Ileana Dcruz: ಕತ್ರಿನಾ ಕೈಫ್ ಅಣ್ಣನ ಜತೆ ಇಲಿಯಾನಾ ಲವ್ವಿ ಡವ್ವಿ? ಹೀಗೊಂದು ಗುಮಾನಿ...
- ಬಾಲಿವುಡ್ನಲ್ಲಿ ಲವ್, ಬ್ರೇಕ್ಅಪ್, ಡೇಟಿಂಗ್, ಡಿವೋರ್ಸ್ಗಳು ಸರ್ವೇ ಸಾಮಾನ್ಯ. ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ ನಟಿ ಇಲಿಯಾನಾ ಡಿಕ್ರೂಝ್. ಅದಕ್ಕೆ ಸಾಕ್ಷ್ಯ ಎಂಬಂತೆ ಒಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿವೆ. ಕತ್ರಿನಾ ಕೈಫ್ ಅಣ್ಣನ ಜತೆಗೆ ಲವ್ನಲ್ಲಿ ಬಿದ್ದಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿವೆ.

(1 / 7)
ಕತ್ರಿನಾ ಕೈಫ್ ಶನಿವಾರವಷ್ಟೇ 39ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪತಿ ವಿಕ್ಕಿ ಕೌಶಲ್ ಜತೆಗೆ ಬರ್ತ್ಡೇ ಆಚರಿಸಲು ಮಾಲ್ಡೀವ್ಸ್ಗೆ ತೆರಳಿದ್ದಾರೆ. ಆ ಸಂಭ್ರಮದ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
(2 / 7)
ಇದೇ ಮಾಲ್ಡೀವ್ಸ್ ಪಾರ್ಟಿಯಲ್ಲಿ ಕೇವಲ ಕತ್ರಿನಾ ಮತ್ತು ವಿಕ್ಕಿ ಮಾತ್ರವಲ್ಲ ಇನ್ನೂ ಅನೇಕರು ಕಾಣಿಸಿದ್ದಾರೆ. ಕತ್ರಿನಾ, ವಿಕ್ಕಿ ಕುಟುಂಬವೂ ಫೋಟೋದಲ್ಲಿದೆ.
(3 / 7)
ಇದೆಲ್ಲದರ ನಡುವೆ ಕತ್ರಿನಾ ಹಂಚಿಕೊಂಡಿರುವ ಫೋಟೋಗಳಲ್ಲಿ ಇಲಿಯಾನಾ ಡಿಕ್ರೋಸ್ ಸಹ ಅಚ್ಚರಿಯ ಹಾಜರಿ ಹಾಕಿದ್ದಾರೆ. ಅಷ್ಟೇ ಅಲ್ಲ ಕತ್ರಿನಾಗೆ ಶುಭಾಶಯವನ್ನೂ ಕೋರಿದ್ದಾರೆ.
(4 / 7)
ಕತ್ರಿನಾ ಕುಟುಂಬದ ಜತೆಗಿನ ಇಲಿಯಾನಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಬಗೆಬಗೆ ರೀತಿಯ ಕಮೆಂಟ್ಗಳು ಸಂದಾಯವಾಗಿವೆ. ಇಲಿಯಾನಾ ಸದ್ಯ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿನ್ ಜೊತೆ ಪ್ರೀತಿಯಲ್ಲಿದ್ದಾರೆ, ಇಬ್ಬರೂ ಡೇಟ್ ಮಾಡುತ್ತಿದ್ದಾರೆ ಎಂಬ ಗುಮಾನಿಯೂ ಇದೆ.
(5 / 7)
ಸದ್ಯ ಈ ವಿಚಾರವಾಗಿ ಎಲ್ಲಿಯೂ ಕತ್ರಿನಾ ಅಣ್ಣ ಸೆಬಾಸ್ಟಿಯನ್ ಆಗಲಿ, ಇಲಿಯಾನಾ ಆಗಲಿ ಹೇಳಿಕೊಂಡಿಲ್ಲ. ನೆಟ್ಟಿಗರು ಮಾತ್ರ ಏನೋ ಇದೆ ಎಂಬಂತೆ ಕಮೆಂಟ್ ರವಾನಿಸುತ್ತಿದ್ದಾರೆ.
ಇತರ ಗ್ಯಾಲರಿಗಳು