ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2025: ಮೆಗಾ ಹರಾಜಿನಲ್ಲಿ ಒಬ್ಬರ ರಿಟೆನ್ಶನ್‌ಗೆ ಮಾತ್ರ ಅವಕಾಶ, ಆರ್‌ಟಿಎಂ ಕಾರ್ಡ್ ಬಳಕೆ; ಬಿಸಿಸಿಐ ಮಹತ್ವದ ಟ್ವಿಸ್ಟ್

IPL 2025: ಮೆಗಾ ಹರಾಜಿನಲ್ಲಿ ಒಬ್ಬರ ರಿಟೆನ್ಶನ್‌ಗೆ ಮಾತ್ರ ಅವಕಾಶ, ಆರ್‌ಟಿಎಂ ಕಾರ್ಡ್ ಬಳಕೆ; ಬಿಸಿಸಿಐ ಮಹತ್ವದ ಟ್ವಿಸ್ಟ್

  • ಐಪಿಎಲ್ 2024ರ ಆವೃತ್ತಿಯು ಅದ್ಧೂರಿಯಾಗಿ ನಡೆಯುತ್ತಿರುವಾಗ 2025ರ ಆವೃತ್ತಿಗೆ ನಡೆಯಲಿರುವ ಮೆಗಾ ಹರಾಜಿನ ಕುರಿತು ಭಾರಿ ಚರ್ಚೆ ನಡೆಯುತ್ತದೆ. ಎಲ್ಲಾ 10 ಫ್ರಾಂಚೈಸಿಗಳು ಹಾಗೂ ಬಿಸಿಸಿಐ, ಮೆಗಾ ಹರಾಜಿಗೆ ಸಿದ್ಧತೆ ನಡೆಸುತ್ತಿವೆ. ಈ ನಡುವೆ ಆಟಗಾರರನ್ನು ರಿಟೈನ್‌ ಮಾಡುವ ಕುರಿತ ಹೊಸ ಮಾಹಿತಿ ಬಹಿರಂಗವಾಗಿದೆ.

ಈ ಹಿಂದೆ 2011, 2014, 2018, ಮತ್ತು 2022ರಲ್ಲಿ ಮೆಗಾ ಹರಾಜು ನಡೆದಿತ್ತು. ಇದೀಗ 2025ರಲ್ಲಿ ಮತ್ತೆ ನಡೆಯಲಿದೆ. ಈಗಾಗಲೇ ಎಲ್ಲಾ 10 ತಂಡಗಳು ಸಿದ್ಧತೆ ಆರಂಭಿಸಿವೆ. ಮೆಗಾ ಹರಾಜಿನಲ್ಲಿ ಫ್ರಾಂಚೈಸ್‌ಗಳು ಬಹುತೇಕ ತಮ್ಮ ತಂಡಗಳನ್ನು ಪುನರ್ನಿಮಿಸುತ್ತವೆ. ಈ ಹಿಂದೆ ಮೂರರಿಂದ ಐದಕ್ಕಿಂತ ಹೆಚ್ಚು ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶವಿರಲಿಲ್ಲ. ಇದೀಗ 2025ರಲ್ಲಿ ಇದೇ ಪುನರಾವರ್ತನೆಯಾಗುವ ಸಾಧ್ಯತೆ ಇದೆ.
icon

(1 / 7)

ಈ ಹಿಂದೆ 2011, 2014, 2018, ಮತ್ತು 2022ರಲ್ಲಿ ಮೆಗಾ ಹರಾಜು ನಡೆದಿತ್ತು. ಇದೀಗ 2025ರಲ್ಲಿ ಮತ್ತೆ ನಡೆಯಲಿದೆ. ಈಗಾಗಲೇ ಎಲ್ಲಾ 10 ತಂಡಗಳು ಸಿದ್ಧತೆ ಆರಂಭಿಸಿವೆ. ಮೆಗಾ ಹರಾಜಿನಲ್ಲಿ ಫ್ರಾಂಚೈಸ್‌ಗಳು ಬಹುತೇಕ ತಮ್ಮ ತಂಡಗಳನ್ನು ಪುನರ್ನಿಮಿಸುತ್ತವೆ. ಈ ಹಿಂದೆ ಮೂರರಿಂದ ಐದಕ್ಕಿಂತ ಹೆಚ್ಚು ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶವಿರಲಿಲ್ಲ. ಇದೀಗ 2025ರಲ್ಲಿ ಇದೇ ಪುನರಾವರ್ತನೆಯಾಗುವ ಸಾಧ್ಯತೆ ಇದೆ.

ಫ್ರಾಂಚೈಸ್‌ಗಳು ಬಿಸಿಸಿಐ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದು, ಎಂಟು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಕೆಲವು ತಂಡಗಳು ಮನವಿ ಮಾಡಿಕೊಂಡಿವೆ. ಆ ಮೂಲಕ ರಿಟೆನ್ಶನ್‌ ಸಂಖ್ಯೆಯನ್ನು ಹೆಚ್ಚಿಸಲು ಕೇಳಿಕೊಂಡಿವೆ.
icon

(2 / 7)

ಫ್ರಾಂಚೈಸ್‌ಗಳು ಬಿಸಿಸಿಐ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದು, ಎಂಟು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಕೆಲವು ತಂಡಗಳು ಮನವಿ ಮಾಡಿಕೊಂಡಿವೆ. ಆ ಮೂಲಕ ರಿಟೆನ್ಶನ್‌ ಸಂಖ್ಯೆಯನ್ನು ಹೆಚ್ಚಿಸಲು ಕೇಳಿಕೊಂಡಿವೆ.(PTI)

ಕ್ರಿಕ್‌ಬಜ್‌ ವರದಿಯ ಪ್ರಕಾರ, ಕೇವಲ ಒಬ್ಬ ಆಟಗಾರನನ್ನು ಮಾತ್ರ ರಿಟೈನ್‌ ಮಾಡಲು ಅವಕಾಶ ನೀಡಲಾಗುತ್ತಿದೆ. ಇದೇ ವೇಳೆ ಏಳು ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್‌ಗಳನ್ನು ಬಳಸಲು ಅನುಮತಿಸಬೇಕು ಎಂಬ ಕುರಿತು ಫ್ರಾಂಚೈಸ್‌ಗಳು ಹಾಗೂ ಬಿಸಿಸಿಐ ನಡುವೆ ಚರ್ಚೆ ನಡೆದಿದೆ.
icon

(3 / 7)

ಕ್ರಿಕ್‌ಬಜ್‌ ವರದಿಯ ಪ್ರಕಾರ, ಕೇವಲ ಒಬ್ಬ ಆಟಗಾರನನ್ನು ಮಾತ್ರ ರಿಟೈನ್‌ ಮಾಡಲು ಅವಕಾಶ ನೀಡಲಾಗುತ್ತಿದೆ. ಇದೇ ವೇಳೆ ಏಳು ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್‌ಗಳನ್ನು ಬಳಸಲು ಅನುಮತಿಸಬೇಕು ಎಂಬ ಕುರಿತು ಫ್ರಾಂಚೈಸ್‌ಗಳು ಹಾಗೂ ಬಿಸಿಸಿಐ ನಡುವೆ ಚರ್ಚೆ ನಡೆದಿದೆ.(PTI)

ಆರ್‌ಟಿಎಂ ಕಾರ್ಡ್‌ ಎಂದರೆ, ತಂಡವು ತಮ್ಮ ತಂಡದ ಮಾಜಿ ಆಟಗಾರನನ್ನು ಹರಾಜಿನಲ್ಲಿ ಕಳೆದ ಆವೃತ್ತಿಯಲ್ಲಿ ಖರೀದಿಸಿದ ದರಕ್ಕೆ ಮತ್ತೆ ಖರೀದಿಸಬಹುದು. ಇದು ಆಟಗಾರನಿಗೆ ನ್ಯಾಯಯುತ ಬೆಲೆ ನಿರ್ಧರಿಸಲು ಅನುವು ಮಾಡಿಕೊಡುತ್ತದೆ.
icon

(4 / 7)

ಆರ್‌ಟಿಎಂ ಕಾರ್ಡ್‌ ಎಂದರೆ, ತಂಡವು ತಮ್ಮ ತಂಡದ ಮಾಜಿ ಆಟಗಾರನನ್ನು ಹರಾಜಿನಲ್ಲಿ ಕಳೆದ ಆವೃತ್ತಿಯಲ್ಲಿ ಖರೀದಿಸಿದ ದರಕ್ಕೆ ಮತ್ತೆ ಖರೀದಿಸಬಹುದು. ಇದು ಆಟಗಾರನಿಗೆ ನ್ಯಾಯಯುತ ಬೆಲೆ ನಿರ್ಧರಿಸಲು ಅನುವು ಮಾಡಿಕೊಡುತ್ತದೆ.(PTI)

ಈ ಹಿಂದೆ 2014 ಮತ್ತು 2018ರ ಮೆಗಾ ಹರಾಜಿನಲ್ಲಿ RTM ಕಾರ್ಡ್ ಬಳಸಲಾಗಿತ್ತು. 2014ರಲ್ಲಿ, ತಂಡಗಳು ಉಳಿಸಿಕೊಂಡಿರುವ ಆಟಗಾರರ ಸಂಖ್ಯೆಗೆ ಅನುಗುಣವಾಗಿ ಒಂದು ಅಥವಾ ಎರಡು ಆರ್‌ಟಿಎಂ ಕಾರ್ಡ್ ಬಳಸಲು ಅನುಮತಿಸಲಾಗಿತ್ತು. 2018ರಲ್ಲಿ, ತಂಡಗಳು ಕನಿಷ್ಠ ಎರಡು ಮತ್ತು ಗರಿಷ್ಠ ಮೂರು ಕಾರ್ಡ್ ಬಳಸಬಹುದಿತ್ತು. ಆದರೆ, 2022ರಲ್ಲಿ ಆರ್‌ಟಿಎಂ ಆಯ್ಕೆ ಲಭ್ಯವಿರಲಿಲ್ಲ.
icon

(5 / 7)

ಈ ಹಿಂದೆ 2014 ಮತ್ತು 2018ರ ಮೆಗಾ ಹರಾಜಿನಲ್ಲಿ RTM ಕಾರ್ಡ್ ಬಳಸಲಾಗಿತ್ತು. 2014ರಲ್ಲಿ, ತಂಡಗಳು ಉಳಿಸಿಕೊಂಡಿರುವ ಆಟಗಾರರ ಸಂಖ್ಯೆಗೆ ಅನುಗುಣವಾಗಿ ಒಂದು ಅಥವಾ ಎರಡು ಆರ್‌ಟಿಎಂ ಕಾರ್ಡ್ ಬಳಸಲು ಅನುಮತಿಸಲಾಗಿತ್ತು. 2018ರಲ್ಲಿ, ತಂಡಗಳು ಕನಿಷ್ಠ ಎರಡು ಮತ್ತು ಗರಿಷ್ಠ ಮೂರು ಕಾರ್ಡ್ ಬಳಸಬಹುದಿತ್ತು. ಆದರೆ, 2022ರಲ್ಲಿ ಆರ್‌ಟಿಎಂ ಆಯ್ಕೆ ಲಭ್ಯವಿರಲಿಲ್ಲ.(PTI)

ಅಹಮದಾಬಾದ್‌ನಲ್ಲಿ ಏಪ್ರಿಲ್ 16ರಂದು ಐಪಿಎಲ್ ಫ್ರಾಂಚೈಸ್‌ಗಳ ಸಭೆ ನಡೆಯಬೇಕಿತ್ತು. ಆದರೆ, ಈ ಸಭೆಯನ್ನು ಮುಂದೂಡಲಾಗಿದೆ ಎಂದು ವರದಿ ತಿಳಿಸಿದೆ.
icon

(6 / 7)

ಅಹಮದಾಬಾದ್‌ನಲ್ಲಿ ಏಪ್ರಿಲ್ 16ರಂದು ಐಪಿಎಲ್ ಫ್ರಾಂಚೈಸ್‌ಗಳ ಸಭೆ ನಡೆಯಬೇಕಿತ್ತು. ಆದರೆ, ಈ ಸಭೆಯನ್ನು ಮುಂದೂಡಲಾಗಿದೆ ಎಂದು ವರದಿ ತಿಳಿಸಿದೆ.(PTI)

ಮುಂದಿನ ಆವೃತ್ತಿಗೆ ಈ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಹರಾಜು ಪ್ರಕ್ರಿಯೆ ನಡೆಸುವ ನಿರೀಕ್ಷಿಸಿದೆ.
icon

(7 / 7)

ಮುಂದಿನ ಆವೃತ್ತಿಗೆ ಈ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಹರಾಜು ಪ್ರಕ್ರಿಯೆ ನಡೆಸುವ ನಿರೀಕ್ಷಿಸಿದೆ.(AFP)


IPL_Entry_Point

ಇತರ ಗ್ಯಾಲರಿಗಳು