / 7)
ಲಕ್ನೋ ಸೂಪರ್ ಜೈಂಟ್ಸ್ ಪರ 40 ಸಿಕ್ಸರ್ ಬಾರಿಸಿದ ನಿಕೋಲಸ್ ಪೂರನ್ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
(REUTERS)(4 / 7)
14 ವರ್ಷದ ವೈಭವ್ ಸೂರ್ಯವಂಶಿ ಕೂಡ ಪ್ರಶಸ್ತಿ ಗೆದ್ದಿದ್ದಾನೆ. ಅವರು ಋತುವಿನ ಸೂಪರ್ ಸ್ಟ್ರೈಕರ್ ಎಂದು ಹೆಸರಿಸಲ್ಪಟ್ಟರು. ಈ ಋತುವಿನಲ್ಲಿ ಅವರು 206.6 ಸ್ಟ್ರೈಕ್ ರೇಟ್ ದಾಖಲಿಸಿದ್ದಾರೆ.
(AFP)(5 / 7)
ಪ್ರಸಕ್ತ ಟೂರ್ನಿಯಲ್ಲಿ 717 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ಅತ್ಯಂತ ಮೌಲ್ಯಯುತ ಆಟಗಾರ (ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್) ಪ್ರಶಸ್ತಿ ಪಡೆದಿದ್ದಾರೆ. ಅವರು 320.5 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
(Surjeet )(6 / 7)
ಈ ಆವೃತ್ತಿಯ ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಸನ್ ರೈಸರ್ಸ್ ಹೈದರಾಬಾದ್ನ ಕಮಿಂಡು ಮೆಂಡಿಸ್ಗೆ ನೀಡಲಾಯಿತು. ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಮೆಂಡಿಸ್ ಬ್ರೆವಿಸ್ ಅವರ ಅದ್ಭುತ ಕ್ಯಾಚ್ ಪಡೆದಿದ್ದರು.
(AFP)ಇತರ ಗ್ಯಾಲರಿಗಳು