ಹೊಸ ಚರಿತ್ರೆ ಸೃಷ್ಟಿಸಿದ ಸನ್​ರೈಸರ್ಸ್ ಹೈದರಾಬಾದ್; ಗರಿಷ್ಠ ಸ್ಕೋರ್ ಮಾಡಿದ ಟಾಪ್-5 ತಂಡಗಳು ಇವೇ-ipl top 5 highest totals sunrisers hyderabad creates history with 277 runs srh vs mi ipl records rcb csk lsg prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೊಸ ಚರಿತ್ರೆ ಸೃಷ್ಟಿಸಿದ ಸನ್​ರೈಸರ್ಸ್ ಹೈದರಾಬಾದ್; ಗರಿಷ್ಠ ಸ್ಕೋರ್ ಮಾಡಿದ ಟಾಪ್-5 ತಂಡಗಳು ಇವೇ

ಹೊಸ ಚರಿತ್ರೆ ಸೃಷ್ಟಿಸಿದ ಸನ್​ರೈಸರ್ಸ್ ಹೈದರಾಬಾದ್; ಗರಿಷ್ಠ ಸ್ಕೋರ್ ಮಾಡಿದ ಟಾಪ್-5 ತಂಡಗಳು ಇವೇ

  • ಐಪಿಎಲ್​ನಲ್ಲಿ ಸನ್​​ರೈಸರ್ಸ್ ಹೈದರಾಬಾದ್ ಹೊಸ ಇತಿಹಾಸ ಸೃಷ್ಟಿಸಿದೆ. ಶ್ರೀಮಂತ ಲೀಗ್​ ಇತಿಹಾಸದಲ್ಲಿ ಅತಿ ಹೆಚ್ಚು 277 ರನ್ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಎಲ್​​ನ ಗರಿಷ್ಠ ಸ್ಕೋರ್ ಮಾಡಿದ ಟಾಪ್-5 ತಂಡಗಳು ಯಾವುವು?

ಮುಂಬೈ ಇಂಡಿಯನ್ಸ್ ವಿರುದ್ಧ ಸನ್​​ರೈಸರ್ಸ್ ಹೈದರಾಬಾದ್ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಇದು 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್ ಒಂದರಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. ಈ ಬೃಹತ್ ಸ್ಕೋರ್​ನೊಂದಿಗೆ ಆರ್​ಸಿಬಿ ನಿರ್ಮಿಸಿದ್ದ ಐಪಿಎಲ್​ನ ಸಾರ್ವಕಾಲಿಕ ದಾಖಲೆ ಮುರಿದಿದೆ. ಎಸ್​ಆರ್​ಹೆಚ್ ಇನ್ನಿಂಗ್ಸ್​​​ನಲ್ಲಿ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಮತ್ತು ಹೆನ್ರಿಕ್ ಕ್ಲಾಸೆನ್ ಸ್ಫೋಟಕ ಅರ್ಧಶತಕ ಸಿಡಿಸಿದರು.
icon

(1 / 6)

ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಸನ್​ರೈಸರ್ಸ್ ಹೈದಾರಾಬಾದ್ ಪುಡಿಗಟ್ಟಿದೆ. ಇದರೊಂದಿಗೆ ಇನ್ನಿಂಗ್ಸ್​ವೊಂದರಲ್ಲಿ ಗರಿಷ್ಠ ಸ್ಕೋರ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಎಸ್​ಆರ್​ಹೆಚ್​ ಪಾತ್ರವಾಗಿದೆ.
icon

(2 / 6)

ಎಸ್​ಆರ್​​ಹೆಚ್​ಗಿಂತ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 263 ರನ್ ಗಳಿಸಿತ್ತು. ಇದು ಇದುವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಆ ಪಂದ್ಯದಲ್ಲಿ ಕ್ರಿಸ್ ಗೇಲ್ 175 ರನ್ ಗಳಿಸಿದ್ದರು.
icon

(3 / 6)

ಐಪಿಎಲ್ 2023ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​ ತಂಡವು 5 ವಿಕೆಟ್​ಗೆ 257 ರನ್ ಗಳಿಸಿದೆ. ಇದು ಗರಿಷ್ಠ ಸ್ಕೋರ್ ಮಾಡಿದ ತಂಡಗಳ ಪೈಕಿ 3ನೇ ಸ್ಥಾನದಲ್ಲಿದೆ.
icon

(4 / 6)

2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತ್ತು. ಆ ಇನ್ನಿಂಗ್ಸ್ ನಲ್ಲಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು.
icon

(5 / 6)

2010ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 246 ರನ್ ಗಳಿಸಿತ್ತು. ಆ ಪಂದ್ಯದಲ್ಲಿ ಮುರಳಿ ವಿಜಯ್ ಶತಕ ಬಾರಿಸಿದ್ದರು. ಟಾಪ್​-ಸ್ಕೋರ್ ಮಾಡಿದ ತಂಡಗಳ ಪೈಕಿ ಇಷ್ಟೇ ಸ್ಕೋರ್ ಮಾಡಿರುವ ಮುಂಬೈ ಇಂಡಿಯನ್ಸ್​, ಸಿಎಸ್​ಕೆ ಜೊತೆ ಜಂಟಿ ದಾಖಲೆ ಹೊಂದಿದೆ.
icon

(6 / 6)

ಇತರ ಗ್ಯಾಲರಿಗಳು