ಗರಿಷ್ಠ ರನ್, ಅಧಿಕ ವಿಕೆಟ್, ಹೆಚ್ಚು ಶತಕ, ಬೌಂಡರಿ-ಸಿಕ್ಸರ್​; ಐಪಿಎಲ್ ಸಾರ್ವಕಾಲಿಕ ದಾಖಲೆಗಳ ಪೂರ್ಣ ಪಟ್ಟಿ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗರಿಷ್ಠ ರನ್, ಅಧಿಕ ವಿಕೆಟ್, ಹೆಚ್ಚು ಶತಕ, ಬೌಂಡರಿ-ಸಿಕ್ಸರ್​; ಐಪಿಎಲ್ ಸಾರ್ವಕಾಲಿಕ ದಾಖಲೆಗಳ ಪೂರ್ಣ ಪಟ್ಟಿ ಹೀಗಿದೆ

ಗರಿಷ್ಠ ರನ್, ಅಧಿಕ ವಿಕೆಟ್, ಹೆಚ್ಚು ಶತಕ, ಬೌಂಡರಿ-ಸಿಕ್ಸರ್​; ಐಪಿಎಲ್ ಸಾರ್ವಕಾಲಿಕ ದಾಖಲೆಗಳ ಪೂರ್ಣ ಪಟ್ಟಿ ಹೀಗಿದೆ

  • IPL 2024: ಐಪಿಎಲ್​ 16 ಆವೃತ್ತಿಗಳನ್ನು ಮುಗಿಸಿದ್ದು, 17ನೇ ಸೀಸನ್​​ಗೆ ಸಜ್ಜಾಗುತ್ತಿದೆ. 2008ರಿಂದ 2023ರವರೆಗೂ ಶ್ರೀಮಂತ ಲೀಗ್​ನಲ್ಲಿ ಅತಿಹೆಚ್ಚು ರನ್, ವಿಕೆಟ್, ಅರ್ಧಶತಕ, ಬೌಂಡರಿ, ಸಿಕ್ಸರ್ ಬಾರಿಸಿದ ಸೇರಿದಂತೆ ಸಾರ್ವಕಾಲಿಕ ದಾಖಲೆ ಬರೆದ ಆಟಗಾರರು ಯಾರು ಎಂಬುದನ್ನು ಈ ಮುಂದೆ ತಿಳಿಸಿಯೋಣ.

2008ರಿಂದ 2023ರ ತನಕ ಪೂರ್ಣಗೊಂಡ 16 ಆವೃತ್ತಿಗಳ ಐಪಿಎಲ್​ನಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾಗಿದೆ. ಈವರೆಗೂ ದಾಖಲಾದ ಗರಿಷ್ಠ ರನ್, ಅತಿ ಹೆಚ್ಚು ವಿಕೆಟ್, ಅರ್ಧಶತಕ, ಶತಕಗಳು, ಅರ್ಧಶತಕಗಳು ಸೇರಿದಂತೆ ಸಾರ್ವಕಾಲಿಕ ದಾಖಲೆಗಳ ಪಟ್ಟಿಯನ್ನು ಈ ಮುಂದೆ ನೋಡೋಣ.
icon

(1 / 12)

ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ ಅವರು 2008 ರಿಂದ 2023 ರವರೆಗೆ ಅದೇ ತಂಡ RCB ಗಾಗಿ 7,263 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ್ದಾರೆ.
icon

(2 / 12)

ಹೆಚ್ಚು ವಿಕೆಟ್‌: 2013 ರಿಂದ 2023 ರವರೆಗೆ ಆಡಿರುವ ಸ್ಪಿನ್ನರ್ ಯುಜ್ವೇಂದ್ರ ಚಹಲ್,  ಐಪಿಎಲ್​ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಅವರು ಮುಂಬೈ ಇಂಡಿಯನ್ಸ್, ಆರ್‌ಸಿಬಿ, ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದು, 187 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
icon

(3 / 12)

ಅತಿ ಹೆಚ್ಚು ಶತಕ: ಶ್ರೀಮಂತ ಲೀಗ್​ನಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದ ಆಟಗಾರ ಎನಿಸಿದ್ದಾರೆ ಕೊಹ್ಲಿ. ರನ್ ಮೆಷಿನ್ ವಿರಾಟ್ ಕೊಹ್ಲಿ 7 ಶತಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ
icon

(4 / 12)

ಹೆಚ್ಚಿನ ಅರ್ಧ ಶತಕಗಳು: ಡೇವಿಡ್ ವಾರ್ನರ್ ಅತ್ಯಧಿಕ ಐಪಿಎಲ್ ಅರ್ಧಶತಕಗಳನ್ನು ಬಾರಿಸಿದ್ದಾರೆ. 2009 ಮತ್ತು 2024ರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್​​ ಪರ ವಾರ್ನರ್ 65 ಅರ್ಧಶತಕ ಗಳಿಸಿದ್ದಾರೆ.
icon

(5 / 12)

ಹೆಚ್ಚು ಸಿಕ್ಸರ್‌: ಸಿಕ್ಸರ್ ಕಿಂಗ್​ ಕ್ರಿಸ್ ಗೇಲ್​ ಅವರು ಐಪಿಎಲ್​ನಲ್ಲಿ ಗರಿಷ್ಠ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿದ್ದಾರೆ. 2008 ಮತ್ತು 2021ರವರೆಗೂ ಐಪಿಎಲ್ ಆಡಿರುವ ಗೇಲ್, ಕೋಲ್ಕತ್ತಾ ನೈಟ್ ರೈಡರ್ಸ್, ಆರ್​ಸಿಬಿ ಮತ್ತು ಕಿಂಗ್ಸ್ XI ಪಂಜಾಬ್ ಪರ 357 ಸಿಕ್ಸರ್‌ ಹೊಡೆದಿದ್ದಾರೆ.
icon

(6 / 12)

ಹೆಚ್ಚು ಬೌಂಡರಿ: ಅತಿ ಹೆಚ್ಚು ಬೌಂಡರಿ ಸಿಡಿಸಿದ ಆಟಗಾರ ಎನಿಸಿದ್ದಾರೆ ಶಿಖರ್ ಧವನ್. ಇಲ್ಲಿಯವರೆಗೆ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಪರ ಆಡಿದ್ದು 750 ಬೌಂಡರಿ ಬಾರಿಸಿದ್ದಾರೆ.
icon

(7 / 12)

ಹೆಚ್ಚು ಮೇಡನ್: ಐಪಿಎಲ್​ನಲ್ಲಿ ಅತ್ಯಧಿಕ ಮೇಡನ್ ಓವರ್​ ಹಾಕಿದ ಹೆಗ್ಗಳಿಕೆಗೆ ಪ್ರವೀಣ್ ಕುಮಾರ್ ಪಾತ್ರರಾಗಿದ್ದಾರೆ. 2008ರಿಂದ 2017 ರವರೆಗೆ ಆರ್​​ಸಿಬಿ, ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್, ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ ಪ್ರವೀಣ್, 14 ಮೇಡನ್ ಓವರ್​ ಬೌಲಿಂಗ್ ಮಾಡಿದ್ದಾರೆ.
icon

(8 / 12)

ಹೆಚ್ಚು ಡಾಟ್ ಬಾಲ್: ಐಪಿಎಲ್​​ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಖ್ಯಾತಿಗೆ ಭುವನೇಶ್ವರ್ ಕುಮಾರ್ ಪಾತ್ರರಾಗಿದ್ದಾರೆ. ಸನ್​ರೈಸರ್ಸ್, ಪುಣೆ ವಾರಿಯರ್ಸ್, ಆರ್‌ಸಿಬಿ ಪರ 1534 ಡಾಟ್ ಬಾಲ್ ಎಸೆದಿದ್ದಾರೆ.
icon

(9 / 12)

ಅತಿ ಹೆಚ್ಚು ಟ್ರೋಫಿ ಗೆಲುವು: ಅಂಬಟಿ ರಾಯುಡು ಮತ್ತು ರೋಹಿತ್​ ಶರ್ಮಾ ಅವರು ಐಪಿಎಲ್​ನಲ್ಲಿ ಅತ್ಯಧಿಕ ಐಪಿಎಲ್ ಟ್ರೋಫಿಗಳನ್ನು ಗೆದ್ದಿರುವ ದಾಖಲೆಯನ್ನು ಬರೆದಿದ್ದಾರೆ. ಇಬ್ಬರು 6 ಟ್ರೋಫಿಗೆ ಮುತ್ತಿಕ್ಕಿದ್ದಾರೆ.
icon

(10 / 12)

ಹೆಚ್ಚು ಫೈನಲ್‌: ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬಾರಿ ಫೈನಲ್​​ಗಳನ್ನು ಆಡಿದ ದಾಖಲೆಗೆ ಧೋನಿ ಪಾತ್ರರಾಗಿದ್ದಾರೆ. ಎಂಎಸ್ ಧೋನಿ ಅವರು 11 ಐಪಿಎಲ್ ಫೈನಲ್‌ಗಳಲ್ಲಿ ಸಿಎಸ್‌ಕೆ, ಪುಣೆ ಸೂಪರ್‌ಜೈಂಟ್ಸ್‌ ಪರ ಆಡಿದ್ದಾರೆ
icon

(11 / 12)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(12 / 12)

ಇತರ ಗ್ಯಾಲರಿಗಳು