ಮೈಸೂರಿನಿಂದ ಕೊಯಮತ್ತೂರಿಗೆ ಹೊರಟಿತು ಶಿವಯಾತ್ರೆ 2025; ಇಶಾ ಫೌಂಡೇಷನ್‌ನಿಂದ 37 ದಿನಗಳ 650 ಕಿ.ಮಿ. ದಕ್ಷಿಣ ಭಾರತ ಯಾತ್ರೆ
- SHIVA YATRA 2025: ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಇಶಾ ಫೌಂಡೇಷನ್ ಶಿವರಾತ್ರಿ ಭಾಗವಾಗಿ ಶಿವಯಾತ್ರೆ 2025 ಅನ್ನು ರೂಪಿಸಿದೆ. ಮೈಸೂರಿನಿಂದ ಕೊಯಮತ್ತೂರುವರೆಗೆ ಇದು ಸಂಚರಿಸಲಿದೆ.
- SHIVA YATRA 2025: ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಇಶಾ ಫೌಂಡೇಷನ್ ಶಿವರಾತ್ರಿ ಭಾಗವಾಗಿ ಶಿವಯಾತ್ರೆ 2025 ಅನ್ನು ರೂಪಿಸಿದೆ. ಮೈಸೂರಿನಿಂದ ಕೊಯಮತ್ತೂರುವರೆಗೆ ಇದು ಸಂಚರಿಸಲಿದೆ.
(1 / 8)
ಜಗ್ಗಿ ವಾಸುದೇವ ಅವರ ಇಶಾ ಫೌಂಡೇಷನ್ ಒಂದಿಲ್ಲೊಂದು ಚಟುವಟಿಕೆ ರೂಪಿಸುತ್ತದೆ. ಅದು ಧಾರ್ಮಿಕ ಇಲ್ಲವೇ ಜಾಗೃತಿ ಚಟುವಟಿಕೆಯೂ ಆಗಿರಲಿದೆ. ಮೈಸೂರಿನಿಂದ ಕೊಯಮತ್ತೂರಿಗೆ ಶಿವ ಯಾತ್ರೆಯನ್ನು ರೂಪಿಸಿದೆ.
(2 / 8)
ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಇಶಾ ಫೌಂಡೇಷನ್ ನಿಂದ ದಕ್ಷಿಣದ ಕೈಲಾಸ" ಎಂದು ಕರೆಯಲಾಗಿರುವ ವೆಲ್ಲಿಯಂಗಿರಿ ಪರ್ವತದ ಕಡೆಗೆ ಬಹು ನಿರೀಕ್ಷಿತ ತೀರ್ಥಯಾತ್ರೆಯಾದ ಶಿವ-ಯಾತ್ರೆಯು ಇಂದು ಮೈಸೂರಿನಿಂದ ಪ್ರಾರಂಭವಾಯಿತು.
(3 / 8)
ಯಾತ್ರೆಯು 650 ಕಿಲೋಮೀಟರ್‌ಗಳಷ್ಟು ದಾರಿ ಸಂಚರಿಸಲಿದ್ದು, 37 ದಿನಗಳ ಪ್ರಯಾಣವನ್ನು ಒಳಗೊಂಡಿರಲಿದೆ ಮತ್ತು ಮಹಾಶಿವರಾತ್ರಿ ಆಚರಣೆಗೆ 2 ದಿನಗಳ ಮೊದಲು 2025ರ ಫೆಬ್ರವರಿ 24, ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಮುಕ್ತಾಯಗೊಳ್ಳುತ್ತದೆ.
(6 / 8)
ಶಿವ ಸರ್ವಾಂತರ್ಯಾಮಿ. ಆತನ ವಿಚಾರಗಳು ನಮ್ಮನ್ನು ಸದಾ ಜಾಗೃತವಾಗಿಡುತ್ತವೆ. ಶಿವನನ್ನು ನಂಬಿದರೆ ಭಯವಿಲ್ಲ ಎನ್ನುವ ಆಶಯದೊಂದಿಗೆ ಈ ಶಿವಯಾತ್ರೆಯನ್ನು ನಡೆಸಿ ಶಿವನ ಕುರಿತು ಜಾಗೃತಿಯನ್ನು ಮಾರ್ಗದುದ್ದಕ್ಕೂ ಮಾಡಲಾಗುತ್ತದೆ.
(7 / 8)
ಇಶಾ ಫೌಂಡೇಷನ್‌ನ ಭಕ್ತರು, ಹಾಗೂ ಅಲ್ಲಿನ ತಂಡದ ಸದಸ್ಯರು, ವಿಶಿಷ್ಟವಾಗಿ ರೂಪಿಸಿರುವ ವಾಹನವು ಮೈಸೂರು ನಗರದ ಹಲವು ಕಡೆ ಸಂಚರಿಸಿದೆ.
ಇತರ ಗ್ಯಾಲರಿಗಳು