Rahul Gandhi Disqualification Scenarios: ರಾಹುಲ್ ಗಾಂಧಿ ಮತ್ತೆ ಸಂಸದರಾಗಿ ಮುಂದುವರಿಯೋ ಅವಕಾಶ ಇದಿಯಾ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rahul Gandhi Disqualification Scenarios: ರಾಹುಲ್ ಗಾಂಧಿ ಮತ್ತೆ ಸಂಸದರಾಗಿ ಮುಂದುವರಿಯೋ ಅವಕಾಶ ಇದಿಯಾ?

Rahul Gandhi Disqualification Scenarios: ರಾಹುಲ್ ಗಾಂಧಿ ಮತ್ತೆ ಸಂಸದರಾಗಿ ಮುಂದುವರಿಯೋ ಅವಕಾಶ ಇದಿಯಾ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಕಾನೂನು ಮತ್ತು ರಾಜಕೀಯ ಹೋರಾಟಕ್ಕೆ ಮುಂದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಮತ್ತೆ ಸಂಸದ ಸ್ಥಾನ ಪಡೆಯಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇದಿಯಾ ಎಂಬ ಪ್ರಶ್ನೆಗಳು ಎದುರಾಗಿವೆ.

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸಂವಿಧಾನದ 102(1)(ಇ) ಕಲಂ ಅಡಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ದೋಷಿ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 1951 ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 (3) ರ ಪ್ರಕಾರ ರಾಹುಲ್ ಅವರನ್ನು ತಕ್ಷಣವೇ ಸಂಸತ್ ಸ್ಥಾನವನ್ನು ವಜಾಗೊಳಿಸಲಾಗಿದೆ. ಹೀಗಿರುವಾಗ ರಾಹುಲ್ ಗಾಂಧಿ ಮತ್ತೆ ಸಂಸತ್ ಸದಸ್ಯರಾಗಿ ಮುಂದುವರೆಯಬಹುದೇ ಪ್ರಶ್ನೆಗಳು ಎದ್ದಿವೆ.
icon

(1 / 6)

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸಂವಿಧಾನದ 102(1)(ಇ) ಕಲಂ ಅಡಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ದೋಷಿ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 1951 ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 (3) ರ ಪ್ರಕಾರ ರಾಹುಲ್ ಅವರನ್ನು ತಕ್ಷಣವೇ ಸಂಸತ್ ಸ್ಥಾನವನ್ನು ವಜಾಗೊಳಿಸಲಾಗಿದೆ. ಹೀಗಿರುವಾಗ ರಾಹುಲ್ ಗಾಂಧಿ ಮತ್ತೆ ಸಂಸತ್ ಸದಸ್ಯರಾಗಿ ಮುಂದುವರೆಯಬಹುದೇ ಪ್ರಶ್ನೆಗಳು ಎದ್ದಿವೆ.(HT_PRINT)

ಲೋಕಸಭೆಯ ಸೆಕ್ರೆಟರಿಯೇಟ್ ಪ್ರಕಾರ, ರಾಹುಲ್ ಗಾಂಧಿ ಅವರು ಸೂರತ್ ಕೋರ್ಟ್ ತೀರ್ಪು ವಿರುದ್ಧ ಹೈಕೋರ್ಟ್‌ಗೆ ಮೊರೆ ಹೋಗಿ ಅಲ್ಲಿ ನಿರಪರಾಧಿ ಎಂದು ಕಂಡುಬಂದರೆ, ಅವರ ಸಂಸದೀಯ ಸ್ಥಾನ ಅಮಾನತು ಮಾಡಿರುವುದಕ್ಕೆ ಹಿಂದಕ್ಕೆ ಪಡೆಯಬಹುದು. ಆದರೆ, ಹೈಕೋರ್ಟ್ ಕೇವಲ ಜೈಲು ಶಿಕ್ಷೆಯನ್ನ ಅಮಾನತುಗೊಳಿಸಿದರೆ ಅವರನ್ನು ಮತ್ತೆ ಸಂಸರನ್ನಾಗಿಸಲು ಅವಕಾಶ ಇಲ್ಲ ಎಂದು ಹೇಳಲಾಗಿದೆ.
icon

(2 / 6)

ಲೋಕಸಭೆಯ ಸೆಕ್ರೆಟರಿಯೇಟ್ ಪ್ರಕಾರ, ರಾಹುಲ್ ಗಾಂಧಿ ಅವರು ಸೂರತ್ ಕೋರ್ಟ್ ತೀರ್ಪು ವಿರುದ್ಧ ಹೈಕೋರ್ಟ್‌ಗೆ ಮೊರೆ ಹೋಗಿ ಅಲ್ಲಿ ನಿರಪರಾಧಿ ಎಂದು ಕಂಡುಬಂದರೆ, ಅವರ ಸಂಸದೀಯ ಸ್ಥಾನ ಅಮಾನತು ಮಾಡಿರುವುದಕ್ಕೆ ಹಿಂದಕ್ಕೆ ಪಡೆಯಬಹುದು. ಆದರೆ, ಹೈಕೋರ್ಟ್ ಕೇವಲ ಜೈಲು ಶಿಕ್ಷೆಯನ್ನ ಅಮಾನತುಗೊಳಿಸಿದರೆ ಅವರನ್ನು ಮತ್ತೆ ಸಂಸರನ್ನಾಗಿಸಲು ಅವಕಾಶ ಇಲ್ಲ ಎಂದು ಹೇಳಲಾಗಿದೆ.(ANI)

ರಾಹುಲ್ ಅವರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಿರುವುದರಿಂದ ಅವರು ಪ್ರತಿನಿಧಿಸಿದ್ದ ಕೇರಳದ ವಯನಾಡ್ ಸ್ಥಾನ ತೆರವಾಗಿದೆ. ನಿಯಮದ ಪ್ರಕಾರ ಲೋಕಸಭೆ ಚುನಾವಣೆಗೆ ಇನ್ನೂ ಒಂದು  ವರ್ಷ ಸಮಯ ಇರುವ ಕಾರಣ ಚುನಾವಣಾ ಆಯೋಗ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಬೇಕಿದೆ. ಮುಂದಿನ 6 ತಿಂಗಳೊಳಗೆ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕು. ಆದರೆ ರಾಹುಲ್ ಗಾಂಧಿಗೆ ಕಾನೂನು ಮಾರ್ಗಗಳ ಮೂಲಕ ಪರಿಹಾರ ಪಡೆಯಲು 30 ದಿನಗಳಿರುವ ಕಾರಣ ಚುನಾವಣಾ ಆಯೋಗವು ಯಾವುದೇ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳುವುದಿಲ್ಲ ಎಂದು ತಜ್ಞರು ಹೇಳ್ತಿದ್ದಾರೆ.
icon

(3 / 6)

ರಾಹುಲ್ ಅವರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಿರುವುದರಿಂದ ಅವರು ಪ್ರತಿನಿಧಿಸಿದ್ದ ಕೇರಳದ ವಯನಾಡ್ ಸ್ಥಾನ ತೆರವಾಗಿದೆ. ನಿಯಮದ ಪ್ರಕಾರ ಲೋಕಸಭೆ ಚುನಾವಣೆಗೆ ಇನ್ನೂ ಒಂದು  ವರ್ಷ ಸಮಯ ಇರುವ ಕಾರಣ ಚುನಾವಣಾ ಆಯೋಗ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಬೇಕಿದೆ. ಮುಂದಿನ 6 ತಿಂಗಳೊಳಗೆ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕು. ಆದರೆ ರಾಹುಲ್ ಗಾಂಧಿಗೆ ಕಾನೂನು ಮಾರ್ಗಗಳ ಮೂಲಕ ಪರಿಹಾರ ಪಡೆಯಲು 30 ದಿನಗಳಿರುವ ಕಾರಣ ಚುನಾವಣಾ ಆಯೋಗವು ಯಾವುದೇ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳುವುದಿಲ್ಲ ಎಂದು ತಜ್ಞರು ಹೇಳ್ತಿದ್ದಾರೆ.(HT_PRINT)

ಕಾಂಗ್ರೆಸ್ ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ತಮ್ಮ ಸಂಸತ್ತ ಸ್ಥಾನವನ್ನು ಪಡೆಯಲು ರಾಷ್ಟ್ರಪತಿಗಳಿಗೆ ಮನವಿ ಮಾಡಬಹುದು. ನಿಯಮಗಳ ಪ್ರಕಾರ, ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಯಾವುದೇ ಸಂಸದರನ್ನು ವಜಾ ಮಾಡಬಹುದು. ಹೀಗಿರುವಾಗ ಅವರು ಯಾವುದೇ ಸಂಸದನನ್ನು ಅನರ್ಹಗೊಳಿಸಿರುವುದನ್ನು ವಾಪಸ್ ನೀಡಬಹುದು ಎಂಬುದು ಕಾಂಗ್ರೆಸ್ ನ ಅಭಿಪ್ರಾಯ. ಆದರೆ, ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್ ಈ ಮಾರ್ಗವನ್ನ ಅನುಸರಿಸುತ್ತದೆಯೇ ಎಂಬುದು ದೆಹಲಿಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
icon

(4 / 6)

ಕಾಂಗ್ರೆಸ್ ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ತಮ್ಮ ಸಂಸತ್ತ ಸ್ಥಾನವನ್ನು ಪಡೆಯಲು ರಾಷ್ಟ್ರಪತಿಗಳಿಗೆ ಮನವಿ ಮಾಡಬಹುದು. ನಿಯಮಗಳ ಪ್ರಕಾರ, ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಯಾವುದೇ ಸಂಸದರನ್ನು ವಜಾ ಮಾಡಬಹುದು. ಹೀಗಿರುವಾಗ ಅವರು ಯಾವುದೇ ಸಂಸದನನ್ನು ಅನರ್ಹಗೊಳಿಸಿರುವುದನ್ನು ವಾಪಸ್ ನೀಡಬಹುದು ಎಂಬುದು ಕಾಂಗ್ರೆಸ್ ನ ಅಭಿಪ್ರಾಯ. ಆದರೆ, ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್ ಈ ಮಾರ್ಗವನ್ನ ಅನುಸರಿಸುತ್ತದೆಯೇ ಎಂಬುದು ದೆಹಲಿಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.(AFP)

ರಾಹುಲ್ ಗಾಂಧಿಗೆ ಗುಜರಾತ್ ಕೋರ್ಟ್ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಬಳಿಕ ಅವರ ಎಂಪಿ ಸ್ಥಾನವನ್ನ ಅನರ್ಹಗೊಳಿಸಲಾಗಿದೆ.  ಲೋಕಸಭೆಯ ಕಾರ್ಯದರ್ಶಿ ರಾಗಾ ಅವರ ಸಂಸದೀಯ ಸ್ಥಾನವನ್ನು ಅನರ್ಹಗೊಳಿಸುವ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದರು. 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, 'ಮೋದಿಗಳೆಲ್ಲ ಏಕೆ ಕಳ್ಳರು?' ಎಲ್ಲರೂ ‘ಮೋದಿ’ ಪದವನ್ನು ಇಟ್ಟುಕೊಂಡಿರುತ್ತಾರೆ ಎಂಬ ದೂರ ಹಿನ್ನೆಲೆ ಕೇಸ್ ದಾಖಲಾಗಿತ್ತು. ರಾಹುಲ್ ಗಾಂಧಿ ತಪ್ಪಿತಸ್ಥ ಎಂದು ಸೂರತ್ ಕೋರ್ಟ್ ತೀರ್ಪು ನೀಡಿತ್ತು.
icon

(5 / 6)

ರಾಹುಲ್ ಗಾಂಧಿಗೆ ಗುಜರಾತ್ ಕೋರ್ಟ್ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಬಳಿಕ ಅವರ ಎಂಪಿ ಸ್ಥಾನವನ್ನ ಅನರ್ಹಗೊಳಿಸಲಾಗಿದೆ.  ಲೋಕಸಭೆಯ ಕಾರ್ಯದರ್ಶಿ ರಾಗಾ ಅವರ ಸಂಸದೀಯ ಸ್ಥಾನವನ್ನು ಅನರ್ಹಗೊಳಿಸುವ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದರು. 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, 'ಮೋದಿಗಳೆಲ್ಲ ಏಕೆ ಕಳ್ಳರು?' ಎಲ್ಲರೂ ‘ಮೋದಿ’ ಪದವನ್ನು ಇಟ್ಟುಕೊಂಡಿರುತ್ತಾರೆ ಎಂಬ ದೂರ ಹಿನ್ನೆಲೆ ಕೇಸ್ ದಾಖಲಾಗಿತ್ತು. ರಾಹುಲ್ ಗಾಂಧಿ ತಪ್ಪಿತಸ್ಥ ಎಂದು ಸೂರತ್ ಕೋರ್ಟ್ ತೀರ್ಪು ನೀಡಿತ್ತು.(PTI)

ಇದು ಕ್ರಿಮಿನಲ್ ಪ್ರಕರಣವಾಗಿರುವುದರಿಂದ ಸೆಷನ್ ನ್ಯಾಯಾಲಯದ ನಿರ್ದೇಶನದ ವಿರುದ್ಧ ರಾಹುಲ್ ನೇರವಾಗಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಹೋಗಲು ಸಾಧ್ಯವಿಲ್ಲ. ಕಾಂಗ್ರೆಸ್ ದೊಡ್ಡ ಸಾರ್ವಜನಿಕ ಹಿತಾಸಕ್ತಿಗಳನ್ನು ಉಲ್ಲೇಖಿಸಿ ಗುಜರಾತ್ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.
icon

(6 / 6)

ಇದು ಕ್ರಿಮಿನಲ್ ಪ್ರಕರಣವಾಗಿರುವುದರಿಂದ ಸೆಷನ್ ನ್ಯಾಯಾಲಯದ ನಿರ್ದೇಶನದ ವಿರುದ್ಧ ರಾಹುಲ್ ನೇರವಾಗಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಹೋಗಲು ಸಾಧ್ಯವಿಲ್ಲ. ಕಾಂಗ್ರೆಸ್ ದೊಡ್ಡ ಸಾರ್ವಜನಿಕ ಹಿತಾಸಕ್ತಿಗಳನ್ನು ಉಲ್ಲೇಖಿಸಿ ಗುಜರಾತ್ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.(PTI)


ಇತರ ಗ್ಯಾಲರಿಗಳು