ಹೆಲಿಕಾಪ್ಟರ್ ಪತನ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಅನ್ನು ರಕ್ಷಣಾ ಸಿಬ್ಬಂದಿ ಪತ್ತೆ ಹಚ್ಚಿದ್ದು ಹೀಗೆ - ಚಿತ್ರನೋಟ
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಮತ್ತು ಇತರರನ್ನು ಹೊತ್ತ ಹೆಲಿಕಾಪ್ಟರ್ ವಾಯವ್ಯ ಇರಾನ್ ಭಾಗದಲ್ಲಿ ಭಾನುವಾರ ಪತನವಾಗಿತ್ತು. ಇಂದು ಅವಶೇಷಗಳು ಪತ್ತೆಯಾಗಿದ್ದು, ಅದರಲ್ಲಿದ್ದವರು ಎಲ್ಲರೂ ಮೃತಪಟ್ಟಿದ್ಧಾರೆ ಎಂಬುದು ದೃಢವಾಗಿದೆ. ಪತನವಾದ ಕಾಪ್ಟರ್ ಅನ್ನು ಪತ್ತೆ ಹಚ್ಚಿದ ಕಾರ್ಯಾಚರಣೆಯ ಚಿತ್ರನೋಟ ಇಲ್ಲಿದೆ.
(1 / 10)
ಅರಸ್ ನದಿಗೆ ಇರಾನ್ ಮತ್ತು ಅಜೆರ್‌ಬೈಜಾನ್ ಜಂಟಿಯಾಗಿ ನಿರ್ಮಿಸಿದ ಮೂರನೇ ಅಣೆಕಟ್ಟು ಕ್ವಿಜ್ ಖಲಾಸಿಯನ್ನು ಉದ್ಘಾಟಿಸುವುದಕ್ಕೆಂದು ಮೇ 19 ರಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (ಧ್ವಜದ ಪಕ್ಕದಲ್ಲೇ ಇರುವವರು) ಹೋಗಿದ್ದರು. ಉದ್ಘಾಟನಾ ಸಮಾರಂಭದ ಸಂದರ್ಭ ಇದು.
(AFP)(2 / 10)
ಇರಾನ್‌ನ ಸರ್ಕಾರಿ ಟೆಲಿವಿಷನ್ ಬಿಡುಗಡೆ ಮಾಡಿದ ಮೇ 19ರ ವಿಡಿಯೋ ದೃಶ್ಯದ ಚಿತ್ರ ಇದು. ಇದರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್‌ನಲ್ಲಿ ಪೂರ್ವ ಅಜೆರ್ಬೈಜಾನ್ನ ಪಶ್ಚಿಮ ಪ್ರಾಂತ್ಯದ ಜೊಲ್ಫಾ ಪ್ರದೇಶದಲ್ಲಿ ಪ್ರಯಾಣಿಸಿರುವುದನ್ನು ತೋರಿಸುತ್ತದೆ.
(AFP)(3 / 10)
ಮೋಜ್ ನ್ಯೂಸ್ ಏಜೆನ್ಸಿ ಒದಗಿಸಿದ ಈ ಫೋಟೋದಲ್ಲಿ, ವಾಯವ್ಯ ಇರಾನ್‌ನ ವರ್ಜಾಘಾನ್‌ನಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನವಾದ ಬಳಿಕ ಬಂದ ರಕ್ಷಣಾ ತಂಡಗಳ ವಾಹನಗಳು ನೋಟವನ್ನು ಕಾಣಬಹುದು.
(via AP)(4 / 10)
ಇರಾನಿನ ರೆಡ್ ಕ್ರೆಸೆಂಟ್ ಇಂದು (ಮೇ 20) ಬಿಡುಗಡೆ ಮಾಡಿದ ವೀಡಿಯೊದ ಇಮೇಜ್ ಇದಾಗಿದೆ. ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಸ್ಥಳದಲ್ಲಿ ಶೋಧ ಮತ್ತು ಪಾರುಗಾಣಿಕಾ ತಂಡದ ಸದಸ್ಯರನ್ನು ಕಾಣಬಹುದು.
(AFP)(5 / 10)
ಮೊಜ್ ನ್ಯೂಸ್ ಮೇ 19ರಂದು ಒದಗಿಸಿದ ಈ ಫೋಟೋದಲ್ಲಿ, ಪೂರ್ವ ಅಜರ್‌ಬೈಜಾನ್‌ನ ಪಶ್ಚಿಮ ಪ್ರಾಂತ್ಯದ ಜೊಲ್ಫಾ ಪ್ರದೇಶದಲ್ಲಿ ಇರಾನ್ ಅಧ್ಯಕ್ಷರ ಹೆಲಿಕಾಪ್ಟರ್ "ಅಪಘಾತ" ಸಂಭವಿಸಿದ ಸ್ಥಳಕ್ಕೆ ಹೋಗುವ ಮೊದಲು ರಕ್ಷಣಾ ಕಾರ್ಯಕರ್ತರು ಸೇರಿರುವುದು.
(AFP)(6 / 10)
ಇರಾನ್‌ನ್ ರೆಡ್ ಕ್ರೆಸೆಂಟ್ ಇಂದು ಬಿಡುಗಡೆ ಮಾಡಿದ ವಿಡಿಯೋದಲ್ಲಿನ ದೃಶ್ಯ ಇದು. ವಾಯವ್ಯ ಇರಾನ್‌ನ ಮಂಜಿನಿಂದ ಆವೃತವಾದ ಪರ್ವತ ಪ್ರದೇಶದಲ್ಲಿ ಕಾಣೆಯಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಅಪಘಾತದ ಸ್ಥಳಕ್ಕೆ ಶೋಧ ಮತ್ತು ಪಾರುಗಾಣಿಕಾ ತಂಡದ ಸದಸ್ಯರು ಪ್ರಯಾಣಿಸುತ್ತಿರುವುದು ಕಂಡುಬಂದಿದೆ.
(AFP)(7 / 10)
ಟರ್ಕಿಯ ಬೇರಕ್ತರ್ ಅಕಿನ್ಸಿ ಡ್ರೋನ್ ಸೋಮವಾರ ಮುಂಜಾನೆ ಶಾಖದ ಮೂಲವನ್ನು ಪತ್ತೆಹಚ್ಚಿದೆ, ಇದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನ ಅವಶೇಷಗಳದ್ದು ಎಂದು ನಂಬಲಾಯಿತು.
(TRT News)(8 / 10)
ರಕ್ಷಣಾ ತಂಡವು ಹೆಲಿಕಾಪ್ಟರ್ ಭಗ್ನಾವಶೇಷಗಳ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಆದರೆ, ಅಲ್ಲಿ ಯಾರೂ ಬದುಕಿ ಉಳಿದಿರುವುದು ಕಂಡುಬರಲಿಲ್ಲ.
(Tasnim news)(9 / 10)
ಇರಾನಿನ ರೆಡ್ ಕ್ರೆಸೆಂಟ್ ಇಂದು ಬಿಡುಗಡೆ ಮಾಡಿದ ವಿಡಿಯೋದ ಚಿತ್ರ ಇದು. ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ ಸ್ಥಳ ಇದರಲ್ಲಿ ಕಾಣಸಿಕ್ಕಿದೆ.
(AFP)ಇತರ ಗ್ಯಾಲರಿಗಳು