ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl Motivation: 2024ರ ಐಪಿಎಲ್ ಕಲಿಸಿದ ಜೀವನದ ಅತ್ಯುತ್ತಮ ಪಾಠಗಳು; ಒಂದೊಂದು ಪಾಠವೂ ಭವಿಷ್ಯಕ್ಕೆ ಮುನ್ನುಡಿ!

IPL Motivation: 2024ರ ಐಪಿಎಲ್ ಕಲಿಸಿದ ಜೀವನದ ಅತ್ಯುತ್ತಮ ಪಾಠಗಳು; ಒಂದೊಂದು ಪಾಠವೂ ಭವಿಷ್ಯಕ್ಕೆ ಮುನ್ನುಡಿ!

  • IPL Motivation: ಎರಡು ತಿಂಗಳ ಕಾಲ ನಿರಂತರ ಮನರಂಜನೆಯ ರಸದೌತಣ ಉಣಬಡಿಸಿದ 17ನೇ ಆವೃತ್ತಿಯ ಐಪಿಎಲ್​, ಆನಂದದ ಜೊತೆಗೆ ಜೀವನದ ಅತ್ಯುತ್ತಮ ಪಾಠಗಳನ್ನೂ ಕಲಿಸಿಕೊಟ್ಟು ಹೋಗಿದೆ.

2024ರ ಐಪಿಎಲ್ ಮೇ 26ಕ್ಕೆ ಮುಕ್ತಾಯಗೊಂಡಿತು. ಫೈನಲ್​ನಲ್ಲಿ ಎಸ್​ಆರ್​ಹೆಚ್ ವಿರುದ್ಧ ಗೆದ್ದ ಕೆಕೆಆರ್​​ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಆದರೆ, 2 ತಿಂಗಳು ನಿರಂತರ ಮನರಂಜನೆಯ ರಸದೌತಣ ಒದಗಿಸಿದ ಶ್ರೀಮಂತ ಲೀಗ್​, ಹಲವು ಪಾಠಗಳನ್ನೂ ಕಲಿಸಿದೆ. 
icon

(1 / 7)

2024ರ ಐಪಿಎಲ್ ಮೇ 26ಕ್ಕೆ ಮುಕ್ತಾಯಗೊಂಡಿತು. ಫೈನಲ್​ನಲ್ಲಿ ಎಸ್​ಆರ್​ಹೆಚ್ ವಿರುದ್ಧ ಗೆದ್ದ ಕೆಕೆಆರ್​​ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಆದರೆ, 2 ತಿಂಗಳು ನಿರಂತರ ಮನರಂಜನೆಯ ರಸದೌತಣ ಒದಗಿಸಿದ ಶ್ರೀಮಂತ ಲೀಗ್​, ಹಲವು ಪಾಠಗಳನ್ನೂ ಕಲಿಸಿದೆ. (AFP)

ಹೌದು, ಕೇವಲ ಬೌಂಡರಿ-ಸಿಕ್ಸರ್​ ಹೊಡೆದಾಗ ಮತ್ತು ವಿಕೆಟ್​ ಬಿದ್ದಾಗ ತುಂಬಾ ಆನಂದಿಸಿದ್ದೇವೆ. ಆದರೆ, ಆನಂದದ ಜೊತೆಗೆ ನಮಗೆ ಜೀವನದ ಅನೇಕ ಅತ್ಯುತ್ತಮ ಪಾಠಗಳನ್ನೂ ಕಲಿಸಿಕೊಟ್ಟಿದೆ ಎಂಬುದನ್ನು ಮರೆಯುವಂತಿಲ್ಲ. ಒಂದೊಂದು ಪಾಠವೂ ಬೆಟ್ಟದಷ್ಟು ಅರ್ಥವನ್ನು ನೀಡುತ್ತದೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ.
icon

(2 / 7)

1. ನಿನ್ನ ಕೆಟ್ಟ ಸಮಯದಲ್ಲಿ ಎಲ್ಲರೂ ನಿನ್ನ ವಿರುದ್ಧ ತಿರುಗಿ ಬೀಳ್ತಾರೆ ಎಂಬುದಕ್ಕೆ ಹಾರ್ದಿಕ್ ಪಾಂಡ್ಯ ಉತ್ತಮ ಉದಾಹರಣೆ. ಗುಜರಾತ್ ಟೈಟಾನ್ಸ್​​ನಲ್ಲಿ ಯಶಸ್ಸು ಪಡೆದಿದ್ದ ಹಾರ್ದಿಕ್, ಮುಂಬೈ ಇಂಡಿಯನ್ಸ್​ ನಾಯಕನಾಗಿ ವಿಫಲರಾದರು. ಹೀಗಾಗಿ ಅವರು ಸಾಕಷ್ಟು ಟೀಕೆ ಎದುರಿಸಬೇಕಾಯಿತು. ಮುಂಬೈ 14 ಪಂದ್ಯಗಳಲ್ಲಿ 4 ಗೆಲುವು, 10 ಸೋಲಿನೊಂದಿಗೆ 10ನೇ ಸ್ಥಾನ ಪಡೆಯಿತು.
icon

(3 / 7)

2. ಒಬ್ಬ ವ್ಯಕ್ತಿ ಕೆಲವು ಪಂದ್ಯ ಗೆಲ್ಲಿಸಬಹುದು, ಕಪ್ ಅಲ್ಲ ಎಂಬುದಕ್ಕೆ ವಿರಾಟ್ ಕೊಹ್ಲಿ ಬೆಸ್ಟ್ ಎಕ್ಸಾಂಪಲ್​ ಆಗಿದ್ದಾರೆ. ಆರ್​ಸಿಬಿ ತಂಡದ ಪರ ಟೂರ್ನಿಯುದ್ದಕ್ಕೂ  ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ ಉಳಿದ ಆಟಗಾರರು ಅವರಂತೆ ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ ಒಬ್ಬರಿಂದ ಆರ್​ಸಿಬಿ ಟ್ರೋಫಿ ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ. ಅವರು 15 ಪಂದ್ಯಗಳಲ್ಲಿ 741 ರನ್ ಸಿಡಿಸಿದರು.
icon

(4 / 7)

3. ವಯಸ್ಸು ಎಂಬುದು ಕೇವಲ ಅಂಕಿ ಅಷ್ಟೆ ಎಂದು ಎಂಎಸ್ ಧೋನಿ ಅವರು ತೋರಿಸಿಕೊಟ್ಟಿದ್ದಾರೆ. ಅವರ ವಯಸ್ಸು 42ರ ಸಮೀಪದಲ್ಲಿ ಇದ್ದರೂ ಯುವ ಆಟಗಾರರನ್ನೇ ನಾಚಿಸುವಂತೆ ಬ್ಯಾಟಿಂಗ್ ಮಾಡಿದ್ದರು. ಕಾಲು ಗಾಯಗೊಂಡಿದ್ದರೂ ಸ್ಲಾಗ್​ ಓವರ್​​ಗಳಲ್ಲಿ ಬೌಲರ್​​ಗಳಿಗೆ ಬೆಂಡೆತ್ತುತ್ತಿದ್ದರು. ಅವರು 110 ಮೀಟರ್​​ನಲ್ಲಿ ಸಿಕ್ಸರ್ ಕೂಡ ಬಾರಿಸಿದ್ದಾರೆ. ಈ ವಯಸ್ಸಲ್ಲೂ ತನ್ನ ಫಿಟ್​ನೆಸ್ ಕಾಪಾಡಿಕೊಂಡು ಕ್ರಿಕೆಟ್​​ ಆಡಿದ ಮಾಹಿ ಎಲ್ಲರಿಗೂ ಸ್ಫೂರ್ತಿ.
icon

(5 / 7)

4. ಶೇ.1ರಷ್ಟು ಅವಕಾಶ ಸಿಕ್ಕರೆ ಸಾಕು, ಶೇ.100 ರಷ್ಟಾಗಿ ಪರಿವರ್ತನೆ ಮಾಡಬಹುದು ಎಂಬ ಅತ್ಯುತ್ತಮ ಪಾಠವನ್ನು ಆರ್​ಸಿಬಿ ಕಲಿಸಿಕೊಟ್ಟಿದೆ. ಹೌದು, ಸತತ ಸೋಲುಂಡು ಪ್ಲೇಆಫ್​ ಪ್ರವೇಶಿಸುವುದೇ ಅನುಮಾನ ಎನ್ನುತ್ತಿದ್ದ ತಂಡ, ಅಗ್ರ4ರಲ್ಲಿ ಸ್ಥಾನ ಪಡೆದಿತ್ತು. ಆರಂಭಿಕ 8 ಪಂದ್ಯಗಳಲ್ಲಿ 1 ಗೆದ್ದಿದ್ದ ಆರ್​​ಸಿಬಿ ಪ್ಲೇಆಫ್ ಪ್ರವೇಶಿಸಲು ಇದ್ದಿದ್ದೇ 1 ಪರ್ಸೆಂಟ್. ಆದರೆ, ಉಳಿದ 6 ಪಂದ್ಯಗಳಲ್ಲೂ ಜಯಿಸಿ ಅಸಾಧ್ಯವನ್ನೂ ಸಾಧಿಸಿ ಪ್ಲೇಆಫ್ ಪ್ರವೇಶಿಸಿ, ಜಗತ್ತನ್ನೇ ಅಚ್ಚರಿಗೊಳಿಸಿತ್ತು.
icon

(6 / 7)

5. ಇಡೀ ತಂಡ ಶ್ರಮಪಟ್ಟರೆ ಕನಸುಗಳು ನನಸಾಗುತ್ತವೆ ಎಂಬ ಜೀವನದ ಪಾಠವನ್ನು ಕೆಕೆಆರ್​ ಕಲಿಸಿದೆ. ತಂಡದಲ್ಲಿ ಬ್ಯಾಟಿಂಗ್​-ಬೌಲಿಂಗ್​ ಎಲ್ಲಾ ವಿಭಾಗಗಳಿಂದ ಅತ್ಯದ್ಬುತ ಪ್ರದರ್ಶನ ಹೊರಬಂದ ಹಿನ್ನೆಲೆ ಟ್ರೋಫಿ ಕನಸು ನನಸಾಯಿತು. ಫೈನಲ್​ನಲ್ಲಿ ಎಸ್​ಆರ್​​ಹೆಚ್ ತಂಡವನ್ನು ಮಣಿಸಿದ ಕೆಕೆಆರ್​ ಮೂರನೇ ಟ್ರೋಫಿ ಗೆದ್ದುಕೊಂಡಿತು. ತಂಡದ ಒಗ್ಗಟ್ಟಿನಲ್ಲಿ ಒಬ್ಬರು ಎಡವಟ್ಟು ಮಾಡಿದರೂ ಫಲಿತಾಂಶವೇ ಬೇರೆಡೆ ತಿರುಗಿಸುತ್ತದೆ. ಆದರೆ, ಇಡೀ ತಂಡ ಶ್ರಮ ಹಾಕಿದ್ದಕ್ಕೆ ಕೆಕೆಆರ್ ಚಾಂಪಿಯನ್ ಆಯಿತು.
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು